ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋದಲ್ಲಿ ಯುವತಿ ಫೋಟೊ ಕ್ಲಿಕ್ಕಿಸಿದ ಸೆಕ್ಯುರಿಟಿ ಗಾರ್ಡ್‌ ಬಂಧನ

By Nayana
|
Google Oneindia Kannada News

ಬೆಂಗಳೂರು, ಜು.21: ನಮ್ಮ ಮೆಟ್ರೋದಲ್ಲಿ ಯುವತಿಯ ಸಮ್ಮತಿ ಇಲ್ಲದೆ ದೂರ ಕುಳಿದ್ದ ಯುವತಿಯ ಫೋಟೊವನ್ನು ಕ್ಲಿಕ್ಕಿಸುತ್ತಿದ್ದ ಯುವಕನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಇಂದಿರಾನಗರ ಮೆಟ್ರೋದಲ್ಲಿ ಸಿಕ್ಕಿದ್ದೇನು? ತಲೆಕೆಡಿಸಿಕೊಂಡಿರುವ ಪೊಲೀಸರುಇಂದಿರಾನಗರ ಮೆಟ್ರೋದಲ್ಲಿ ಸಿಕ್ಕಿದ್ದೇನು? ತಲೆಕೆಡಿಸಿಕೊಂಡಿರುವ ಪೊಲೀಸರು

ಒಡಿಶಾ ಮೂಲದ ರಾಮಚಂದ್ರ(30) ನೆಲಮಂಗಲ ನಿವಾಸಿಯಾಗಿದ್ದಾರೆ, ಆತ ಕ್ರಿಕೆಟ್‌ ಸ್ಟೇಡಿಯಂನ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಮೆಜೆಸ್ಟಿಕ್‌ನಿಂದ ನಾಗಸಂದ್ರಕ್ಕೆ ತೆರಳುವ ಮಾರ್ಗದಲ್ಲಿ ಈ ಘಟನೆ ನಡೆದಿದೆ. ನಾಗಸಂದ್ರ ಕೊನೆಯ ನಿಲ್ದಾಣವಾಗಿದ್ದು ಪ್ರಯಾನಿಕರ ಸಂಖ್ಯೆ ಕಡಿಮೆ ಇರುತ್ತದೆ. ಈ ಸಂದರ್ಭದಲ್ಲಿ ದುರುಪಯೋಗ ಪಡಿಸಿಕೊಂಡ ಆರೋಪಿ ಎದುರಿಗೆ ಕುಳಿತಿದ್ದ ಯುವತಿಯ ಫೋಟೊ ಕ್ಲಿಕ್ಕಿಸಿದ್ದ.

Security guard held for clicking woman’s photos at Metro stn

ಈ ವೇಳೆ ಮೊಬೈಲ್‌ನ ಫ್ಲ್ಯಾಶ್‌ ಲೈಟ್‌ ಕಂಡಿದ್ದರಿಂದ ಎಚ್ಚೆತ್ತ ಯುವತಿ ಪೊಲೀಸರಿಗೆ ಕರೆ ಮಾಡಿ ಆತನನ್ನು ಬಂಧಿಸಿದ್ದಾರೆ. ಮೆಟ್ರೋದಲ್ಲಿ ಇಂತಹ ಘಟನೆಗಳೂ ಹೊಸದೇನಲ್ಲ ಆದರೆ ಯಾವುದು ಬೆಳಕಿಗೆ ಬರುವುದಿಲ್ಲ. ಕೆಲವು ಯುವತಿಯರಿಗೆ ದೂರು ಕೊಡುವಷ್ಟು ಧೈರ್ಯವಿರುವುದಿಲ್ಲ. ಕೇವಲ ಫೋಟೊ ತೆಗೆದುಕೊಳ್ಳುವುದರಿಂದ ಏನಾಗುತ್ತೆ ಎಂದು ಪ್ರಶ್ನಿಸಬಹುದು ಆದರೆ ಆ ಫೋಟೊವನ್ನು ದುರ್ಬಳಕೆ ಮಾಡಿಕೊಂಡು ಏನೆಲ್ಲಾ ಮಾಡಬಹುದು ಎನ್ನುವುದು ಯಾರಿಗೂ ತಿಳಿದಿರುವುದಿಲ್ಲ.

English summary
A 30-year-old security guard of a cricket stadium near Makali, off Tumakuru Road, was arrested on friday for allegedly clicking photos of a woman at Nagasandra Metro station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X