ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ತಡೆಯಲು ಮುಂದಾದ ಪಿಎಸ್‌ಐಗೆ ಸರ್ಕಲ್ ಇನ್‌ಸ್ಪೆಕ್ಟರ್ ಆವಾಜ್

By Nayana
|
Google Oneindia Kannada News

ಬೆಂಗಳೂರು, ಜೂನ್ 12: ಅಕ್ರಮ ಕಲ್ಲುಸಾಗಣಿಕೆ ಲಾರಿಯನ್ನು ತಡೆದ ಪಿಎಸ್‌ಐ ಮೇಲೆ ಸರ್ಕಲ್ ಇನ್‌ಸ್ಪೆಕ್ಟರ್ ಕಾದಾಟ ನಡೆಸಿರುವ ಘಟನೆ ಬೆಂಗಳೂರು ಹೊರವಲಯದ ದೇವನಹಳ್ಳಿಯಲ್ಲಿ ನಡೆದಿದೆ.

ದೇವನಹಳ್ಳಿ ತಾಲೂಕಿನ ವಿಶ್ವನಾಥಪುರದಲ್ಲಿ ಘಟನೆ ನಡೆದಿದ್ದು, ಅಕ್ರಮವಾಗಿ ಕಲ್ಲು ಸಾಗಾಣಿಕೆ ಮಾಡಲಾಗುತ್ತಿದೆ ಎನ್ನವು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಲಾರಿಯನ್ನು ಪಿಎಸ್‌ಐ ತಡೆದಿದ್ದಾರೆ ಆದರೆ ಲಾರಿಯನ್ನು ಏಕೆ ತಡೆದೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಪಿಎಸ್‌ಐ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನ ಸುತ್ತ ಕಲ್ಲು ಗಣಿಗಾರಿಕೆ ರದ್ದು!ಬನ್ನೇರುಘಟ್ಟ ಜೈವಿಕ ಉದ್ಯಾನ ಸುತ್ತ ಕಲ್ಲು ಗಣಿಗಾರಿಕೆ ರದ್ದು!

ಅಕ್ರಮ ಲಾರಿಗಳನ್ನು ಬಿಡುವಂತೆ ವಿಶ್ವನಾಥಪುರ ಪಿಎಸ್​ಐ ಶ್ರೀನಿವಾಸ್​​ಗೆ ಮೊಬೈಲ್​ ಮೂಲಕ ಅದೇ ತಾಲೂಕಿನ ವಿಜಯಪುರ ಸರ್ಕಲ್​ ಇನ್ಸ್​​ಪೆಕ್ಟರ್​​ ಮಂಜುನಾಥ್ ಧಮ್ಕಿ ಹಾಕಿದ್ದಾರೆ.

Senior officer warned PSI over ride on Illegal mining vehicle

ಜೆಡಿಎಸ್ ಮುಖಂಡರೊಬ್ಬರಿಗೆ ಸೇರಿದ ಅಕ್ರಮ ಲಾರಿಗಳಾಗಿದ್ದು, ಅದನ್ನು ತಡೆದಿದ್ದಕ್ಕೆ ಪಿಎಸ್​​ಐ-ಸರ್ಕಲ್​ ಇನ್ಸ್​ ಪೆಕ್ಟರ್​ ನಡುವೆ ಮಾತಿನ ಸಂಘರ್ಷ ನಡೆದಿದೆ. ಇಬ್ಬರು ಅಧಿಕಾರಿಗಳ ಏಕವಚನದ ನಿಂದನೆ ಜನರಿಗೆ ಮನರಂಜನೆ ಸಿಕ್ಕಿದ್ದು, ಇಬ್ಬರ ನಡುವಿನ ಮಾತಿನ ಸಂಘರ್ಷ ಈಗ ವೈರಲ್ ಆಗಿದೆ. ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Devanahalli PSI traced the illegal mining vehicle which allegedly belongs to local JDS leader. But local circle inspector pressurises to PSI to release the vehicle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X