ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುನಿ, ಮಂದಾಕಿನಿ ಹೊಯ್ದಾಟದ ಬದುಕು ತೆರೆದಿಡುವ ಮೋಕ್ಷ-ಮೌನಿ

By Nayana
|
Google Oneindia Kannada News

ಬೆಂಗಳೂರು,ಜು.10: ಕಲಾರಂಗ ಟ್ರಸ್ಟ್ ರಂಗತಂಡದಿಂದ ಮೋಕ್ಷ-ಮುನಿ ನಾಟಕವು ಜು.12ರಂದು ಕೆಎಚ್‌ ಕಲಾಸೌಧದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಈ ನಾಟಕವು ಸೇತುರಾಮ್ ಅವರ ನಾವಲ್ಲ ಕಥಾಸಂಕನದಿಂದ ಆಯ್ದುಕೊಳ್ಳಲಾಗಿದೆ. ಎಸ್‌, ಭಗತ್‌ ರಾಜ್‌ ಅವರು ರಂಗರೂಪ ನೀಡಿ, ನಿರ್ದೇಶಿಸಿರುವ ನಾಟಕವು ಜು.12ರಂದು ಹನುಮಂತನಗರದಲ್ಲಿರುವ ಕೆಎಚ್‌ ಕಲಾಸೌಧದಲ್ಲಿ ನಡೆಯಲಿದೆ.

ಸೇತುರಾಮ್‌ ಅವರ ಮಾಸ್ತಿ ಪುರಸ್ಕೃತ ಕೃತಿ ನಾನಲ್ಲ ಎಂಬ ಕಥಾಸಂಕಲನದಿಂದ ಆಯ್ದ ಎರಡು ಕಥೆಗಳ ರಂಗರೂಪವೇ ಮೋಕ್ಷ-ಮೌನಿ. 100 ರೂ. ಪ್ರವೇಶ ಶುಲ್ಕವಿರುತ್ತದೆ.

Sethurams Moksha- Mouni play performance on Wednesday

ಸರ್ವವನ್ನು ತ್ಯಜಿಸಿ ವೈರಾಗಿಯೆನಿಸಿಕೊಂಡಿದ್ದ ಆಚಲ ಮಠದ ಸ್ವಾಮೀಜಿ ಚೂಡಾಮಣಿ, ಪೀಠದ ಮೇಲಿನ ಮೋಹಕ್ಕೋ, ಧರ್ಮ ಕಾಯುತ್ತೇನೆಂಬ ಹುಸಿ ನಂಬಿಕೆಗೋ, ಅಪ್ರಾಮಾಣಿಕರೆನಿಸಿಕೊಂಡಿದ್ದ ರಾಜಕೀಯ ಪಕ್ಷದ ಲೀಡರ್ಸ್‌ ಹಾಗೂ ಮತ್ತಿತರೆ ಪ್ರೊಫೆಷನಲ್ಸ್ ಮುಚ್ಚಿಟ್ಟ ಕೋಟ್ಯಂತರ ಆಸ್ತಿ ಕಾದ ಪಾಪಕ್ಕೆ ಮೋಕ್ಷ ಹೊಂದಿದ್ದರು.

ಇದರ ಕಥೆ ಒಂದೆಡೆಯಾದರೆ, ಇತ್ತ ಹೆಣ್ಣುತನ ಉಳಿಸುವುದೋ ಅಥವಾ ತನ್ನ ಗಂಡನೆಂಬ ವ್ಯಕ್ತಿಗೆ ಸಂಪೂರ್ಣವಾಗಿ ಸಮರ್ಪಿಸುವುದೋ ಎಂಬ ಗೊಂದಲಗಳ ಮಧ್ಯೆ ಬದುಕಿ-ಸಾಯುತ್ತಿದ್ದ ಮಂದಾಕಿನಿಯ ಪಾತ್ರ ಇನ್ನೊಂದೆಡೆ. ಆಸೆಯಿದ್ದರೂ ತನಗೆ ಗರ್ಭ ಧರಿಸುವ ಶಕ್ತಿಯಿಲ್ದ ಹೆಣ್ಣು ಹೇಗೆ ಸಮಾಜದ ಮಾತುಗಳಿಗೆ ಗುರಿಯಾಗುತ್ತಾಳೆ.

Sethurams Moksha- Mouni play performance on Wednesday

ಆಗಿನ ಅವರ ಮನಸ್ಥಿತಿ ಹೇಗಿರುತ್ತದೆ, ತನ್ನ ಸರ್ವಸ್ವವೆಂದುಕೊಂಡಿದ್ದ ಗಂಡಸೇ ಅವನ ಅಪ್ಪ-ಅಮ್ಮನ ಪರವಾಗಿದ್ದಾಗ ಆಗುವ ಮಾನಸಿಕ ಹಿಂಸೆ, ಇವೆಲ್ಲವನ್ನೂ ಮೆಟ್ಟಿ ನಿಲ್ಲುವ ಬಗೆಯನ್ನು ಮಂದಾಕಿನಿಯ ಪಾತ್ರ ಬಿಂಬಿಸುತ್ತದೆ. ಈ ವಿಚಾರಗಳನ್ನು ಓದುವುದರ ಜತೆಗೆ ನಾಟಕವನ್ನು ನೋಡಿದಾಗ ಇನ್ನಷ್ಟು ಮಾಹಿತಿ ಲಭ್ಯವಾಗುತ್ತದೆ.

English summary
Kannada play 'Moksha - Mouni' written by Sethuram will be performed by Kalaranga team on July 12 at 7.30pm at KH Kalasoudha in Hanumantha Nagar. The play was extracted from award winning book 'Navalla'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X