ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೋಷನ್ ಬೇಗ್ ಸಂಕ್ಷಿಪ್ತ ಪರಿಚಯ

|
Google Oneindia Kannada News

ಬೆಂಗಳೂರು, ಜ. 1 : ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್ ಬೇಗ್ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಸಂಪುಟ ದರ್ಜೆ ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ. ಜ.1ರ ಬುಧವಾರ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲರು ರೋಷನ್ ಬೇಗ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಆರ್ ರೋಷನ್ ಬೇಗ್ 15-07-1953 ರಂದು ಚಿಲ್ಲಮತ್ತೂರುನಲ್ಲಿ ಜನಿಸಿದರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬೇಗ್ ಬಿ.ಕಾಂ ಮತ್ತು ಎಲ್.ಎಲ್.ಬಿ ಪದವಿ ಪಡೆದಿದ್ದಾರೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದಾರೆ.

roshan baig

1985, 1994, 1999, 2002, 2004, 2008ರ ಚುನಾವಣೆಯಲ್ಲಿ ವಿಧಾನಸಭೆ ಪ್ರವೇಶಿಸಿದ್ದಾರೆ. 8ನೇ ವಿಧಾನಸಭೆಗೆ ಆಯ್ಕೆ ಆದ ರೋಷನ್ ಬೇಗ್, ಮೀನುಗಾರಿಕೆ ಬಂದರು ಮತ್ತು ವಕ್ಫ್ ಖಾತೆಗಳ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

1994 ರಿಂದ 1999ರ ವರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ವಕ್ಫ್ ಸಚಿವರಾಗಿ, ಗೃಹ ಮತ್ತು ವಕ್ಫ್ ಖಾತೆ ರಾಜ್ಯ ಸಚಿವರಾಗಿ ಹಾಗೂ ಪ್ರವಾಸೋದ್ಯಮ ಸಚಿವರಾಗಿ ಕಾರ್ಯ ನಿರ್ವಹಿಸಿಸ ಅನುಭವ ಹೊಂದಿದ್ದಾರೆ. 1999ರಲ್ಲಿ ಹನ್ನೊಂದನೇ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜಯಮಹಲ್ ಕ್ಷೇತ್ರದಿಂದ ಸ್ಪರ್ಧಿಸಿ, ಜಯಗಳಿಸಿ, ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಪ್ರವಾಸೋದ್ಯಮ ಹಾಗೂ ಹಜ್ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

പാരഡി ഗാനങ്ങളുടെ അപോസ്തലന്‍ വിഡി രാജപ്പന്‍ അന്തരിച്ചു

விசிகவிற்கு மோதிரம் சின்னம் வழங்கிய தேர்தல் ஆணையம்

ರೋಷನ್ ಬೇಗ್ ಸಂಕ್ಷಿಪ್ತ ಪರಿಚಯ

ఇండియన్ మార్కెట్లోకి బెనెల్లీ కెఫెనెరో 150 : స్పై ఫోటోలు

Shivajinagar MLA's Roshan Baig profile

Shivajinagar MLA's Roshan Baig profile

ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರೋಷನ್ ಬೇಗ್ ಅವರಿಗೆ ಓದುವುದರಲ್ಲಿ ಅಪಾರವಾದ ಆಸಕ್ತಿ ಇದೆ. ಬೇಗ್ ಕ್ರಿಕೆಟ್ ಪ್ರಿಯರು ಹೌದು. ರೋಷನ್ ಬೇಗ್ ಸಭಿಹಾ ಫಾತಿಮಾ ದಂಪತಿಗೆ, ಓರ್ವ ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

English summary
Shivajinagar MLA Roshan Baig sworn in as minister in CM Siddaramaiah cabinet on Wednesday, January 1st, 2014 here is profile of Roshan Baig.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X