ನಿಮ್ಮ ಮುದ್ದು ಕೃಷ್ಣ ನಮ್ಮ ಗ್ಯಾಲರಿಯಲ್ಲಿ ಪ್ರತ್ಯಕ್ಷನಾಗಬೇಕೆ? ಹೀಗೆ ಮಾಡಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 11: ಭಗವಾನ್ ಶ್ರೀಕೃಷ್ಣ ಎಂದರೆ ದೇವರು ಎಂಬ ಗೌರವಕ್ಕಿಂತ, ಆತ್ಮೀಯ ಸ್ನೇಹಿತ ಎಂಬ ಆಪ್ತತೆ! ಬೆಣ್ಣೆ ಕಳ್ಳ, ತನ್ನ ಸುತ್ತ ಗೋಪಿಕೆಯರು ಸುತ್ತುವಂತೆ ಮಾಡಿದ ರಸಿಕ, ಪಿಳ್ಳಂಗೋವಿ ನಾದದಲ್ಲೇ ರಾಧೆಯನ್ನು ಸೆಳೆದ ಮಾಂತ್ರಿಕ, ಕಂಸನಂಥ ಕ್ರೂರ ರಕ್ಕಸನನ್ನು ಎಳೆ ವಯಸ್ಸಿನಲ್ಲೇ ಕೊಂದ ದೈವತ್ವದ ಮೂರ್ತಿ.

ವೇಷ ತೊಟ್ಟು ಫೋಟೋಗೆ ಪೋಸ್ ನೀಡಿದ ಕಿಟ್ಟುಮರಿಗಳು!

ಇಂಥ ಶ್ರೀಕೃಷ್ಣನ ವೇಷವನ್ನು ನಿಮ್ಮ ಮಗುವಿಗೆ ಹಾಕಿ ಸಂಭ್ರಮಿಸುತ್ತಿದ್ದೀರಾ? ಹಾಗಾದರೆ ಆ ಚಿತ್ರ(ಹಳೆಯದಾದರೂ ಸರಿ)ವನ್ನು ನಮಗೂ ಕಳಿಸಿಕೊಡಿ. ನಿಮ್ಮ ಮುದ್ದುಕೃಷ್ಣ ನಮ್ಮ ಗ್ಯಾಲರಿಯಲ್ಲೂ ಪ್ರತ್ಯಕ್ಷನಾಗಲಿ.

Send your little Shrikrishna's photo to Oneindia, to make this Krishna Janmashtami very special

ಆಗಸ್ಟ್ 14 ರ ಕೃಷ್ಣ ಜನ್ಮಾಷ್ಟಮಿಯಂದು ನಿಮ್ಮ ಪುಟ್ಟ ಕೃಷ್ಣನ ಚಿತ್ರ ನಮ್ಮ ಗ್ಯಾಲರಿಯಲ್ಲಿ ಮೂಡಿಬರಲಿದೆ, ನೀವು ಕೇಳಿರದ ದೇಶಗಳಿಗೂ ನಿಮ್ಮ ಮಗುವಿನ ಚಿತ್ರ ಕಾಣಿಸುವಂತೆ ಮಾಡುವುದು ನಮ್ಮ ಜವಾಬ್ದಾರಿ. ಹೆಚ್ಚು ಚಿತ್ರವಿದ್ದರೆ kannada@oneindia.co.in ಗೆ ಇಮೇಲ್ ಮಾಡಿ, ಇಲ್ಲವೇ ಫೇಸ್ ಬುಕ್ ನಲ್ಲಿ ಮೆಸೇಜ್ ಮಾಡಿ.

ಮಗುವಿನ ಹೆಸರು, ಊರು, ಮಗುವಿನ ವಯಸ್ಸು, ತಂದೆ-ತಾಯಿಯ ಹೆಸರು ಚಿತ್ರದ ಜೊತೆಗಿರಲಿ. ಕೃಷ್ಣಾಷ್ಟಮಿಯ ದಿನ ನಿಮ್ಮ ಮುದ್ದು ಬೆಣ್ಣೆ ಕೃಷ್ಣ ನಮ್ಮ ಗ್ಯಾಲರಿಯಲ್ಲಿ ಪ್ರತ್ಯಕ್ಷನಾಗುತ್ತಾನೆ. ತಪ್ಪದೇ ನೋಡಿ...

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hindus across the world will be celebrating Shri Krishna Janmashtami on 14th Aug. I you have photos of your kids, dressed as little Krishna. Please send the photos to kannada@oneindia.co.in . You can send Photos by facebook also. Happy Krishna Janmashtami in advance
Please Wait while comments are loading...