ಶಬ್ದದ ಕಥೆ ಕೇಳೋಣ, ಹಿಂದಿರುವ ಮಹತ್ವ ಅರಿಯೋಣ : ಸಂವಾದ

Posted By: Nayana
Subscribe to Oneindia Kannada

ಬೆಂಗಳೂರು, ನವೆಂಬರ್ 15 : ಮುನ್ನೋಟ ಬುಕ್ ಹೌಸ್ ನ ಆದಿತ್ಯ ಕುಲಕರ್ಣಿಯವರು ಪ್ರತಿ ಭಾನುವಾರ ಒಂದೊಂದು ನೂತನ ವಿಷಯವನ್ನಾಧರಿಸಿ ಸಂವಾದ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ.ಈ ಬಾರಿ ಶಬ್ದದ ಕಥೆ ಕೇಳೋಣ ಬನ್ನಿ ಎನ್ನುವ ಸಂವಾದವನ್ನು ಇದೇ ಭಾನುವಾರ (ನ.19)ರಂದು ಬಸವನಗುಡಿ ಬಳಿ ಇರುವ ಮಳಿಗೆಯಲ್ಲಿ 8ನೇ ಅರಿಮೆ ಮಾತುಕತೆ ಆಯೋಜಿಸಿದ್ದಾರೆ.

ಶಬ್ದವಿಲ್ಲದ ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಪರಸ್ಪರ ಕೇವಲ ಕೈಸನ್ನೆ ಮಾಡುತ್ತಾ ಕೆಲಸ ಮಾಡಲು ಸಾಧ್ಯವಿಲ್ಲ. ಸಂಗೀತ, ಮಾತು, ಗದ್ದಲ ಹೀಗೆ ಹಲವು ಬಗೆಗಳಲ್ಲಿ ಶಬ್ದವು ನಮ್ಮ ಬದುಕಲ್ಲಿ ಹಾಸುಹೊಕ್ಕಾಗಿದೆ. ಶಬ್ದ ಎಂದರೇನು?, ಅದು ಹೇಗೆ ಉಂಟಾಗುತ್ತದೆ. ಶಬ್ದ ನಮಗೆ ಹೇಗೆ ಕೇಳಿಸುತ್ತದೆ. ಶಬ್ದವನ್ನು ಬಳಸಿಕೊಂಡು ಏನೆಲ್ಲಾ ಸಲಕರಣೆಗಳನ್ನು ಮಾಡಲಾಗುತ್ತದೆ. ಅಲ್ಟ್ರಾ ಸೌಂಡ್ ಎಂದರೇನು? ಹೀಗೆ ಶಬ್ದದ ಹಿಂದಿರುವ ವಿಜ್ಞಾನ ಕಥೆಯನ್ನು ಅರಿಮೆ ಜಾಲತಾಣದ ಸಂಪಾದಕರು ಪ್ರಶಾಂತ ಸೊರಟೂರು ಅವರು ಸಂವಾದ ನಡೆಸಿಕೊಡಲಿದ್ದಾರೆ.

Shabdada Kathe Kelona workshop

ಮುನ್ನೋಟ ಕಳೆದೊಂದು ವರ್ಷದಲ್ಲಿ ಬೆಂಗಳೂರಿನಲ್ಲಿ ಕನ್ನಡದ ಸುತ್ತ ಮೂವತ್ತೈದು ಕಾರ್ಯಕ್ರಮಗಳನ್ನು ಮಳಿಗೆಯಲ್ಲಿ ಆಯೋಜಿಸಿದ್ದಾರೆ. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಆಯೋಜಕರು: ಮುನ್ನೋಟ ಬುಕ್ ಸ್ಟೋರ್
ವಿಷಯ: ಶಬ್ದದ ಕಥೆ ಕೇಳೋಣ ಬನ್ನಿ
ವಾರ: ಭಾನುವಾರ ನವೆಂಬರ್ 19,ಬೆಳಗ್ಗೆ11.30
ಸ್ಥಳ: ಮುನ್ನೋಟ, ನಂ.67, ಅವೆನ್ಯೂ ಕಾಂಪ್ಲೆಕ್ಸ್, ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್ ಬಳಿ, ಬಸವನಗುಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Munnota book store organising a workshop about sound.munnota organising workshops on different kannada topics from one year.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ