ಬಿಗ್ ಬಜಾರ್ ಮ್ಯಾನೇಜರ್ ಮೇಲೆ ಲೈಂಗಿಕ ಕಿರುಕುಳ ಆರೋಪ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಏಪ್ರಿಲ್ 11: ಬಿಗ್ ಬಜಾರ್ ಮ್ಯಾನೇಜರ್ ಒಬ್ಬ ತಮ್ಮಲ್ಲಿ ಬ್ಯೂಟಿ ಅಡ್ವೈಸರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.[ಬೆಂಗಳೂರಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ]

ಬೆಂಗಳೂರಿನ ಬಾಣಸವಾಡಿಯ ರಿಂಗ್ ರೋಡ್ ಬಿಗ್ ಬಜಾರ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎಂ.ಡಿ.ಕಾರ್ತೀಕ್ ಎಂಬುವವರು ತಮ್ಮಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಸೇಲ್ ಐಟೆಂ ಜೋಡಿಸುವ ನೆಪದಲ್ಲಿ ಮೈಕೈ ಮುಟ್ಟುತ್ತಿದ್ದುದಲ್ಲದೆ, ಇದನ್ನು ವಿರೋಧಿಸಿದರೆ ಮಹಿಳೆಯ ಮೇಲೆ ಕಳ್ಳತನದ ಆರೋಪ ಹೊರಿಸುವುದಾಗಿ ಬೆದರಿಕೆ ಹಾಕುತ್ತಿದ್ದರು.[ಬೆಂಗಳೂರು: ವಿದ್ಯಾರ್ಥಿನಿ ಮೇಲೆ ಡ್ಯಾನ್ಸ್ ಅಧ್ಯಾಪಕನಿಂದ ಅತ್ಯಾಚಾರ]

Sexual harassment by e Big Bazzar Manager in Bengaluru

ಇದರಿಂದ ನೊಂದ ಮಹಿಳೆ ಆಡಳಿತ ಮಂಡಳಿಗೆ ದೂರು ನೀಡಿದರೆ, ಆಕೆಯನ್ನೇ ಕಂಪೆನಿ ಕೆಲಸದಿಂದ ತೆಗೆದುಹಾಕಿದೆ. ಕಿರುಕುಳಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಪೊಲೀಸರೂ ಸಿದ್ಧರಿರಲಿಲ್ಲ ಎಂದು ಯುವತಿ ದೂರಿದ್ದಾರೆ. ಸದ್ಯಕ್ಕೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
M.D.Karthik, manager in a Big Bazaar has accused of sexual harassment on a beauty adviser, who was also a worker in the same Big bazaar. The lady had informed her administraion about this. But administration has removed her from the work.
Please Wait while comments are loading...