ಸರಕಾರದ ಹೊಸ ಶುಲ್ಕ ನೀತಿ ವಿರೋಧಿಸಿ ಎಸ್ ಎಫ್ ಐ ಪ್ರತಿಭಟನೆ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 25: ಬುಧವಾರ (ಅಕ್ಟೋಬರ್ 26) ಬೆಂಗಳೂರಿನಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂಭಾಗ ಬೆಳಗ್ಗೆ 11ಕ್ಕೆ ಪ್ರತಿಭಟನೆ ನಡೆಸಲು ಎಸ್ ಎಫ್ ಐ ನಿರ್ಧರಿಸಿದೆ. ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಸರಕಾರ ನಿಗದಿ ಮಾಡಲು ಹೊರಟಿರುವ ಶುಲ್ಕ ನೀತಿಯನ್ನು ವಿರೋಧಿಸಿ, ಸಂಘಟನೆಯ ರಾಜ್ಯ ಸಮಿತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ರಾಜ್ಯದ ನಲವತ್ತು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರಿಂದ ಹಣಾ ಲೂಟಿ ಮಾಡುತ್ತಿವೆ. ಇಂಥ ಸನ್ನಿವೇಶದಲ್ಲಿ ಸರಕಾರ ಹೊಸ ಶುಲ್ಕ ನೀತಿ ತರಲು ಹೊರಟಿದೆ. ಅದರ ಪ್ರಕಾರ ಶಿಕ್ಷಕರ ವೇತನವನ್ನು ಮಕ್ಕಳಿಂದ ಹೆಚ್ಚುವರಿಯಾಗಿ ವಸೂಲಿ ಮಾಡಲಾಗುತ್ತದೆ.[ಖಾಸಗಿ ಶಾಲೆಗಳಲ್ಲಿ ಶುಲ್ಕ ಏರಿಕೆಗೆ ಚಿಂತನೆ]

SFI protest against state government new fee policy

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶೇ 50, ಪಟ್ಟಣ ಪಂಚಾಯಿತಿ ಮಟ್ಟದಲ್ಲಿ ಶೇ 60, ನಗರಸಭೆ ಅಥವಾ ಮಹಾನಗರ ಪಾಲಿಕೆ ಮಟ್ಟದಲ್ಲಿ ಶೇ 75, ಬಿಬಿಎಂಪಿ ಮಟ್ಟದಲ್ಲಿ ಶೇ 100ರಷ್ಟು ಹಣ ಪಡೆಯುವಂತೆ ಕರಡು ರಚಿಸಲಾಗಿದೆ. ಇದರಿಂದ ಶಿಕ್ಷಣದ ಖಾಸಗೀಕರಣಕ್ಕೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಸರಕಾರದ ಈ ನೀತಿ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
SFI will protest against Karnataka state government's new fee policy on 26th October in Bengaluru.
Please Wait while comments are loading...