ಬೆಂಗಳೂರು: ಬಸ್ ನಿಲ್ದಾಣದಲ್ಲಿ ನಿಂತ ಹುಡುಗಿಗೂ ಲೈಂಗಿಕ ಕಿರುಕುಳ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 15: ಎಂಥ ಕಾಲ ಬಂತು ನೋಡಿ, ರಾತ್ರಿ, ನಿರ್ಜನ ಬೀದಿಯಲ್ಲಿ ಮಹಿಳೆಯರು ಓಡಾಡುವುದಕ್ಕಂತೂ ಈ ಕಾಲದಲ್ಲಿ ಸಾಧ್ಯವಿಲ್ಲ ಎಂದಾಯ್ತು. ಆದರೆ ಹಾಡು ಹಗಲಲ್ಲಿ, ಬಸ್ ನಿಲ್ದಾಣದಲ್ಲಿ ನಿಲ್ಲುವುದಕ್ಕೂ ಭಯ ಪಡುವಂತಾದರೆ? ಹೌದು, ಕಾಲ ಕೆಟ್ಟಿದೆ ಎಂಬುದನ್ನು ಸಾಬೀತು ಪಡಿಸುವುದಕ್ಕೆ ಬೆಂಗಳೂರಿನಲ್ಲಿ ಲೈಂಗಿಕ ಕಿರುಕುಳದ ಹಲವು ಪ್ರಕರಣಗಳು ನಡೆಯುತ್ತಿವೆ. ಅವುಗಳಲ್ಲಿ ಇದೂ ಒಂದು.

ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಮಡಿವಾಳದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.[ಪಿಂಕ್ ಹೊಯ್ಸಳ ಚುರುಕು ಕಾರ್ಯಾಚರಣೆ: ಹತ್ತೇ ನಿಮಿಷದಲ್ಲಿ ಕಾಮುಕ ಬಂಧನ]

Sexual harassment in Silkboard bus stand, Bengaluru man arrests

ಮೇ 12, ಶುಕ್ರವಾರದಂದು ಸಿಲ್ಕ್ ಬೋರ್ಡ್ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಯುವತಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡುತ್ತಿದ್ದ. ಬೈದರೂ ಸುಮ್ಮನಾಗದ ಆತನ ವರ್ತನೆಯಿಂದ ಹೆದರಿದ ಯುವತಿ ಜೋರಾಗಿ ಕಿರುಚಿದ್ದಾಳೆ. ಆಕೆಯ ಕಿರುಚಾಟ ಕೇಳಿದ ದಾರಿಹೋಕರು ಸಹಾಯಕ್ಕೆ ಧಾವಿಸಿದ್ದಾರೆ.

ಸಾರ್ವಜನಿಕರ ದೂರಿನ ಮೇರೆಗೆ ಕಾಮುಕನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Bengaluru man who has harassed a girl in Silk board bus stand on friday, May 12th, has arrested in Madival, Bengaluru today.
Please Wait while comments are loading...