ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆಯಿಂದಾಗಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಯಲ್ಲಿ ಕುಸಿತ

By Nayana
|
Google Oneindia Kannada News

ಬೆಂಗಳೂರು, ಮೇ 17: ರಾಜ್ಯ ವಿಧಾನಸಭೆ ಚುನಾವಣೆ ಪರಿಣಾಮ ಬಿಬಿಎಂಪಿಯ ಆದಾಯ ಕ್ಷೀಣಿಸಿದೆ. ಹೀಗಾಗಿ ಕಳೆದ 15 ದಿನಗಳಲ್ಲಿ ಕೇವಲ 100 ಕೋಟಿ ರೂ.ಗಳಷ್ಟೇ ಆಸ್ತಿ ತೆರಿಗೆ ಸಂಗ್ರಹವಾಗಿದೆ.

ಚುನಾವಣಾ ಕೆಲಸದಿಂದಾಗಿ ಅಧಿಕಾರಿಗಳು ಕಳೆದೊಂದು ತಿಂಗಳಿನಿಂದ ಹೈರಾಣಾಗಿದ್ದಾರೆ. ಹೀಗಾಗಿಯೇ ಬಿಬಿಎಂಪಿ ಕೆಲಸದ ಬಗ್ಗೆ ಗಮನ ಹರಿಸಿಲ್ಲ. ಅದರ ಪರಿಣಾಮ ಬಿಬಿಎಂಪಿ ಆದಾಯದ ಮೇಲೆ ಬಿದ್ದಿದೆ. ಕಂದಾಯ ಅಧಿಕಾರಿ ಸೇರಿ ಎಲ್ಲರೂ ಚುನಾವಣಾ ಕೆಲಸದಲ್ಲಿ ತೊಡಗಿದ್ದರಿಂದಾಗಿ ಆಸ್ತಿ ತೆರಿಗೆ ಸಂಗ್ರಹ ಕುಂಠಿತವಾಗಿದೆ.

ಈಗ ಬಿಡಿಎ ತೆರಿಗೆಯನ್ನೂ ಆನ್‌ಲೈನ್‌ನಲ್ಲಿ ಪಾವತಿಸಬಹುದು!ಈಗ ಬಿಡಿಎ ತೆರಿಗೆಯನ್ನೂ ಆನ್‌ಲೈನ್‌ನಲ್ಲಿ ಪಾವತಿಸಬಹುದು!

ಏಪ್ರಿಲ್ ಅಂತ್ಯದಲ್ಲಿ 930-940 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಆದರೆ, ಕಳೆದ 15 ದಿನಗಳಿಂದ ತೆರಿಗೆ ಸಂಗ್ರಹದಲ್ಲಿ ಕುಂಠಿತವಾಗಿದ್ದು, ಈವರೆಗೆ ಕೇವಲ 100 ಕೋಟಿ ರೂ. ಬಂದಿದೆ. ಆ ಮೂಲಕ ಒಟ್ಟು 1,040 ಕೋಟಿ ರೂ. ಸಂಗ್ರಹವಾಗಿದೆ.

Set back for BBMP tax collection

ವಿಸ್ತರಣೆಯಾಗದ ರಿಯಾಯಿತಿ: ಪ್ರತಿ ವರ್ಷ ಶೇ.5 ರಿಯಾಯಿತಿ ಸೌಲಭ್ಯ ಏಪ್ರಿಲ್‌ನಲ್ಲಿ ಮುಗಿದರೂ ಅದನ್ನು ಮೇ ಅಂತ್ಯದವರೆಗೆ ವಿಸ್ತರಿಸಲಾಗುತ್ತಿತ್ತು. ಆದರೆ ಈ ಬಾರಿ ರಾಜ್ಯ ವಿಧಾನಸಭೆ ಚುನಾವಣೆಯಿದ್ದ ಕಾರಣದಿಂದ ಏಪ್ರಿಲ್‌ ಅಂತ್ಯದಲ್ಲಿ ಮುಗಿದ ರಿಯಾಯಿತಿ ಅವಧಿಯನ್ನು ಬಿಬಿಎಂಪಿ ವಿಸತರಿಸಿರಲಿಲ್ಲ. ಹೀಗಾಗಿ ಆಸ್ತಿ ಮಾಲೀಕರು ಕೂಡ ತೆರಿಗೆ ಪಾವತಿಸಲು ಮುಂದಾಗಿಲ್ಲ.

English summary
As model code of conduct was imposed, BBMP has received huge set back on tax collection in the last one month. The officials have said that only Rs.100 crore was collected in the month of April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X