ಶಿವಸೇನಾ ಅಭ್ಯರ್ಥಿಗಳ ಪಟ್ಟಿ ಪ್ರಕಟ: 19 ಕ್ಷೇತ್ರಗಳಲ್ಲಿ ಸ್ಪರ್ಧೆ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 14: ಮಹಾರಾಷ್ಟ್ರದ ಶಿವಸೇನಾ ಪಕ್ಷ ಕರ್ನಾಟಕದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾಗಿದೆ. ಆದರೆ ಅಚ್ಚರಿ ಎಂದರೆ, ಶಿವಸೇನಾ ಪಕ್ಷದಿಂದ ಸ್ಪರ್ಧಿಸುವುದಾಗಿ ಹೇಳಿದ್ದ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರ ಹೆಸರು ಪಟ್ಟಿಯಲ್ಲಿ ಕಣ್ಮರೆಯಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಶಿವಸೇನಾ ರಾಜ್ಯ ಘಟಕ ಶನಿವಾರ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಇನ್ನಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವುದಾಗಿ ಪಕ್ಷ ತಿಳಿಸಿದೆ.

Shivasena will contest in 19 constituencie in Karnataka

ಅಭ್ಯರ್ಥಿಗಳ ವಿವರ ಇಂತಿದೆ: ಕಲಘಟಗಿ-ಈರಣ್ಣ ಕಾಳೆ, ಧಾರವಾಡ ಶಹರ-ಈಶ್ವರಗೌಡ ಪಾಟೀಲ್, ನರಗುಂದ- ದಾನು ದಾನಪ್ಪಗೌಡರ, ಹಾಸನ-ಹೇಮಂತ ಜಾನಕೆರೆ, ಶೃಂಗೇರಿ-ಮಹೇಶಕುಮಾರ್ ಕೊಪ್ಪ, ಉಡುಪಿ-ಮಧುಕರ ಮುದರಡ್ಡಿ, ಮಂಗಳೂರು-ಆನಂದ ಶೆಟ್ಟಿ ಅಡ್ಡಿಯಾರ, ಹೆಬ್ಬಾಳ-ಟಿ.ಜಯಕುಮಾರ, ತಿಪಟೂರು- ಸಂತೋಷಕುಮಾರ ಬೈರಟ್ಟಿ, ಕನಕಗಿರಿ- ಕೆ.ಬಾಲಪ್ಪ, ಜಮಖಂಡಿ- ವಾಸುದೇವ ಪಾರಸ್, ಯಾದಗಿರಿ-ವಿಜಯಕುಮಾರ ಪಾಟೀಲ್, ಸುರಪುರ(ಎಸ್‌ಟಿ ಮೀಸಲು)-ರಾಜಾ ಪಿಡ್ಡನಾಯಕ, ರಾಯಚೂರು-ರಾಜಾಚಂದ್ರ ರಾಮನಗೌಡರ, ಶಿರಸಿ-ಆಕಾಶ, ಸವದತ್ತಿ-ಜಯಶಂಕರ ವಣ್ಣೂರ, ಕುಡಚಿ- ತಾವರ್‌ಸಿಂಗ್ ಠಾಕೂರ್, ಹುಕ್ಕೇರಿ-ಸುಭಾಸಬಾಮು ಕಾಸರಕರ್, ಭಾಲ್ಕಿ- ವೆಂಕಟರಾವ್ ಬಿರಾದಾರ್ ಸ್ಪರ್ಧಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shivasena has released its list of 9 candidates for state assembly poll on Saturday. The party has focused mainly in Mumbai Karnataka area.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ