ಸೆ.15ಕ್ಕೆ ಬೆಂಗಳೂರಿಗೆ ಬರ್ತಾಳೆ ನಟಿ ಇಲಿಯಾನಾ ಡಿಕ್ರೂಜ್

Posted By:
Subscribe to Oneindia Kannada

ಬೆಂಗಳೂರು, ಸೆ.8: ಬೆಂಗಳೂರಿನ ಗರುಡಾ ಮಾಲ್ ಗೆ ಸೆ.15ನೇ ತಾರೀಕು ನಟಿ ಇಲಿಯಾನಾ ಡಿ ಕ್ರೂಜ್ ಬರ್ತಿದ್ದಾಳೆ. ಲಾ-ಸೆಂಜಾ ಸ್ಟೋರ್ ಉದ್ಘಾಟನೆ ಅಂದು ಮಧ್ಯಾಹ್ನ 3.30ಕ್ಕೆ ಆಗುತ್ತಿದ್ದು, 'ನ್ಯೂ ಬಿಯಾಂಡ್ ಸೆಕ್ಸಿ ಕಲೆಕ್ಷನ್' ವಿಷಯವಾಗಿ ಆಕೆಯ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾಳೆ.

September 15th Ileana dcruz will visit Bengaluru fashion store

ಕೆನಡಾ ಮೂಲದ ಫ್ಯಾಷನ್ ವಸ್ತ್ರಗಳ ಮಾರಾಟ ಮಾಡುವ ಲಾ-ಸೆಂಜಾ ಬೆಂಗಳೂರಿನಲ್ಲಿ ಮಳಿಗೆ ತೆರೆಯುತ್ತಿದ್ದು, ಈ ಸಂದರ್ಭದಲ್ಲಿ ಚೆಲುವೆ ಇಲಿಯಾನಾಳನ್ನು ಆಹ್ವಾನಿಸಲಾಗಿದೆ. ಕೆನಡಾವೊಂದರಲ್ಲೇ ಈ ಕಂಪೆನಿಯ ಮುನ್ನೂರಕ್ಕೂ ಹೆಚ್ಚು ಮಳಿಗೆಗಳಿವೆ. ನಲವತ್ತೈದು ದೇಶಗಳಲ್ಲಿ 487 ಮಳಿಗೆಗಳಿವೆ.

September 15th Ileana dcruz will visit Bengaluru fashion store

ಮಹಿಳೆಯರ ಒಳ ಉಡುಪು, ನೈಟ್ ವೇರ್ ಇತರ ವಸ್ತ್ರಗಳನ್ನು ಈ ಸ್ಟೋರ್ ನಲ್ಲಿ ಮಾರಾಟ ಮಾಡಲಾಗುವುದು. ಹೊಸದಾಗಿ ಮಾರುಕಟ್ಟೆಗೆ ಬಂದಿರುವ, ನವನವೀನ ವಿನ್ಯಾಸದ ಮಹಿಳೆಯರ ಉಡುಪುಗಳು, ವ್ಯಾನಿಟಿ ಬ್ಯಾಗ್ ಗೆ ಭಾರವಾಗದ ಬೆಲೆಯಲ್ಲಿ ಈ ಮಳಿಗೆಯಲ್ಲಿ ದೊರೆಯುತ್ತವೆ ಎಂಬುದು ಕಂಪೆನಿಯ ಆಶ್ವಾಸನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actor ileana dcruz will visit Bangalore Garuda mall on the occasion of la-senza fashion store inauguration.
Please Wait while comments are loading...