ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ

By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ಜನವರಿ 4: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಬೆಂಗಳೂರಿನಲ್ಲಿ ನಡೆದ ಪುಂಡಾಟಿಕೆ ಬಗ್ಗೆ ದೇಶದಾದ್ಯಂತ ಆಕ್ಷೇಪ, ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ನಗರದ ಕಮ್ಮನಹಳ್ಳಿಯಲ್ಲಿ ಹೊಸ ವರ್ಷದಂದೇ ಯುವತಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಬೆಳಕಿಗೆ ಬಂದಿದ್ದು, ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಾವಳಿಗಳು ಸೆರೆಯಾಗಿವೆ.

ಮನೆಗೆ ಹಿಂತಿರುಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿದ ಇಬ್ಬರು ಬೈಕ್ ಸವಾರರು ಆಕೆ ಮೇಲೆ ದೌರ್ಜನ್ಯ ನಡೆಸಿ, ಎಳೆದಾಡಿದ ದೃಶ್ಯವು ದಾಖಲಾಗಿದೆ. ಆಟೋರಿಕ್ಷಾದಿಂದ ಯುವತಿ ಕೆಳಗೆ ಇಳಿಯುತ್ತಾಳೆ. ಆ ನಂತರ ಮನೆ ಕಡೆಗೆ ನಡೆದು ಹೋಗುವಾಗ ಆಕೆಯನ್ನು ತಡೆದ ಇಬ್ಬರು ಬೈಕ್ ಸವಾರರ ಪೈಕಿ ಒಬ್ಬ, ಬಲವಂತವಾಗಿ ತಬ್ಬಿಕೊಳ್ಳುತ್ತಾನೆ.[ಬೆಂಗಳೂರು ಲೈಂಗಿಕ ದೌರ್ಜನ್ಯ : ತಪ್ಪಿತಸ್ಥರ ವಿರುದ್ಧ ಎಫ್ಐಆರ್]

Shocking: CCTV captures brazen molestation in Bengaluru

ಆ ನಂತರ ಬೈಕ್ ನಲ್ಲಿ ಕುಳಿತಿದ್ದ ಮತ್ತೊಬ್ಬನ ಬಳಿಗೆ ಎಳೆದೊಯ್ಯುತ್ತಾನೆ. ಇಬ್ಬರೂ ಸೇರಿ ಆಕೆಯ ಮೇಲೆ ದೈಹಿಕವಾಗಿ ದೌರ್ಜನ್ಯ ಮಾಡುತ್ತಾರೆ. ಆ ನಂತರ ಯುವತಿಯನ್ನು ರಸ್ತೆಗೆ ತಳ್ಳಿ ವೇಗವಾಗಿ ಬೈಕ್ ನಲ್ಲಿ ತೆರಳುತ್ತಾರೆ. ಈ ಎಲ್ಲ ದೃಶ್ಯಾವಳಿ ಮನೆಯೊಂದರ ಸಿಸಿಟಿವಿಯಿಂದ ಗೊತ್ತಾಗಿದೆ.[ಕನಿಷ್ಠ ಉಡುಪೇ ಮಹಿಳೆಯರ ತೊಂದರೆಗೆ ಕಾರಣ: ಅಜ್ಮಿ]

ತನಗೆ ಆ ಇಬ್ಬರಿಂದ ಮತ್ತೆ ತೊಂದರೆ ಆಗಬಹುದು ಎಂದು ಹೆದರಿದ ಯುವತಿ ದೂರು ದಾಖಲಿಸಿಲ್ಲ. ಆದರೂ ಈ ಘಟನೆ ಪೊಲೀಸರಿಗೆ ತಿಳಿದುಬಂದಿದೆ. ಬೆಂಗಳೂರಿನಲ್ಲಿ ಮಹಿಳೆಯರ ಸ್ಥಿತಿ ಹೇಗಿದೆ ಎಂಬುದು ಈಗಲಾದರೂ ಜನಪ್ರತಿನಿಧಿಗಳಿಗೆ ಅರಿವಾಗಬಹುದಾ? ತಪ್ಪಿತಸ್ಥರನ್ನು ಪೊಲೀಸರು ಬಂಧಿಸಬಹುದಾ? ಸಿಸಿಟಿವಿ ಫೂಟೇಜ್ ಸಾಕ್ಷ್ಯ ಸಾಲದಾ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
While the country is outraging over mass molestation allegations during New year revelry in Bengaluru, a shocking CCTV footage from another part of the city stands witness to the brazen attitude of attackers. The video was recorded by a CCTV in a house in Kammanahalli, a residential locality in the city.
Please Wait while comments are loading...