ಕುಚಿನಾ ಕಿಚನ್ ಶೋ ರೂಮ್ ಉದ್ಘಾಟಿಸಿದ ಶರ್ಮಿಳಾ ಮಾಂಡ್ರೆ

Posted By:
Subscribe to Oneindia Kannada

ಬೆಂಗಳೂರು, ಮೇ 17: ಭಾರತದ ಮೊದಲ ಸಂಪೂರ್ಣ ಅಡುಗೆಮನೆ ಪರಿಹಾರಗಳ ಬ್ರಾಂಡ್ ಆದ ಕುಚಿನಾ (Kutchina) ಬೆಂಗಳೂರಿನಲ್ಲಿ ತಮ್ಮ ಪ್ರತ್ಯೇಕ ಮಳಿಗೆಯನ್ನು ನಟಿ ಶರ್ಮಿಳಾ ಮಾಂಡ್ರೆ ಉದ್ಘಾಟಿಸಿದ್ದಾರೆ.

ಈ ಸಂದರ್ಭದಲ್ಲಿ ಕುಚಿನಾದ ನಿರ್ದೇಶಕರಾದ ನಮಿತ್ ಬಜೋರಿಯ ಅವರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿ, ನಗರ ಮತ್ತು ಈ ಪ್ರದೇಶಕ್ಕಾಗಿ ಬ್ರಾಂಡ್‌ನ ಸಾಧನೆಗಳು, ಬೆಳವಣಿಗೆಗಳು ಮತ್ತು ವಿಸ್ತರಣೆ ಯೋಜನೆಗಳನ್ನು ಹಂಚಿಕೊಂಡರು.

ಈ ವಿಸ್ತಾರವಾದ ಮಳಿಗೆ ಕಾಡುಗೋಡಿಯ ಬಿಎಂ ಆರ್ಕೆಡ್‌ನಲ್ಲಿ ಯೋಜನಾತ್ಮಕವಾಗಿ ಸ್ಥಾಪಿಸಲಾಗಿದ್ದು 1400 ಚದರ ಅಡಿ ವಿಸ್ತೀರ್ಣ ಹೊಂದಿದೆ.

ಈ ಮಳಿಗೆಯಲ್ಲಿ ವಿಸ್ತಾರವಾದ ಶ್ರೇಣಿಯ ಅಂತಾರಾಷ್ಟ್ರೀಯ ಮಟ್ಟದ ಮಾಡ್ಯೂಲಾರ್ ಕಿಚನ್‌ಗಳನ್ನು ಪ್ರದರ್ಶಿಸಲಾಗುತ್ತದೆ ಅಲ್ಲದೆ, ಆಟೋಕ್ಲೀನ್ ಚಿಮಿನಿಗಳ ಶ್ರೇಣಿ ಮತ್ತು ಇತರೆ ಅಡುಗೆಮನೆ ಉಪಕರಣಗಳಾದ ಹಾಬ್‌ಗಳು, ವಾಟರ್ ಪ್ಯೂರಿಫೈಯರ್‌ಗಳು, ಡಿಶ್ ವಾಷರ್‌ಗಳು ಮುಂತಾದವುಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ.

ಸಂಪೂರ್ಣ ಅಡುಗೆಮನೆ ಪರಿಹಾರ

ಸಂಪೂರ್ಣ ಅಡುಗೆಮನೆ ಪರಿಹಾರ

ಸಂಪೂರ್ಣ ಅಡುಗೆಮನೆ ಪರಿಹಾರಗಳನ್ನು ಒಂದೇ ಸೂರಿನಡಿ ಪೂರೈಸುವ ಕಂಪನಿಯಾಗಿದೆ. ಕುಚಿನಾದ ಕೊಡುಗೆಗಳಲ್ಲಿ ಚಿಮಿಣಿ, ಹಾಬ್ಸ್, ಮಾಡ್ಯೂಲಾರ್ ಕಿಚನ್‌ಗಳು, ವಾಟರ್ ಪ್ಯೂರಿಫೈಯರ್‌ಗಳು, ಡಿಷ್‌ವಾಷರ್‌ಗಳು ಇತ್ಯಾದಿಗಳು ಸೇರಿವೆ. ಈ ವಿಭಾಗದಲ್ಲಿ ಇತರೆ ಬ್ರಾಂಡ್‌ಗಳಿಂದ ಸಂಪೂರ್ಣ ವಿಭಿನ್ನವಾಗಿವೆ. ಕುಚಿನಾ ಮಾಡ್ಯೂಲಾರ್ ಕಿಚನ್‌ಗಳು,ಆಟೋ ಕ್ಲೀನ್ ಚಿಮಿಣಿ,ಟೈಮರ್‌ನೊಂದಿಗೆ ಕುಚಿನಾ ಹಾಬ್,ಕುಚಿನಾ ಆಂಟಿಆಕ್ಸಿಡಂಟ್ ಆರ್‌ಒ,ಕುಕ್‌ಟಾಪ್‌ಗಳು, ಟೋಸ್ಟರ್‌ಗಳು, ಸ್ಯಾಂಡ್ ವಿಚ್ ಮೇಕರ್‌ಗಳು, ಒಟಿಜಿ, ಮಿಕ್ಸರ್ ಗ್ರೈಂಡರ್, ಜ್ಯೂಸರ್, ಎಲೆಕ್ಟ್ರಿಕ್ ಕೆಟಲ್, ಇಂಡೆಕ್ಷನ್ಸ್‌ಗಳು ಮತ್ತು ಹ್ಯಾಂಡ್ ಬ್ಲೆಂಡರ್ ಲಭ್ಯವಿದೆ.

ಗ್ರಾಹಕರ ಅಗತ್ಯ ತಕ್ಕಂತೆ ವಿನ್ಯಾಸ

ಗ್ರಾಹಕರ ಅಗತ್ಯ ತಕ್ಕಂತೆ ವಿನ್ಯಾಸ

ಈ ಉತ್ಪನ್ನಗಳು ಉಪಯೋಗಿ ಸ್ನೇಹಿಯಾಗಿರುವುದಲ್ಲದೆ ಕುಚಿನಾ ಅತ್ಯಂತ ನೆಚ್ಚಿನ ಬ್ರಾಂಡ್ ಆಗಿದೆ. ಕುಚಿನಾ ವಿಸ್ತಾರವಾದ ಶ್ರೇಣಿಯ ಅಡುಗೆಮನೆ ಉಪಕರಣಗಳನ್ನು ಸಾದರಪಡಿಸುತ್ತಿದ್ದು ಇದರಿಂದ ಸಂಸ್ಥೆ ವಿವಾದರಹಿತವಾಗಿ ಮಾರುಕಟ್ಟೆಯ ಮುಂಚೂಣಿಯ ಸಂಪೂರ್ಣ ಅಡುಗೆಮನೆ ಪರಿಹಾರಗಳನ್ನು ಒಂದೇ ಸೂರಿನಡಿ ಪೂರೈಸುವ ಕಂಪನಿಯಾಗಿದೆ.

ಎರ್ಗೊನೋಮಿಕ್ಸ್ ಕಡೆಗೆ ಗಮನ

ಎರ್ಗೊನೋಮಿಕ್ಸ್ ಕಡೆಗೆ ಗಮನ

ಭಾರತೀಯ ಅಡುಗೆ ಕಾರ್ಯವನ್ನು ಅತ್ಯಂತ ಸುಲಭವಾಗಿಸುವ ಕಡೆಗೆ ಗಮನ ಕೇಂದ್ರೀಕರಿಸಲಾಗಿದೆ. ಆದ್ದರಿಂದ ಎರ್ಗೊನೋಮಿಕ್ಸ್ ಕಡೆಗೆ ವಿಶೇಷವಾದ ಗಮನವನ್ನು ಅಡುಗೆಮನೆಯ ವಿನ್ಯಾಸದ ಸಂದರ್ಭದಲ್ಲಿ ನೀಡಲಾಗಿದೆ. ಅಡುಗೆ ಮಾಡುವ ಸಂದರ್ಭದಲ್ಲಿ ನಿಲುವು ಸರಿಯಾದ ರೀತಿಯಲ್ಲಿರುವಂತೆ ಉಳಿಸಿಕೊಳ್ಳಲು ಸೂಕ್ತ ವಿನ್ಯಾಸ ಕೈಗೊಳ್ಳಲಾಗಿದೆ. ಜೊತೆಗೆ ಅಡುಗೆ ಮಾಡುವುದು ಸುಲಭವಾಗುವಂತೆ ಅಲ್ಲಿನ ಸ್ಥಳವನ್ನು ಬುದ್ಧಿವಂತ ರೀತಿಯಲ್ಲಿ ಪ್ರತಿ ಮೂಲೆಗಳನ್ನು ದಾಸ್ತಾನು ಸ್ಥಳವಾಗಿ ಬಳಸಲಾಗಿದೆ

ನಿರ್ದೇಶಕರಾದ ನಮಿತ್ ಬಜೋರಿಯಾ

ನಿರ್ದೇಶಕರಾದ ನಮಿತ್ ಬಜೋರಿಯಾ

ಭಾರತದ ಅಡುಗೆ ಮನೆಗಳಲ್ಲಿ ಅಡುಗೆಯ ದೃಶ್ಯಗಳನ್ನು ಬದಲಾಯಿಸುವುದು ಮತ್ತು ಅದನ್ನು ಜೀವನಶೈಲಿಯ ಅನುಭವವನ್ನಾಗಿಸುವುದು ನಮ್ಮ ಉದ್ದೇಶವಾಗಿದೆ. ಬದಲಾಗುತ್ತಿರುವ ಆದ್ಯತೆಗಳು ಮತ್ತು ನಮ್ಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ನಾವು ಎಲ್ಲಾ ಕಡೆ ನೋಡಿದ್ದೇವೆ. ನಾವು ದಕ್ಷಿಣ ಭಾರತದಲ್ಲಿ ಆಕ್ರಮಣಕಾಗಿ ವಿಸ್ತರಣೆಯ ಉದ್ದೇಶ ಹೊಂದಿದ್ದೇವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kutchina, India’s first holistic kitchen solutions brand launched their first exclusive outlet in Bengaluru. Namit Bajoria, Director, Kutchina, addressed the media on the occasion and shared the brand’s achievements, growth and expansion plans for the city and region. The occasion was graced by the presence of renowned actress of the Kannada film industry, Ms. Sharmiela Mandre.
Please Wait while comments are loading...