ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಚೆಕ್‌ ಇನ್ ಸುಲಭ: ಕೇವಲ 45 ಸೆಕೆಂಡ್

|
Google Oneindia Kannada News

Recommended Video

kempegowda international airport ; ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಚೆಕ್‌ ಇನ್ ಈಗ ಕೇವಲ 45 ಸೆಕೆಂಡ್..!

ಬೆಂಗಳೂರು, ನವೆಂಬರ್ 16: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನು ಮುಂದೆ ಕೇವಲ 45 ಸೆಕೆಂಡುಗಳಲ್ಲಿ ಲಗೇಜ್ ಚೆಕ್ ಇನ್ ಮಾಡಬಹುದಾಗಿದೆ.

ಸ್ವಯಂ ಚಾಲಿತ ಸೆಲ್ಫ್ ಬ್ಯಾಗ್ ಡ್ರಾಪ್ ಯಂತ್ರಗಳನ್ನು ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿದೆ. ಈ ವ್ಯವಸ್ಥೆ ಅಳವಡಿಸಿಕೊಂಡ ದೇಶದ ಮೊದಲ ವಿಮಾನ ನಿಲ್ದಾಣ ಇದಾಗಿದೆ.

ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ

ಮ್ಯಾಟೆರ್ನಾ ಐಪಿಎಸ್ ಎಂಬ ಕಂಪನಿ ಈ ಯಂತ್ರಗಳನ್ನು ಅಳವಡಿಸಿದೆ.ಆರಂಭದಲ್ಲಿ ಏರ್ ಏಷಿಯಾ ಮತ್ತು ಸ್ಪೈಸ್ ಜೆಟ್ ಪ್ರಯಾಣಿಕರ ಬಳಕೆಗೆ ಮಾತ್ರ ಲಭ್ಯವಿರಲಿದೆ. ನಂತರದ ದಿನಗಳಲ್ಲಿ ಇತರೆ ಏರ್‌ಲೈನ್ ಪ್ರಯಾಣಿಕರಿಗೂ ಈ ಸೌಲಭ್ಯ ದೊರೆಯಲಿದೆ.

16 ಬ್ಯಾಗ್ ಡ್ರಾಪ್ ಯಂತ್ರ ಅಳವಡಿಕೆ

16 ಬ್ಯಾಗ್ ಡ್ರಾಪ್ ಯಂತ್ರ ಅಳವಡಿಕೆ

ತಂತ್ರಜ್ಞಾನ ಮತ್ತು ಯಂತ್ರ ಆಧರಿತ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಕೆಐಎನಲ್ಲಿ 16 ಬ್ಯಾಗ್ ಡ್ರಾಪ್ ಯಂತ್ರಗಳನ್ನು ಅಳವಡಿಸಲಾಗಿದೆ. ಇದರಿಂದ ಲಗೇಜ್ ಚೆಕ್ ಇನ್ ಪ್ರಕ್ರಿಯೆ ವೇಗ ಪಡೆಯಲಿದ್ದು, ಪ್ರಯಾಣಿಕರು ತಮ್ಮ ಲಗೇಜ್ ಚೆಕ್ ಇನ್ ಗಾಗಿ ಹಲವು ಹೊತ್ತಿನವರೆಗೆ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ.

ಬೆಂಗಳೂರಿನಿಂದ ಶಿರಡಿಗೆ ನಿತ್ಯ ವಿಮಾನ ಸೇವೆ ಬೆಂಗಳೂರಿನಿಂದ ಶಿರಡಿಗೆ ನಿತ್ಯ ವಿಮಾನ ಸೇವೆ

ಬ್ಯಾಗ್ ಡ್ರಾಪ್ ಹೇಗೆ ಕಾರ್ಯ ನಿರ್ವಹಿಸುತ್ತೆ?

ಬ್ಯಾಗ್ ಡ್ರಾಪ್ ಹೇಗೆ ಕಾರ್ಯ ನಿರ್ವಹಿಸುತ್ತೆ?

ಸೆಲ್ಫ್ ಚೆಕ್ ಇನ್ ಕಿಯೋಸ್ಕ್ ನಲ್ಲಿ ಪ್ರಯಾಣಿಕರು ಮೊದಲ ಬೋರ್ಡಿಂಗ್ ಪಾಸ್ ಮತ್ತು ಬ್ಯಾಗ್ ಡ್ಯಾಗ್ ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು. ಬ್ಯಾಗ್ ಟ್ಯಾಗ್ ಅಂಟಿಸಿದ ಬಳಿಕ ಬ್ಯಾಗ್ ಡ್ರಾಪ್ ಮಷಿನ್ ಬಳಿ ತೆರಳಿ, ಬೋರ್ಡಿಂಗ್ ಪಾಸ್ ಸ್ಕ್ಯಾನ್ ಮಾಡಿ, ಬ್ಯಾಗ್ ಡ್ರಾಪ್ ಪ್ರಕ್ರಿಯೆ ಆರಂಭಿಸಬೇಕು.

ಬೆಂಗಳೂರಿನಿಂದ ಹೊಸ ಮಾರ್ಗದಲ್ಲಿ ಹಲವು ವಿಮಾನಗಳ ಸಂಚಾರ ಬೆಂಗಳೂರಿನಿಂದ ಹೊಸ ಮಾರ್ಗದಲ್ಲಿ ಹಲವು ವಿಮಾನಗಳ ಸಂಚಾರ

ಚೆಕ್ ಇನ್ ಕಿಯೋಸ್ಕ್

ಚೆಕ್ ಇನ್ ಕಿಯೋಸ್ಕ್

ವಿಮಾನ ನಿಲ್ದಾಣದಲ್ಲಿ ಈಗಾಗಲೇ ಸಾಕಷ್ಟು ಚೆಕ್ ಇನ್ ಕಿಯೋಸ್ಕ್ ಗಳಿದ್ದು, ಹೊಸದಾಗಿ = ಮತ್ತೆ 32 ಕಿಯೋಸ್ಕ್ ಗಳನ್ನು ಶೀಘ್ರದಲ್ಲೇ ಅಳವಡಿಸಲಾಗುತ್ತದೆ. ಪ್ರಯಾಣಿಕರು ಬೋರ್ಡಿಂಗ್ ಪಾಸ್ ಮತ್ತು ಬ್ಯಾಗೇಜ್ ಡ್ಯಾಗ್ ಪ್ರಿಂಟ್ ಔಟ್ ತ್ವರಿತವಾಗಿ ತೆಗೆದುಕೊಳ್ಳಲು ಕಿಯೋಸ್ಕ್ ಗಳು ಅನುಕೂಲವಾಗಲಿವೆ.

ಕೆಂಪೇಗೌಡ ಏರ್‌ಪೋರ್ಟ್ ನಲ್ಲಿ ಲಗೇಜ್ ತಪಾಸಣೆಗೆ ಹೊಸ ತಂತ್ರಜ್ಞಾನ ಕೆಂಪೇಗೌಡ ಏರ್‌ಪೋರ್ಟ್ ನಲ್ಲಿ ಲಗೇಜ್ ತಪಾಸಣೆಗೆ ಹೊಸ ತಂತ್ರಜ್ಞಾನ

ಬೆಂಗಳೂರಿನಿಂದ ಲಂಡನ್‌ಗೆ ನೇರ ವಿಮಾನ

ಬೆಂಗಳೂರಿನಿಂದ ಲಂಡನ್‌ಗೆ ನೇರ ವಿಮಾನ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯುರೋಪ್ ರಾಷ್ಟ್ರಗಳಿಗೆ ನೇರವಾಗಿ ಬಾಗಿಲು ತೆರೆಯುವ ಮೂಲಕ ಹೊಸ ದಾಖಲೆಗೆ ನಾಂದಿ ಹಾಡಿದೆ. ಲಂಡನ್-ಬೆಂಗಳೂರು ನಡುವೆ ಹಾರಾಟಕ್ಕೆ ಏರ್ ಇಂಡಿಯಾ, 256 ಸೀಟುಗಳ ಬೋಯಿಂಗ್ ಡ್ರೀಮ್‌ಲೈನರ್ ವಿಮಾನಗಳನ್ನು ಬಳಕೆ ಮಾಡುತ್ತಿದೆ. ಬ್ರಿಟಿಷ್ ಏರ್‌ವೇಸ್ ಈಗಾಗಲೇ ಲಂಡನ್-ಬೆಂಗಳೂರು ನಡುವೆ ನೇರ ವಿಮಾನ ಸಂಪರ್ಕ ಕಲ್ಪಿಸಿದೆ. ಆದರೆ, ಈ ಮಾರ್ಗದಲ್ಲಿ ಬೆಂಗಳೂರಿನಿಂದ ಪ್ರಯಾಣಿಕರ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಈ ನಿರ್ಧಾರ ಕೈಗೊಂಡಿದೆ.

ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ

English summary
Over 16 self bag drop equipments are installed in Kempegowda international airport to easy the check in process which commuters can complete the luggage scrituny process in 45 seconds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X