'ದೇವರು ಅರೆಸ್ಟ್ ಆದ' ಕಥಾ ಸಂಕಲನ ಬಿಡುಗಡೆಗೆ ತಪ್ಪದೆ ಬನ್ನಿ

Posted By:
Subscribe to Oneindia Kannada

ಬೆಂಗಳೂರು,ಫೆಬ್ರವರಿ,19: ನೋಡಿ ಸ್ವಾಮಿ 'ದೇವರು ಅರೆಸ್ಟ್ ಆದ'. ಈ ವಾಕ್ಯ ಕೇಳುತ್ತಿದ್ದಾಗಲೇ ಯಾರು ಅರೆಸ್ಟ್ ಮಾಡಿದ್ರು, ಯಾವಾಗ, ಎಲ್ಲಿ, ಹೇಗೆ? ದೇವರನ್ನು ಅರೆಸ್ಟ್ ಮಾಡಲಿಕ್ಕೆ ಸಾಧ್ಯವಾ? ಎಂಬ ಹಲವಾರು ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಬಂದಿರುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ 'ದೇವರು ಅರೆಸ್ಟ್ ಆದ' ಎಂಬ ಕಥಾಸಂಕಲ.

ನಿಮ್ಮ ಆಶ್ಚರ್ಯ, ಕುತೂಹಲಗಳಿಗೆ ನೂತನ ಪ್ರತಿಭೆ ಶಿವಕುಮಾರ್ ಮಾವಲಿ ಅವರ ಚೊಚ್ಚಲ ಕೃತಿ 'ದೇವರು ಅರೆಸ್ಟ್ ಆದ' ಎಂಬ ಕಥಾ ಸಂಕಲನ ಉತ್ತರ ಕೊಡುವುದಕ್ಕೆ ಸಿದ್ಧವಾಗಿದೆ. ಇದರ ಲೋಕಾರ್ಪಣಾ ಸಮಾರಂಭವು ಪ್ರಕಾಶನ ಸಂಸ್ಥೆ ಅರವಿಂದ ಇಂಡಿಯಾ, ಬೆಂಗಳೂರು ಹಾಗೂ ಹೊಂಗಿರಣ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 21ರಂದು ಬೆಳಿಗ್ಗೆ 10.30ಕ್ಕೆ ನಗರ ಕೇಂದ್ರ ಗ್ರಂಥಾಲಯ ಸಭಾಂಗಣ, ಹಂಪಿ ನಗರ, ಬೆಂಗಳೂರು ಇಲ್ಲಿ ಜರುಗಲಿದೆ.

ಈ ಕಥಾ ಸಂಕಲನ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪತ್ರಕರ್ತರು ಹಾಗೂ ಕಥೆಗಾರರಾದ ಜೋಗಿ ಆಗಮಿಸಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಬಂಜಗೆರೆ ಜಯಪ್ರಕಾಶ ಅವರು ಅಧ್ಯಕ್ಷತೆ ವಹಿಸಲಿದ್ದು, ಈ ಕಥಾ ಸಂಕಲನದ ಕುರಿತು ಖ್ಯಾತ ನಾಟಕಕಾರರು, ರಂಗ ನಿರ್ದೇಶಕರಾದ ಡಾ. ಸಾಸ್ವೆಹಳ್ಳಿ ಸತೀಶ್ ಅವರು ಮಾತನಾಡಲಿದ್ದಾರೆ.['ಪ್ರಶಸ್ತಿ ಸಿಕ್ಕಿರುವುದು ನನಗಲ್ಲ, ನನ್ನ ಕೃತಿಗೆ': ಕೆವಿ ತಿರುಮಲೇಶ್]

Shivakumar Mavali's Short story collection release in Bengaluru

ಲೇಖಕ ಶಿವಕುಮಾರ್ ಮಾವಲಿ ಕುರಿತು:

ಪ್ರಸ್ತುತ ಬೆಂಗಳೂರಿನ ಆರ್.ಎನ್. ಎಸ್ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿವಕುಮಾರ್ ಮಾವಲಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನವರು. ಮೊದಲಿನಿಂದಲೂ ಸಾಹಿತ್ಯದಲ್ಲಿ ಹಿಡಿತ ಸಾಧಿಸಿದ ಇವರು ಇಂಗ್ಲೀಷಿನ ಹಲವಾರು ಕೃತಿ, ಪದ್ಯಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ರಂಗ ಚಟುವಟಿಕೆಗಳಲ್ಲಿ ಸದಾ ಸಕ್ರಿಯವಾಗಿದ್ದು, 'ದೇವರು ಅರೆಸ್ಟ್ ಆದ' ಕಥಾ ಸಂಕಲನದ ಮೂಲಕ ಸಾಹಿತ್ಯ ಲೋಕದಲ್ಲಿ ಯಶಸ್ಸಿನ ಹೆಜ್ಜೆ ಇಡಲು ಮುಂದಾಗಿದ್ದಾರೆ.[ಸಾಹಿತ್ಯ ವಿಮರ್ಶೆ ಅಂದರೆ ಏನು? ಏಕೆ? ಹೇಗೆ ಹುಟ್ಟಿತು?]

ಹೆಚ್ಚಿನ ಮಾಹಿತಿಗಾಗಿ:

ಶೀರ್ಷಿಕೆಯಿಂದಲೇ ಎಲ್ಲರ ಗಮನ ಸೆಳೆದಿರುವ 'ದೇವರು ಅರೆಸ್ಟ್ ಆದ' ಕಥಾ ಸಂಕಲನವು a4dable.in ಇಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಶಿವಕುಮಾರ್ ಮಾವಲಿ- 9164149495, mavalihere@gmail.com ಹಾಗೂ ಸಚಿನ್ - 9886346356 ಸಂಪರ್ಕಿಸಬಹುದು.[ಅವಿರತದಿಂದ ನಕ್ಕುನಗಿಸುವ ಶ್ರೀಕೃಷ್ಣ ಸಂಧಾನ ನಾಟಕ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
bengaluru RNS college Lecturer Shivakumar Mavali's new short story collection 'Devaru arrest aada' is getting release in Central library sabhangana, Hampi nagar, Bengaluru on Sunday February 21st, at 10.30 AM. Banjagere Jayaprakash, The president of Kannada Pustaka Pradhikar preside over and Journalist Girish Rao(Jogi) will release the book. Congratulations.
Please Wait while comments are loading...