ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಕಾಲುವೆಗೆ ತ್ಯಾಜ್ಯ, ಜಲಮಂಡಳಿ ವಿರುದ್ಧ ದೂರು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 03 : ತ್ಯಾಜ್ಯಗಳನ್ನು ರಾಜಕಾಲುವೆಗೆ ಸುರಿಯುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುನೈಟೆಡ್ ಬೆಂಗಳೂರು ಭಾಗವಾಗಿರುವ 'ನಾಗರಿಕ' ಪೊಲೀಸರಿಗೆ ದೂರು ನೀಡಿದೆ.

ಬೆಂಗಳೂರು ಜಲಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಶೋಕ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ರಾಜಕಾಲುವೆಗೆ ಅಕ್ರಮವಾಗಿ ತಾಜ್ಯಗಳನ್ನು ಸುರಿಯುತ್ತಿರುವುದಕ್ಕೆ ಜಲಮಂಡಳಿಯೇ ಹೊಣೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ರಾಜನಾಲಾ ಕಬಳಿಕೆ: 20 ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಚಾರ್ಜ್ ಶೀಟ್ರಾಜನಾಲಾ ಕಬಳಿಕೆ: 20 ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಚಾರ್ಜ್ ಶೀಟ್

HOSMAT ಆಸ್ಪತ್ರೆ ಸಮೀಪ ಸೆ.19ರಂದು ಸಂಜೆ 5 ಗಂಟೆಗೆ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ರಾಜ ಕಾಲುವೆಯಲ್ಲಿ ತಾಜ್ಯಗಳನ್ನು ಸುರಿಯಲಾಗಿದೆ ಎಂಬುದು ಆರೋಪವಾಗಿದೆ. ಈ ರಾಜಕಾಲುವೆ ಬೆಳ್ಳಂದೂರು ಕೆರೆಗೆ ಸಂಪರ್ಕ ಕಲ್ಪಿಸುತ್ತದೆ.

ಬಿಬಿಎಂಪಿಯಿಂದ ಮತ್ತೆ ರಾಜಾಕಾಲುವೆ ಒತ್ತುವರಿ ತೆರವುಬಿಬಿಎಂಪಿಯಿಂದ ಮತ್ತೆ ರಾಜಾಕಾಲುವೆ ಒತ್ತುವರಿ ತೆರವು

Sewage dump to rajakaluve complaint against BWSSB

ಬೆಳ್ಳಂದೂರು ಕೆರೆ ಈಗಾಗಲೇ ಭಾರಿ ಮಾಲಿನ್ಯಕ್ಕೆ ಒಳಗಾಗಿದೆ. ಆದರೆ, ಜಲ ಮಂಡಳಿ ಅಧಿಕಾರಿಗಳು ತ್ಯಾಜ್ಯವನ್ನು ಸುರಿಯುತ್ತಿರುವುದನ್ನು ತಡೆಯಲು ವಿಫಲರಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

1000 ಕೋಟಿ ಮೌಲ್ಯದ 189 ಎಕರೆ ಭೂಮಿ ಒತ್ತುವರಿ ತೆರವು1000 ಕೋಟಿ ಮೌಲ್ಯದ 189 ಎಕರೆ ಭೂಮಿ ಒತ್ತುವರಿ ತೆರವು

ಜಲಮಂಡಳಿ ಟ್ಯಾಂಕರ್ ಕೆಎ 53, ಬಿ3472 ಸೆ.19ರಂದು ರಾಜಕಾಲುವೆಗೆ ತ್ಯಾಜ್ಯವನ್ನು ಸುರಿದಿದೆ. ಇದನ್ನು ಗಮನಿಸಿದ ಪಾದಚಾರಿಗಳು ಈ ಬಗ್ಗೆ ಕೇಳಿದಾಗ ನಿರಂತರವಾಗಿ ರಾಜಕಾಲುವೆಗೆ ತ್ಯಾಜ್ಯ ಸುರಿಯುತ್ತಿರುವುದಾಗಿ ಹೇಳಿದ್ದಾರೆ.

ಅಸಿಸ್ಟೆಂಟ್ ಇಂಜಿನಿಯರ್ ರಮೇಶ್ ಈ ರೀತಿ ಮಾಡಲು ಹೇಳಿದ್ದಾರೆ ಎಂದು ಟ್ಯಾಂಕರ್ ಚಾಲಕ ಹೇಳಿದ್ದಾನೆ. ಈ ಕುರಿತು ಡ್ರೈವರ್ ನೀಡಿದ ಹೇಳಿಕೆಯ ವಿಡಿಯೋವನ್ನು ಸಹ ದೂರಿನೊಂದಿಗೆ ಸಲ್ಲಿಸಲಾಗಿದೆ.

ನಮ್ಮ ಬೆಂಗಳೂರು ಫೌಂಡೇಷನ್‌ನ ರಿಸರ್ಚ್ ಅನಾಲಿಸ್ಟ್ ಎಂ.ಲಕ್ಷ್ಮೀಕಾಂತ್ ಅವರು ಈ ಕುರಿತು ಮಾತನಾಡಿದ್ದಾರೆ, 'ಪೊಲೀಸರಿಗೆ ದೂರು ನೀಡಿದ್ದೇವೆ. ಎಫ್‌ಐಆರ್‌ ದಾಖಲು ಮಾಡಲಾಗಿದೆ. ಎರಡು ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಲಾಗುತ್ತದೆ' ಎಂದು ಹೇಳಿದ್ದಾರೆ.

English summary
United Bengaluru Nagarika Citizens watch committee complaint to Ashok Nagar police for illegal dumping of sewage in the rajakaluve by BWSSB.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X