ಬಿಗ್ ಬಿ, ಮೋದಿ ನಂತರದ ಸ್ಥಾನದಲ್ಲಿ ಕಿಂಗ್ ಖಾನ್

Posted By:
Subscribe to Oneindia Kannada

ಬೆಂಗಳೂರು, ಜೂನ್ 22: ಕಿಂಗ್ ಖಾನ್ ಶಾರುಖ್ ಅವರ ಟ್ವಿಟ್ಟರ್ ಕುಟುಂಬದಲ್ಲಿ ಈಗ 20 ಮಿಲಿಯನ್ ಸದಸ್ಯರಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್​ರನ್ನು ಹಿಂದೆ ಬಿದ್ದಿರುವ ಶಾರುಖ್ ಅವರು ಅತ್ಯಂತ ಜನಪ್ರಿಯ ಸೆಲೆಬ್ರಿಟಿಯಾಗಲು ಸಜ್ಜಾಗಿದ್ದಾರೆ.

20 ಮಿಲಿಯನ್ ಪ್ಲಸ್ ಹಿಂಬಾಲಕರನ್ನು ಹೊಂದಿದ ಖುಷಿಯಲ್ಲಿ ಹರ್ಷ ವ್ಯಕ್ತಪಡಿಸಿ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಬಿಗ್ ಬಿ ಹಾಗೀ ಮೋದಿ ನಂತರದ ಸ್ಥಾನದಲ್ಲಿ ಕಿಂಗ್ ಖಾನ್ ಇದ್ದಾರೆ.

Shah Rukh Khan’s Twitter Account now has 20m members

2014ರಲ್ಲಿ ಒಂದು ಕೋಟಿ ಅಭಿಮಾನಿಗಳನ್ನು ಶಾರುಖ್ ಹೊಂದಿದ್ದರು, 2015ರಲ್ಲಿ 1.5 ಕೋಟಿ ಅನುಯಾಯಿಗಳನ್ನು ಗಳಿಸಿದರು. ಟ್ವಿಟ್ಟರ್ ನಲ್ಲಿ ಸದಾ ಕಾಲ ಸಕ್ರಿಯವಾಗಿರುವ ಶಾರುಖ್ ಅವರು ಇದೇ ವೇಗದಲ್ಲಿ ಸಾಗಿದರೆ ಶಾರುಖ್ ಅವರ ಅಭಿಮಾನಿಗಳ ಸಂಖ್ಯೆ ಬಿಗ್ ಬಿ ಅವರ ಅಭಿಮಾನಿಗಳ ಸಂಖ್ಯೆಯನ್ನು ದಾಟುವ ಲಕ್ಷಣಗಳು ಕಂಡು ಬಂದಿದೆ.

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ಹಿಂಬಾಲಕರನ್ನು ಮೀರಿಸಬೇಕಾಗುತ್ತದೆ. ಮೋದಿ ಅವರು 20.76 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ.

ಅಮಿತಾಬ್ ಬಚ್ಚನ್ ಅವರು 21.3 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ಸಲ್ಮಾನ್ ಖಾನ್ ಅವರು 18.2 ಮಿಲಿಯನ್ ಟ್ವಿಟ್ಟರ್ ಹಿಂಬಾಲಕರನ್ನು ಹೊಂದಿದ್ದು ಮೂರನೇ ಸ್ಥಾನದಲ್ಲಿದ್ದಾರೆ. ಅಮೀರ್ ಖಾನ್ ಅವರು 17.9 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದಾರೆ. ಶಾರುಖ್ ಖಾನ್ ಅವರ ಫ್ಯಾನ್ಸ್ ಚಿತ್ರದ ನಂತರ ಈಗ ರಾಯೀಸ್ ಚಿತ್ರ ಬಹು ನಿರೀಕ್ಷೆ ಹುಟ್ಟಿಸಿದೆ.

ಬಿಗ್ ಬಿ, ಮೋದಿ ನಂತರದ ಸ್ಥಾನದಲ್ಲಿ ಕಿಂಗ್ ಖಾನ್

ಬಿಗ್ ಬಿ, ಮೋದಿ ನಂತರದ ಸ್ಥಾನದಲ್ಲಿ ಕಿಂಗ್ ಖಾನ್

ಅಮಿತಾಬ್ ಬಚ್ಚನ್ 1,000 ಖಾತೆಗಳನ್ನು ಹಿಂಬಾಲಿಸುತ್ತಿದ್ದಾರೆ. 21, 310, 510 ಹಿಂಬಾಲಕರನ್ನು ಹೊಂದಿದ್ದಾರೆ.
ಶಾರುಖ್ ಖಾನ್

ಶಾರುಖ್ ಖಾನ್

ಶಾರುಖ್ ಖಾನ್ ಅವರು 79 ಖಾತೆಗಳನ್ನು ಹಿಂಬಾಲಿಸುತ್ತಿದ್ದಾರೆ. 20, 011, 348 ಹಿಂಬಾಲಕರನ್ನು ಹೊಂದಿದ್ದಾರೆ.
ನರೇಂದ್ರ ಮೋದಿ

ನರೇಂದ್ರ ಮೋದಿ

ನರೇಂದ್ರ ಮೋದಿ ಅವರು 1,372 ಖಾತೆಗಳನ್ನು ಹಿಂಬಾಲಿಸುತ್ತಿದ್ದಾರೆ. 20,763, 411 ಹಿಂಬಾಲಕರನ್ನು ಹೊಂದಿದ್ದಾರೆ.
ಸಲ್ಮಾನ್ ಖಾನ್

ಸಲ್ಮಾನ್ ಖಾನ್

ಸಲ್ಮಾನ್ ಖಾನ್ 79 ಖಾತೆಗಳನ್ನು ಹಿಂಬಾಲಿಸುತ್ತಿದ್ದಾರೆ. 20, 011, 348 ಹಿಂಬಾಲಕರನ್ನು ಹೊಂದಿದ್ದಾರೆ.
-
-
-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
With 20 million Twitter followers, Bollywood’s King Khan is inching closer to rule the numero uno spot, being presently held by Amitabh Bachchan with 21.3 million fans. Salman Khan has 18.2 million fans on Twitter while perfectionist Aamir Khan has 17.9 millions followers on Twitter.
Please Wait while comments are loading...