'ರುದ್ರೇಶ್ ಏನು ಗೋಕಳ್ಳನಲ್ಲ, ಇದು ತಾಲಿಬಾನಿ ಮಾದರಿ ಹತ್ಯೆ'

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 17: ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಅವರ ಹತ್ಯೆ ಖಂಡಿಸಿ ಬಿಜೆಪಿ ಮುಖಂಡರು ಸೋಮವಾರದಂದು ಶಿವಾಜಿನಗರ ವ್ಯಾಪ್ತಿಯಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದಾರೆ.

ಸಾಮಾಜಿಕ ಜಾಲ ತಾಣಗಳಲ್ಲಿ #JusticeforRudresh ಎಂಬ ಟ್ಯಾಗ್ ಮೂಲಕ ಟ್ರೆಂಡ್ ಮಾಡಿ ನ್ಯಾಯಕ್ಕಾಗಿ ಆಗ್ರಹಿಸಲಾಗುತ್ತಿದೆ. ಇದು ತಾಲಿಬಾನಿಗಳ ಮಾದರಿ ಹತ್ಯೆ, ರುದ್ರೇಶ್ ಏನು ಗೋಕಳ್ಳನಲ್ಲ ಎಂದು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಹೊಸ ಗಣವೇಷ ತೊಟ್ಟು ಪಥ ಸಂಚಲನ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಆರೆಸ್ಸೆಸ್ ಕಾರ್ಯಕರ್ತರೊಬ್ಬರನ್ನು ಭಾನುವಾರದಂದು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಕೃತ್ಯವನ್ನು ಖಂಡಿಸಿ, ಶಿವಾಜಿನಗರದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

ಶಿವಾಜಿನಗರದ ನಿವಾಸಿಯಾಗಿದ್ದ ರುದ್ರೇಶ್ ಅವರು ಸಿವಿಲ್ ಕಂಟ್ರ್ಯಾಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ಗಣೇಶೋತ್ಸವದ ವೇಳೆ ಸ್ಥಳೀಯರೊಡನೆ ವಿರೋಧ ಕಟ್ಟಿಕೊಂಡಿದ್ದರು. ಹೀಗಾಗಿ ಹಳೆ ದ್ವೇಷದಿಂದ ಇವರ ಕೊಲೆಯಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.[ಶಿವಾಜಿನಗರದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಕಗ್ಗೊಲೆ]

ಪೊಲೀಸರ ಹೇಳಿಕೆಯನ್ನು ಖಂಡಿಸಿರುವ ಮಾಜಿ ಡಿಸಿಎಂ ಆರ್ ಅಶೋಕ್ ಅವರು ಮೃತ ವ್ಯಕ್ತಿಯ ಚಾರಿತ್ರ್ಯ ವಧೆ ಮಾಡುವ ಮೂಲಕ ತನಿಖೆಯ ದಿಕ್ಕು ತಪ್ಪಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಟ್ವಿಟ್ಟರ್ ನಲ್ಲಿ ಬಂದಿರುವ ಪ್ರತಿಕ್ರಿಯೆಗಳು ಮುಂದಿವೆ...

ಬಿಜೆಪಿ ಮುಖಂಡರಿಂದ ಭಾರಿ ಪ್ರತಿಭಟನೆ

ಬಿಜೆಪಿ ಮುಖಂಡರಿಂದ ಭಾರಿ ಪ್ರತಿಭಟನೆ

ಮಾಜಿ ಸಚಿವರಾದ ಸುರೇಶ್ ಕುಮಾರ್, ಆರ್ ಆಶೋಕ, ಶೋಭಾ ಕರಂದ್ಲಾಜೆ, ಪಿಸಿ ಮೋಹನ್, ಕಟ್ಟಾ ಸುಬ್ರಮಣ್ಯ ನಾಯ್ಡು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.

ಇದು ತಾಲಿಬಾನಿಗಳ ಮಾದರಿ ಹತ್ಯೆ ಎಂದ ಸಾರ್ವಜನಿಕರು

ಇದು ಅತ್ಯಂತ ಕ್ರೂರ ಕೃತ್ಯ, ತಾಲಿಬಾನಿ ಮಾದರಿ ಹತ್ಯೆ, ಆತ ಯಾರೊಬ್ಬರ ಮನೆ ಗೋವುಗಳನ್ನು ಕದ್ದಿರಲಿಲ್ಲ ಎಂದು ಟ್ವೀಟ್ ಮಾಡಿದ ಪೂನಮ್ ಚೌಧರಿ

ಬಿಜೆಪಿ ಟ್ವಿಟ್ಟರ್ ಖಾತೆಯಿಂದ ವಿವರ

ಬಿಜೆಪಿ ಟ್ವಿಟ್ಟರ್ ಖಾತೆಯಿಂದ ಪ್ರತಿಭಟನೆ ವಿವರ ಹಾಗೂ ಯಾವ ಯಾವ ನಾಯಕರು ಪಾಲ್ಗೊಂಡಿದ್ದರು ಎಂಬ ವರದಿ ನೀಡಲಾಗುತ್ತಿದೆ.

ಆರೆಸ್ಸೆಸ್- ಬಿಜೆಪಿ ಪ್ರತಿಭಟನೆ ಬಗ್ಗೆ ಎಎನ್ ಐ ವರದಿ

ಬೆಂಗಳೂರಿನ ಶಿವಾಜಿನಗರದಲ್ಲಿ ನಡೆದ ರುದ್ರೇಶ್ ಹತ್ಯೆ ಖಂಡಿಸಿ, ಸೋಮವಾರದಂದು ಆರೆಸ್ಸೆಸ್- ಬಿಜೆಪಿ ನಡೆಸಿರುವ ಪ್ರತಿಭಟನೆ ಬಗ್ಗೆ ಎಎನ್ ಐ ವರದಿ

ಪ್ರವೀಣ್ ಪೂಜಾರಿಗೂ ನ್ಯಾಯ ಸಿಗಬೇಕಿದೆ

ಪ್ರವೀಣ್ ಪೂಜಾರಿಗೂ ನ್ಯಾಯ ಸಿಗಬೇಕಿದೆ, ಬಿಜೆಪಿ ನಾಯಕರು ಪ್ರವೀಣ್ ಪೂಜಾರಿ ಪರ ದನಿ ಎತ್ತಲೇ ಇಲ್ಲ, ಗೋ ಭಯೋತ್ಪಾದಕರಿಂದ ಹತ್ಯೆಯಾದಾಗ ಇವರೆಲ್ಲ ಎಲ್ಲಿದ್ದರು.

ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಹತ್ಯಾಕಾಂಡ

ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಹತ್ಯಾಕಾಂಡ ಮುಂದುವರೆದಿದೆ. ಆರೆಸ್ಸೆಸ್ ಹಾಗೂ ಹಿಂದೂ ಪರಸಂಘನೆ ಕಾರ್ಯಕರ್ತರನ್ನು ಗುರಿಯನ್ನಾಗಿಸಿಕೊಂಡು ಆಡಳಿತ ಪಕ್ಷಗಳು ರಾಜಕೀಯ ದ್ವೇಷ ಮಾಡುತ್ತಿರುವುದು ಖಂಡನಾರ್ಹ.

ಇದು ರೆಡ್ ಟೆರರ್ ಕೃತ್ಯ ಎಂದ ಬಿಜೆಪಿ ನಾಯಕಿ ಲೇಖಿ

ಈ ಹಿಂದೆ ಚರ್ಚಿಸಿದಂತೆ ಇದು ರೆಡ್ ಟೆರರ್ ಕೃತ್ಯ ಎಂದ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: RSS-BJP leaders stage a protest and trend #JusticeforRudresh. A 35 year old RSS activist Rudresh was hacked to death on Sunday in Commercial Street police station limits.
Please Wait while comments are loading...