'ವೀರಶೈವ-ಲಿಂಗಾಯತ' ಧರ್ಮಕ್ಕಾಗಿಯೇ ಹೋರಾಟ: 'ಮಹಾಸಭೆ' ಘೋಷಣೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 2: ನಿರೀಕ್ಷೆಯಂತೆ, ವೀರಶೈವ- ಲಿಂಗಾಯತರು ಎಂಬ ಹೆಸರಿನಲ್ಲೇ ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕಾಗಿ ಹೋರಾಟ ನಡೆಸಲು ಅಖಿಲ ಭಾರತ ವೀರಶೈವ ಮಹಾಸಭೆ ನಿರ್ಧರಿಸಿದೆ.

ಬೆಂಗಳೂರಿನ ಮಹಾಸಭೆಯ ಕೇಂದ್ರ ಕಚೇರಿಯಲ್ಲಿ ಬುಧವಾರ (ಜುಲೈ 2) ನಡೆದ ಮಹಾಸಭೆಯ ಪದಾಧಿಕಾರಿಗಳ ಸಭೆಯಲ್ಲಿ, ಈ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದೆ.

'ಒನ್ ಇಂಡಿಯಾ'ಕ್ಕಾಗಿ ಮಾತೆ ಮಹದೇವಿ ನೀಡಿದ ವಿಶೇಷ ಸಂದರ್ಶನ

Veerashaiva Mahasabha

ಸಭೆಯಲ್ಲಿ ಮಾತನಾಡಿದ ಪ್ರಮುಖರು, 2013ರ ಜುಲೈ 7ರಂದು ಅಂದಿನ ಯುಪಿಎ ಸರ್ಕಾರದ ಗೃಹ ಸಚಿವರಾಗಿಗ್ದ ಸುಶೀಲ್ ಕುಮಾರ್ ಶಿಂಧೆ ಅವರನ್ನು ಭೇಟಿ ಮಾಡಿದ್ದ ವೀರಶೈವ ಮಹಾಸಭೆಯ ನಿಯೋಗ, ವೀರಶೈವ- ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿತ್ತು.

ಆನಂತರ, 2013ರ ಜುಲೈ 25ರಂದು ಶಾಸಕರಿಗೆ, ಸಂಸದರಿಗೆ ಸಲ್ಲಿಸಲಾದ ಅಭಿನಂದನಾ ಸಮಾರಂಭದಲ್ಲಿ ನಿರ್ಣಯವೊಂದನ್ನು ಅಂಗೀಕರಿಸಿ, ದೇಶದಲ್ಲಿರುವ 4 ಕೋಟಿ ವೀರಶೈವ- ಲಿಂಗಾಯತರನ್ನು ಒಗ್ಗೂಡಿಸುವ ದೃಷ್ಟಿಯಿಂದ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ, ವೀರಶೈವ-ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಲಾಗಿತ್ತು ಎಂಬುದನ್ನು ನೆನಪಿಸಿಕೊಂಡರು.

ಲಿಂಗಾಯತ-ವೀರಶೈವ ಎರಡೂ ಒಂದೇ, ಮಹಾಸಭಾ ಒಮ್ಮತದ ನಿರ್ಣಯ

ಹೀಗೆ, ಪ್ರತ್ಯೇಕ ಧರ್ಮಕ್ಕಾಗಿ ಹೋರಾಡಿದ ಜತೆಗಾರರನ್ನೇ ನಮ್ಮವರೇ ನಮ್ಮವರಲ್ಲ ಎನ್ನುವುದು ಸರಿಯಲ್ಲ. ವೀರಶೈವರು- ಲಿಂಗಾಯರು ಎಂಬ ವಿಚಾರವೇ ಸತ್ಯಕ್ಕೆ ದೂರವಾದದ್ದು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಸಭೆಯಲ್ಲಿ ನಾಲ್ಕು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದ್ದು, ಅವು ಈ ಕೆಳಗಿನಂತಿವೆ.

ವೀರಶೈವ ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಲ್ಲ. ಅಂಗೈಯ್ಯಲ್ಲಿ ಲಿಂಗವಿಡಿದು ಲಿಂಗಪೂಜೆ ಮಾಡುವ ವೀರಶೈವ ಲಿಂಗಾಯತರೆಲ್ಲರೂ ಒಂದೇ.

Bengaluru : Akhila Bharata Veerashaiva Mahasabha crucial meeting today
  • ಗುರು, ವಿರಕ್ತ, ಮಠಾಧೀಪತಿಗಳ, ಸಮಾಜದ ಪ್ರತಿನಿಧಿಗಳ, ಮುಖಂಡರ, ವಿಷಯ ತಜ್ಞರ ಸಭೆಯನ್ನು ಸದ್ಯದಲ್ಲೇ ಏರ್ಪಡಿಸಿ ಸರ್ವಾನುಮತದ ನಿರ್ಣಯ ಕೈಗೊಳ್ಳಲು ನಿರ್ಧಾರ.
  • ಒಂದು ಕಾಲದಲ್ಲಿ ಮಹಾಸಭೆಯ ಸದಸ್ಯರಾಗಿದ್ದು, ಈಗ ಅದರ ವಿರುದ್ಧ ತಿರುಗಿಬಿದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೌಹಾರ್ಧಯುತವಾಗಿ ಮಾತುಕತೆ ನಡೆಸಲು ನಿರ್ಧಾರ.
  • ಎಲ್ಲರಲ್ಲಿಯೂ ಒಮ್ಮತದ ಅಭಿಪ್ರಾಯ ರೂಪುಗೊಳ್ಳುವವರೆಗೆ ಸಮಾಜದ ಘನತೆ, ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಲು ಹಾಗೂ ತಮ್ಮ ಅಭಿಪ್ರಾಯವನ್ನು ಮಹಾಸಭೆಗೆ ತಿಳಿಸಲು ಮನವಿ ಮಾಡಲು ನಿರ್ಧಾರ.
  • ವೀರಶೈವ, ಲಿಂಗಾಯತ ಧರ್ಮದ ಬಗ್ಗೆ ಬಹಿರಂಗ ಹೇಳಿಕೆ ನೀಡವುದು, ಜನರಲ್ಲಿ ಗೊಂದರ ಮೂಡಿಸುವುದನ್ನು ನಿರ್ಬಂಧಿಸುವ ಬಗ್ಗೆ ನಿರ್ಧಾರ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Veerashaiva Mahasabha decided to demand for a separate religious status for Veerashaiva-Lingayat, but not only for Lingayat Community. In a meeting of governing council of Veerashaiva Mahasabha, also decided to convince the people to are protesting against Veerashaiva mahasabha.
Please Wait while comments are loading...