ಕಮ್ಮನಹಳ್ಳಿ ದೌರ್ಜನ್ಯ : ಆರು ಶಂಕಿತ ಕಾಮುಕರ ವಿಚಾರಣೆ

Posted By:
Subscribe to Oneindia Kannada

ಬೆಂಗಳೂರು, ಜನವರಿ 04 : ಕಮ್ಮನಹಳ್ಳಿಯಲ್ಲಿ ಜನವರಿ 1ರ ರಾತ್ರಿ ನಡೆದ ಯುವತಿಯ ಲೈಂಗಿಕ ದೌರ್ಜನ್ಯದಂಥ ನಾಚಿಕೆಗೇಡಿನ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಆರು ಜನರನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಲಭ್ಯವಿರುವ ಸಿಸಿಟಿವಿ ಫುಟೇಜ್ ಆಧಾರವಾಗಿಟ್ಟುಕೊಂಡು ಬೆಂಗಳೂರು ಪೊಲೀಸರು ಕೂಡಲೆ ಕಾರ್ಯತತ್ಪರರಾಗಿದ್ದಾರೆ. ಇದು ಕಮ್ಮನಹಳ್ಳಿಯ ನಿರ್ಜನವಾದ ಪ್ರದೇಶದಲ್ಲಿ ಅರೆಬೆಳಕಿನಲ್ಲಿ ನಡೆದಿದ್ದರಿಂದ ಕಿಡಿಗೇಡಿಗಳ ಚೆಹರೆಯನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗಿಲ್ಲ.[ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ]

Sexual harassment in Kammanahalli : 6 detained

ಈ ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಇಲ್ಲಿಯವರೆಗೆ ಬಂಧಿಸಿಲ್ಲ. ಶಂಕಿತ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ಕೇವಲ ವಿಚಾರಣೆ ನಡೆಸುತ್ತಿದ್ದೇವೆ ಎಂದು ತನಿಖಾಧಿಕಾರಿ ಒನ್ಇಂಡಿಯಾ ಪ್ರತಿನಿಧಿಗೆ ಬುಧವಾರ ತಿಳಿಸಿದರು.

ಜನವರಿ 1ರ ರಾತ್ರಿ ಆಗಿದ್ದೇನೆಂದರೆ, ಕಮ್ಮನಹಳ್ಳಿಯ ಬಡಾವಣೆಯೊಂದರಲ್ಲಿ ನಿರ್ಜನವಾದ ಪ್ರದೇಶದಲ್ಲಿ ನಡೆದುಬರುತ್ತಿದ್ದ ಯುವತಿಯನ್ನು ಹೋಂಡಾ ಆಕ್ಟೀವಾದಲ್ಲಿ ಅಡ್ಡಗಟ್ಟಿದ ಯುವಕರಿಬ್ಬರು, ಆಕೆಯನ್ನು ಬಲವಂತವಾಗಿ ತಬ್ಬಿಕೊಂಡು ಚುಂಬಿಸಿ ಲೈಂಗಿಕ ದೌರ್ಜನ್ಯವೆಸಗಿದ್ದರು.

ಹೊಸವರ್ಷದ ಮುನ್ನಾದಿನ ಮಹಾತ್ಮಾ ಗಾಂಧಿ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಯುವಕ ಯುವತಿಯರು ನೂತನ ವರ್ಷ ಸ್ವಾಗತಿಸಲೆಂದು ನೆರೆದಿದ್ದಾಗ ಪುಂಡ ಯುವಕರು ಯುವತಿಯರ ಮೇಲೆರಗಿ ಲೈಂಗಿಕವಾಗಿ ಹಿಂಸಿಸಿದ್ದರು. ಈ ಘಟನೆ ನಡೆದ ಮರುದಿನವೇ ಕಮ್ಮನಹಳ್ಳಿಯಲ್ಲಿ ಇಂಥ ಹೇಯಕೃತ್ಯ ಜರುಗಿದೆ.

ಮಹಿಳೆಯರು, ಅವರು ಪೋಷಕರು ದಿಗಿಲಾಗುವಂತೆ ಇಂಥ ಸಾಲುಸಾಲು ಘಟನೆಗಳು ನಡೆಯುತ್ತಿರುವುದರಿಂದ ಬೆಂಗಳೂರಿನ ಜನತೆ ತಲೆತಗ್ಗಿಸುವಂತಾಗಿದೆ. ದೇಶದೆಲ್ಲೆಡೆ ಇದರ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಒಂದಾನೊಂದು ಕಾಲದಲ್ಲಿ ಮಹಿಳೆಯರಿಗೆ ಸುರಕ್ಷಿತ ನಗರವಾಗಿದ್ದ ಬೆಂಗಳೂರು ಈಗ ಅಸುರಕ್ಷಿತ ನಗರಿಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru police have detained 6 suspecious people for their involvement in incident which took place in Kammanahalli on January 1st night. Two youth molested a young woman when she was walking alone in a empty road. This incident is captured in cctv.
Please Wait while comments are loading...