ಬೆಂಗಳೂರಿನಲ್ಲಿ 4 ವರ್ಷದ ಕಂದನ ಮೇಲೆ ಲೈಂಗಿಕ ದೌರ್ಜನ್ಯ

Posted By:
Subscribe to Oneindia Kannada
   Harassment Of 4 Year Child | Oneindia Kannada

   ಬೆಂಗಳೂರು, ಸೆಪ್ಟೆಂಬರ್ 13: ರಾಜಧಾನಿ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದ 4 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ರಾಜಧಾನಿಯಲ್ಲಿ ಆತಂಕ ಸೃಷ್ಟಿಯಾಗಿದೆ.

   60ರ ವೃದ್ಧನಿಂದ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ

   ಶಾಲೆಯ ಸೆಕ್ಯುರಿಟಿ ಗಾರ್ಡ್ ಓಬಳೇಶ್(25) ಎಂಬುವವನೇ ಸೆ.12 ರಂದು ಈ ಕೃತ್ಯ ಎಸಗಿದ್ದಾನೆಂಬುದು ಬೆಳಕಿಗೆ ಬಂದಿದ್ದು, ಪೊಲೀಸರು ಆತನನನ್ನು ಬಂಧಿಸಿದ್ದಾರೆ.

   Sexual assualt on 4 year old girl in Bengaluru

   ಶಾಲೆಯ ಶೌಚಾಲಯದಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಮನೆಗೆ ತೆರಳಿದ ಬಾಲಕಿ ಹೊಟ್ಟೆ ನೋವೆಂದು ಕಿರುಚುತ್ತಿದ್ದಾಗ, ಆಕೆಯನ್ನು ಪಾಲಕರು ವೈದ್ಯರ ಬಳಿ ಕರೆದೊಯ್ದಿದ್ದಾರೆ. ಪರೀಕ್ಷಿಸಿದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ವೈದ್ಯರು ದೃಢ ಪಡಿಸಿದ್ದಾರೆ. ಆಕ್ರೋಶಗೊಂಡ ಪಾಲಕರು ಪೊಲೀಸರಿಗೆ ದೂರು ನೀಡಿದಾಗ ಸತ್ಯ ಹೊರಬಂದಿದೆ.

   ಬಾಲಕಿಯ ತಂದೆ ಬಿಹಾರಿ ಮೂಲದವರಾಗಿದ್ದು, ಶಾಲೆಯಲ್ಲಿ ಇಷ್ಟು ಅಭದ್ರತೆ ಇದ್ದರೆ ಮಕ್ಕಳನ್ನು ಓದುವುದಕ್ಕೆ ಕಳಿಸುವುದು ಹೇಗೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

   ದೆಹಲಿಯಲ್ಲಿ 5 ವರ್ಷದ ಶಾಲಾ ಬಾಲಕಿ ಮೇಲೆ ಅತ್ಯಾಚಾರ

   ಆರೋಪಿ ಓಬಳೇಶ್ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಂಗಳವಾರ ಸಂಜೆ ಶಾಲೆಯ ಆವರಣಕ್ಕೆ ಜಮಾಯಿಸಿದ್ದ ಹಲವು ಪಾಲಕರು ಮಕ್ಕಳ ಭದ್ರತೆಯ ಬಗ್ಗೆ ಗಮನ ನೀಡದ ಶಾಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

   ಕಳೆದ ಫೆಬ್ರವರಿಯಲ್ಲಿಯೂ ಬೆಂಗಳೂರಿನ ಮಾರತಹಳ್ಳಿಯಲ್ಲಿಯೂ ಮೂರು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಶಾಲೆಯ ಸಿಬ್ಬಂದಿಯೇ ಈ ಕೆಲಸ ಮಾಡಿದ್ದೆಂದು ದೃಢವಾಗಿತ್ತು.

   ಇತ್ತೀಚೆಗಷ್ಟೆ ಗುರುಗ್ರಾಮದಲ್ಲಿ ಏಳು ವರ್ಷದ ಮಗುವನ್ನು ಶೌಚಾಲಯದಲ್ಲಿ ಕೊಲೆ ಮಾಡಲಾಗಿತ್ತು. ಒಟ್ಟಿನಲ್ಲಿ ಮಕ್ಕಳ ಭದ್ರತೆ ಎಂಬುದು ಸರ್ಕಾರಕ್ಕೂ, ಶಾಲೆಗಳಿಗೂ ಒಂದು ಸವಾಲಿನ ವಿಷಯವಾಗಿಯೇ ಉಳಿಸಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   A 4 year old girl studying in a private school in bengaluru was sexually assaulted by security gaurd in school premise on Sep 12th.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ