ಬೆಂಗಳೂರು : ಎ.ಸಿ.ಪಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 27 : ಬೆಂಗಳೂರಿನ ಎ.ಸಿ.ಪಿಗಳ ಸಮಯ ಇನ್ನು ಸರಿಹೋಗಿಲ್ಲ. ಮೊನ್ನೆಯಷ್ಟೆ ಶೆಟ್ಟಿ ಲಂಚ್ ಹೋಮ್ ಪ್ರಕರಣದಲ್ಲಿ ಎ.ಸಿ.ಪಿ ಮಂಜುನಾಥ್ ಮೇಲೆ ದೂರು ನೀಡಲಾಗಿತ್ತು, ಅದಾದ ನಂತ ಎ.ಸಿ.ಪಿ ಸಜ್ಜದ್ ಖಾನ್ ವಿರುದ್ಧ ವ್ಯಕ್ತಿಯೊಬ್ಬನನ್ನು ಅಕ್ರಮವಾಗಿ ಬಂಧದಲ್ಲಿರಿಸಿದ್ದ ಬಗ್ಗೆ ದೂರು ದಾಖಲಾಗಿತ್ತು. ಈಗ ಮತ್ತೊಬ್ಬ ಎ.ಸಿ.ಪಿ ಮೇಲೆ ಲೈಂಗಿಕ ಕಿರುಕುಳದ ದೂರು ನೀಡಲಾಗಿದೆ.

ದೆಹಲಿ ಮೆಟ್ರೋದಲ್ಲಿ ಪತ್ರಕರ್ತೆ ಮೇಲೆ ಲೈಂಗಿಕ ಹಲ್ಲೆ

ಯಶವಂತಪುರ ಉಪ ವಿಭಾಗದ ಎಸಿಪಿ ರವಿಪ್ರಸಾದ್ ಮೇಲೆ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ. ಕಳೆದ 15 ದಿನಗಳಲ್ಲಿ ಬೆಂಗಳೂರಿನ ಎ.ಸಿ.ಪಿಗಳ ಮೇಲೆ ದಾಖಲಾಗುತ್ತಿರುವ ಮೂರನೇ ದೂರು ಇದು.

Sexual harassment Complaint lodge against ACP Raviprasad

ಎಸಿಪಿ ರವಿಪ್ರಸಾದ್ ಮೇಲೆ ಬಂದಿರುವ ದೂರನ್ನು ವಿಚಾರಣೆ ಮಾಡಲು ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ಅವರಿಗೆ ಹೆಚ್ಚುವರಿ ಪೋಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಸೂಚಿಸಿದ್ದಾರೆ.ವರದಿ ಬಂದ ನಂತರ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿಯೂ ಅವರು ಹೇಳಿದ್ದಾರೆ.

ಲೈಂಗಿಕ ಕಿರುಕುಳ ಆರೋಪ: ಮೈಸೂರಿನಲ್ಲಿ ಶಿಕ್ಷಕನ ಬಂಧನ

ಸೋಲದೇವನಹಳ್ಳಿ ದೇವಸ್ಥಾನದ ಗಲಾಟೆ ಸಂಬಂಧ ಪ್ರಕರಣವನ್ನು ಎಸಿಪಿ ರವಿಪ್ರಸಾದ್ ವಿಚಾರಣೆ ಮಾಡುತ್ತಿದ್ದರು ಆದರೆ ಈಗ ಈಗ ಎಸಿಪಿ ವಿರುದ್ದವೇ ದೂರು ಬಂದಿದೆ.

ಆದರೆ ಈ ಪ್ರಕರಣದಲ್ಲಿ ಕೆಲವು ಅನುಮಾನಗಳಿದ್ದು, ದೇವಸ್ಥಾನವನ್ನು ವಶಪಡಿಸಿಕೊಳ್ಳಲು ಬಯಸುತ್ತಿರುವ ಒಂದು ತಂಡದ ಸದಸ್ಯರು ರವಿಪ್ರಸಾದ್ ಅವರನ್ನು ತನಿಖಾಧಿಕಾರಿ ಸ್ಥಾನದಿಂದ ತಪ್ಪಿಸಲು ಬೇಕೆಂದೇ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sexual harassment complaint lodge against ACP Raviprasad by a women. DCP Chetan Kumar investigating the case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ