ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಯುಧ ಪೂಜೆ ವಿವಾದ : ಮುತ್ತಪ್ಪ ರೈ ವಿರುದ್ಧದ ತನಿಖೆಗೆ ತಡೆ

|
Google Oneindia Kannada News

ಬೆಂಗಳೂರು, ನವೆಂಬರ್ 14 : ಆಯುಧ ಪೂಜೆ ದಿನ ಶಸ್ತ್ರಾಸ್ತ್ರ ಇಟ್ಟು ಪೂಜೆ ಮಾಡಿದ ಪ್ರಕರಣದಲ್ಲಿ ಮುತ್ತಪ್ಪ ರೈ ಅವರಿಗೆ ರಿಲೀಫ್ ಸಿಕ್ಕಿದೆ. ಮುತ್ತಪ್ಪ ರೈ ವಿರುದ್ಧ ನಡೆಯುತ್ತಿದ್ದ ಸಿಸಿಬಿ ತನಿಖೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಬೆಂಗಳೂರಿನ 63ನೇ ಸೆಷನ್ಸ್ ನ್ಯಾಯಾಲಯ ಬುಧವಾರ ಮುತ್ತಪ್ಪ ರೈ ವಿರುದ್ಧ ನಡೆಯುತ್ತಿದ್ದ ತನಿಖೆಗೆ ತಡೆಯಾಜ್ಞೆ ನೀಡಿದೆ. ಮುತ್ತಪ್ಪ ರೈ ಅವರು ತನಿಖೆಗೆ ತಡೆಯಾಜ್ಞೆ ನೀಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

ಆಯುಧ ಪೂಜೆ ತಂದ ಸಂಕಷ್ಟ, ಮುತ್ತಪ್ಪ ರೈಗೆ ಸಿಸಿಬಿ ನೊಟೀಸ್‌ಆಯುಧ ಪೂಜೆ ತಂದ ಸಂಕಷ್ಟ, ಮುತ್ತಪ್ಪ ರೈಗೆ ಸಿಸಿಬಿ ನೊಟೀಸ್‌

ಮುತ್ತಪ್ಪ ರೈ ಅವರಿಗೆ ಭದ್ರತೆ ನೀಡುತ್ತಿರುವ ಬ್ಯಾಕ್ ಕ್ಯಾಟ್ ಸೆಕ್ಯುರಿಟಿ ಏಜೆನ್ಸಿ ಶಸ್ತ್ರಾಸ್ತ್ರಗಳಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದೆ. ಎಲ್ಲಾ ದಾಖಲೆಗಳು ಕಾನೂಬು ಬದ್ಧವಾಗಿದೆ. ಆದ್ದರಿಂದ, ಸಂಸ್ಥೆ ಮೇಲಿನ ತನಿಖೆಯನ್ನು ನಿಲ್ಲಿಸುವಂತೆ ಕೋರ್ಟ್ ಸೂಚನೆ ನೀಡಿದೆ.

ಪುತ್ತೂರು ಮಹಾಲಿಂಗೇಶ್ವರ ದೇಗುಲಕ್ಕೆ ಮುತ್ತಪ್ಪ ರೈ ದಂಪತಿ ಭೇಟಿಪುತ್ತೂರು ಮಹಾಲಿಂಗೇಶ್ವರ ದೇಗುಲಕ್ಕೆ ಮುತ್ತಪ್ಪ ರೈ ದಂಪತಿ ಭೇಟಿ

Sessions court stays inquiry against Muthappa Rai

ಆಯುಧ ಪೂಜೆಯ ದಿನ ಮುತ್ತಪ್ಪ ರೈ ಅವರು ಕತ್ತಿ, ಗನ್, ರಿವಾಲ್ವಾರ್ ಇಟ್ಟು ಪೂಜೆ ಮಾಡಿದ್ದರು. ಈ ಪೂಜೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಭೂ ಹಗರಣ ಸಂಬಂಧ ಸಿಐಡಿಯಿಂದ ಮುತ್ತಪ್ಪ ರೈ ವಿಚಾರಣೆಭೂ ಹಗರಣ ಸಂಬಂಧ ಸಿಐಡಿಯಿಂದ ಮುತ್ತಪ್ಪ ರೈ ವಿಚಾರಣೆ

ಸಿಸಿಬಿ ಪೊಲೀಸರು ಶಸ್ತ್ರಾಸ್ತ್ರಗಳ ಬಗ್ಗೆ ತನಿಖೆ ನಡೆಸಲು ಆರಂಭಿಸಿದ್ದರು. ಮುತ್ತಪ್ಪ ರೈ ಅವರನ್ನು ಸಿಸಿಬಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗಿತ್ತು. ಮುತ್ತಪ್ಪ ರೈ ಅವರು ತನಿಖೆಗೆ ತಡೆಯಾಜ್ಞೆ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು.

English summary
Bengaluru 63 Sessions court stayed CCB inquiry against N.Muthappa Rai the flamboyant gangster-turned-Kannada activist. Muthappa Rai displayed the weapons during an Ayudha Puja event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X