ಬನ್ನೇರುಘಟ್ಟಕ್ಕೆ ಅಕ್ರಮ ಪ್ರವೇಶ, ಸೆಲ್ಫಿ ತೆಗೆಯುವಾಗ ಆನೆಯಿಂದ ಸಾವು

Posted By:
Subscribe to Oneindia Kannada

ಬೆಂಗಳೂರು, ಜುಲೈ 27: ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಅಕ್ರಮವಾಗಿ ಪ್ರವೇಶ ಪಡೆದ ವ್ಯಕ್ತಿಯೊಬ್ಬ ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ದುರಂತ ಸಾವಿಗೀಡಾಗಿದ್ದಾನೆ.

ಕೆಸರಲ್ಲಿ ಸಿಕ್ಕ ಪಿಕಪ್ ಎಳೆದೊಯ್ದ ಅಭಿಮನ್ಯು ಸಾಹಸ ಗಾಥೆ

27 ವರ್ಷದ ಅಭಿಲಾಷ್ ಮೃತ ಯುವಕ. ಉದ್ಯಾನವನ್ನು ಅಕ್ರಮವಾಗಿ ಪ್ರವೇಶಿಸಿದ ಆತ ಆನೆ 'ಸುಂದರ್' ಜತೆಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾನೆ. ಬೆಂಗಳೂರಿನ ಹನುಮಂತನಗರದ ನಿವಾಸಿಯಾದ ಆತ ಮಾರಾಟ ಪ್ರತಿನಿಧಿಯಾಗಿ ಉದ್ಯೋಗ ಮಾಡುತ್ತಿದ್ದ.

Selfie attempt kills man in Bengaluru’s Bannerghatta Park

ಮಂಗಳವಾರ ಸಂಜೆ ಅಭಿಲಾಷ್ ಮತ್ತು ಸ್ನೇಹಿತರು ಉದ್ಯಾನದೊಳಕ್ಕೆ ತೆರಳಿದ್ದಾರೆ. ಮಂಗಳವಾರ ಉದ್ಯಾನ ಬಂದ್ ಆಗಿರುತ್ತದೆ. ಇವರೆಲ್ಲ ಹಕ್ಕಿಪಿಕ್ಕಿ ಕಾಲೋನಿ ಕಡೆಯಿಂದ ಒಳ ಪ್ರವೇಶಿಸಿದ್ದಾರೆ.

ಅಭಿಲಾಷ್ ಮತ್ತು ಆತನ ಮೂವರು ಸ್ನೇಹಿತರು ಮದ್ಯಪಾನ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಪ್ಪತ್ತು ಆನೆಗಳನ್ನು ಒಂದೇ ಕಡೆ ಇರಿಸಿದ್ದ ಸ್ಥಳಕ್ಕೆ ತೆರಳಿದ್ದಾರೆ.

ಐರಾವತಿ ಹಡೆದಿದ್ದಾಳೆ, ತಾಯಿ ಮಗು ಆರೋಗ್ಯವಾಗಿದ್ದಾರೆ

ಯಾವಾಗ ಆನೆಗಳು ಅಭಿಲಾಷ್ ಮೇಲೆ ದಾಳಿಗೆ ಮುಂದಾದವೋ ಇತರ ಮೂವರು ಅಲ್ಲಿಂದ ಓಡಿ ಹೋಗಿದ್ದಾರೆ. ಸುಮ್ಮನಾಗಿದ್ದಾರೆ. ಆದರೆ ಮಂಗಳವಾರ ಸಂಜೆ ಅಭಿಲಾಷ್ ಜತೆಗೆ ಇದ್ದುದಾಗಿ ಒಪ್ಪಿಕೊಂಡಿದ್ದಾರೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ ಅಭಿಲಾಷ್ ಗೆ ಆನೆಗಳೆಂದರೆ ಬಲು ಇಷ್ಟವಿತ್ತು. ತೀರಾ ತಂಟೆಕೋರ ಆನೆಗಳೆಂದು ಅವುಗಳನ್ನು ಒಂದೆಡೆ ಇಟ್ಟು, ತರಬೇತಿ ನೀಡಲಾಗುತ್ತಿತ್ತು. ತೀರಾ ಆಕ್ರಮಣಕಾರಿ ಧೋರಣೆಯ ಸುಂದರ್ ಎಂಬ ಆನೆಯಿಂದ ಅಭಿಲಾಷ್ ಮೃತಪಟ್ಟಿದ್ದಾನೆ. ಆ ಬಗ್ಗೆ ಉದ್ಯಾನದ ನೌಕರರೊಬ್ಬರು ನಿರ್ದೇಶಕ ಸಂತೋಷ್ ಗೆ ಮಾಹಿತಿ ಕೊಟ್ಟಿದ್ದಾರೆ.

ಆ ನಂತರ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಪ್ರಗತಿಯಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru Hanumantha nagar man killed by elephant in Bannerghatta park recently.
Please Wait while comments are loading...