ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಾನಂದ ಸ್ಟೀಲ್‌ ಬ್ರಿಡ್ಜ್‌ ಕಾಮಗಾರಿ 8 ತಿಂಗಳಲ್ಲಿ ಪೂರ್ಣ

By Nayana
|
Google Oneindia Kannada News

ಬೆಂಗಳೂರು, ಜು.3: ನಗರದ ಶಿವಾನಂದ ವೃತ್ತದಲ್ಲಿ ನಿರ್ಮಿಸುತ್ತಿರುವ ಸ್ಟೀಲ್‌ ಬ್ರಿಡ್ಜ್‌ ಕಾಮಗಾರಿ ಇನ್ನು 8 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮೇಯರ್‌ ಸಂಪತ್‌ರಾಜ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಖಚಿತ! ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಖಚಿತ!

ಶಿವಾನಂದ ವೃತ್ತ ಬಳಿ 42.45 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸ್ಟೀಲ್‌ ಬ್ರಿಡ್ಜ್‌ ಕಾಮಗಾರಿ ವೀಕ್ಷಿಸಿದರು, ನಿಗದಿತ ಕಾಲ ಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಟೆಂಡರ್‌ ಶ್ಐರ್‌ ಯೋಜನೆಯಡಿ ಒಟ್ಟಾರೆ 129.35 ಕೋಟಿ ರೂ. ವೆಚ್ಚದಲ್ಲಿ 15 ರಸ್ತೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.

ಮಿನರ್ವ ವೃತ್ತದಲ್ಲಿ ಶೀಘ್ರದಲ್ಲಿ ಉಕ್ಕಿನಸೇತುವೆ ಕಾಮಗಾರಿ ಆರಂಭ ಮಿನರ್ವ ವೃತ್ತದಲ್ಲಿ ಶೀಘ್ರದಲ್ಲಿ ಉಕ್ಕಿನಸೇತುವೆ ಕಾಮಗಾರಿ ಆರಂಭ

Shivanand circle steel bridge will be ready within 8 months

ಪ್ರಮುಖ ಸಂಚಾರ ದಟ್ಟಣೆ ಪ್ರದೇಶವಾದ ಮೆಜೆಸ್ಟಿಕ್‌ ಸುತ್ತಮುತ್ತಲ ಪ್ರಮುಖ ರಸ್ತೆಗಳ ಕಾಮಗಾರಿಗಳನ್ನು 2019ರ ಸೆಪ್ಟೆಂಬರ್‌ ವೇಳೆಗೆ ಪೂರ್ಣಗೊಳಸಲು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮೆಜೆಸ್ಟಿಕ್‌ ಸುತ್ತಮುತ್ತಲಿನ ಸುಬೇದಾರ್‌ ಛತ್ರ ರಸ್ತೆ, ಧನ್ವಂತರಿ ರಸ್ತೆ, ಗುಬ್ಬಿ ತೋಟದಪ್ಪ ರಸ್ತೆ, ಗುಂಡಪ್ಪ ರಸ್ತೆ, ಕಾಟನ್‌ ಪೇಟೆ ಮುಖ್ಯರಸ್ತೆಗಳನ್ನು ಟೆಂಡರ್‌ ಶ್ಯೂರ್‌ ನಡಿ ಅಭಿವೃದ್ಧಿ ಪಡಿಸಲು ನಿರ್ಣಯಿಸಲಾಗಿದೆ.

Shivanand circle steel bridge will be ready within 8 months

ಸ್ಟೀಲ್‌ ಬ್ರಿಡ್ಜ್‌ ಯೋಜನೆ ವಿರುದ್ಧ ಕೆಲ ಸ್ಥಳೀಯರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಕಾಮಗಾರಿ ವಿಳಂವಾಗಿದೆ. ನ್ಯಾಯಾಲಯದ ತೀರ್ಪಿನಂತೆ ಕಾಮಗಾರಿ ಮುಂದುವರೆದಿದ್ದು, ಉದ್ದವನ್ನು 126 ಮೀಟರ್‌ನಿಂದ 491 ಮೀ.ಗೆ ಹೆಚ್ಚಿಸಲಾಗಿದೆ. ಮುಂದಿನ ಎಂಟು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

English summary
Bengaluru mayor Sampth Raj has assured that steel bridge construction in Shivanand circle will be completed within eight months. The length of the steel bridge was extended 326 meters to 493 meters, he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X