ಭರ್ಜರಿ ಊಟ, ಸೆಲ್ಫಿ- ಗುಜರಾತ್ ಕಾಂಗ್ರೆಸ್ ಶಾಸಕರ ರೆಸಾರ್ಟ್ ದಿನಚರಿ

By: ಅನುಷಾ ರವಿ
Subscribe to Oneindia Kannada

ಗುಜರಾತ್ ನ ನಲವತ್ತಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಬಿಡದಿಯಲ್ಲಿರುವ ಈಗಲ್ ಟನ್ ರೆಸಾರ್ಟ್ ನಲ್ಲಿ ಠಿಕಾಣಿ ಹೂಡಿದ್ದಾರೆ. ಕಾಂಗ್ರೆಸ್ ಪಕ್ಷವೇನೋ ಆತಂಕದಲ್ಲಿ ಕುದ್ದು ಹೋಗುತ್ತಿದ್ದರೆ, ಶಾಸಕರು ಬಫೆ ಊಟ ಮಾಡುತ್ತಾ, ಉಚಿತವಾದ ಸ್ಪಾನಲ್ಲಿ ಆರೋಗ್ಯ ಕಾಳಜಿ ನೋಡಿಕೊಂಡು, ರೆಸಾರ್ಟ್ ನ ಗಾಲ್ಫ್ ಕೋರ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.

ರಾಜ್ಯ ಸಭೆ ಚುನಾವಣೆವರೆಗೆ ಗುಜರಾತ್ 'ಕೈ' ಶಾಸಕರು ಬೆಂಗ್ಳೂರಲ್ಲೇ?

ಈ ಶಾಸಕರಿಗೆ ಕರ್ನಾಟಕ ಕಾಂಗ್ರೆಸ್ ನಾಯಕರು ಜತೆಯಾಗಿದ್ದಾರೆ. ಈ ರೆಸಾರ್ಟ್ ನಲ್ಲಿ ರಾಯಲ್ ಕ್ಲಬ್ ಸೂಟ್ ಹಾಗೂ ಕ್ಲಬ್ ಸೂಟ್ ಇವೆ. ಮಾಮೂಲಿ ಕೋಣೆಗಳ ಜತೆಗೆ ಸ್ವಿಮಿಂಗ್ ಪೂಲ್ ಹಾಗೂ ಗಾಲ್ಫ್ ಕೋರ್ಸ್ ಕೂಡ ಇದೆ. ಅಂದಹಾಗೆ ಈ ರೆಸಾರ್ಟ್ ಇರುವುದು ಸಂಸದ ಡಿಕೆ ಸುರೇಶ್ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ.

Selfies, buffet and spa: What Gujarat Congress MLAs are doing in Bengaluru resort

ಒಂದು ಕೋಣೆಯ ಡಿಲಕ್ಸ್ ರೂಮಿಗೆ ಈ ರೆಸಾರ್ಟ್ ನಲ್ಲಿ 5 ಸಾವಿರ ರುಪಾಯಿ ಮೇಲ್ಪಟ್ಟ ದರ ಇದೆ. ಇದರ ಹೊರತಾಗಿ ತೆರಿಗೆ ಹಾಗೂ ಸೇವಾ ದರ ಸೇರಿಕೊಂಡಿದೆ. ಇನ್ನು ರೂಮ್ ದರಗಳು ಮಾತ್ರ ಐದರಿಂದ ಏಳು ಸಾವಿರ ರುಪಾಯಿ ಇದೆ. ಸೂಟ್ ದರ ಹನ್ನೆರಡು ಸಾವಿರ ಆಗುತ್ತದೆ. ರೆಸಾರ್ಟ್ ನೊಳಗೆ ಯಾರಿಗೂ ಪ್ರವೇಶ ಇಲ್ಲ. ಶಾಸಕರು ತೆಗೆದುಕೊಂಡ ಸೆಲ್ಫಿಗಳೇ ಹರಿದಾಡುತ್ತಿವೆ.

ಗುಜರಾತ್ 'ಕೈ' ಶಾಸಕರ ಹೈಜಾಕ್; ಬಿಡದಿ ಬಳಿಯ ರೆಸಾರ್ಟ್ ನಲ್ಲಿ ವಾಸ್ತವ್ಯ

"ಅವರು ನಮ್ಮ ಅತಿಥಿಗಳು. ಗುಜರಾತ್ ನ ಎಲ್ಲ ಕಾಂಗ್ರೆಸ್ ಶಾಸಕರು ಇಲ್ಲಿದ್ದಾರೆ. ಅವರಲ್ಲಿ ಕೆಲವರು ಇಲ್ಲಿನ ಕೆಲ ದೇವಸ್ಥಾನಗಳಿಗೆ ಭೇಟಿ ನೀಡಬೇಕು ಅಂತಿದ್ದಾರೆ. ಅವರಿಗಾಗಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಕೆಲ ದಿನ ಇಲ್ಲಿ ಉಳಿಯುತ್ತಾರೆ. ಸುತ್ತಮುತ್ತಲ ಪ್ರದೇಶಗಳನ್ನು ನೋಡುತ್ತಾರೆ. ಕರ್ನಾಟಕ ಪ್ರಶಾಂತವಾದ ರಾಜ್ಯ. ಆದ್ದರಿಂದ ಆಯ್ಕೆ ಮಾಡಿಕೊಂಡಿದ್ದಾರೆ" ಎಂದು ಸಂಸದ ಸುರೇಶ್ ಹೇಳುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
More than 40 legislators of the Congress from Gujarat have been herded at a luxurious resort in Bengaluru. While the party is firefighting, the MLAs are enjoying buffet meals, free spa services apart from clicking selfies at the golf course of the resort.
Please Wait while comments are loading...