ಸ್ವಾತಂತ್ರ್ಯ ದಿನಾಚರಣೆ : ಬೆಂಗಳೂರಲ್ಲಿ ಬಿಗಿ ಭದ್ರತೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 14 : ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗ್ಗೆ 9ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಈ ಕುರಿತು ಮಾಹಿತಿ ನೀಡಿದರು. ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲಿರುವ ಪಥ ಸಂಚಲನದಲ್ಲಿ ಸೇನಾಪಡೆ, ಸೇವಾದಳ, ಶ್ವಾನ ಪಡೆ ಸೇರಿದಂತೆ ಒಟ್ಟು 54 ತುಕಡಿಗಳಲ್ಲಿ 2 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ.[ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದ ಗ್ಯಾಲರಿ]

ಕೇರಳ ರಾಜ್ಯದ ಸಶಸ್ತ್ರ ಪಡೆಯ ತುಕಡಿ ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿದೆ. ಬೆಂಗಳೂರಿನ ವಿವಿಧ ಶಾಲೆಗಳ 2,730 ಮಕ್ಕಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಬೆಳಗಾವಿಯ ಮರಾಠ ಲೈಟ್‌ ಇನ್‌ಫೆಂಟ್ರಿ ರೆಜಿಮೆಂಟಿನ ಯೋಧರು ಮಲ್ಲಕಂಬ ಪ್ರದರ್ಶನ ನೀಡಲಿದ್ದಾರೆ.

ಮುಖ್ಯ ಕಾರ್ಯಕ್ರಮ ನಡೆಯುವ ಮಾಣೆಕ್ ಷಾ ಪರೇಡ್‌ ಮೈದಾನ ಸೇರಿದಂತೆ ಬೆಂಗಳೂರು ನಗರದಾದ್ಯಂತ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಗರುಡಾ ಕಮಾಂಡೊ ಪಡೆಯೂ ಹದ್ದಿನ ಕಣ್ಣಿಡಲಿದೆ. ಆಗಸ್ಟ್ 13ರಿಂದ 15ರ ತನಕ ಡ್ರೋನ್‌, ಬಲೂನ್‌ ಸೇರಿದಂತೆ ದೂರ ನಿಯಂತ್ರಿತ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದೆ.

ಆಧುನಿಕ ಶಸ್ತ್ರಾಸ್ತ್ರಗಳ ಕವಾಯಿತು

ಆಧುನಿಕ ಶಸ್ತ್ರಾಸ್ತ್ರಗಳ ಕವಾಯಿತು

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಣೇಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ ಕವಾಯತು ಪ್ರದರ್ಶನದಲ್ಲಿ ವಿಶೇಷ ಭದ್ರತಾ ಪಡೆಗಳಿಂದ ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಯುದ್ಧ ವಾಹನಗಳ ಪ್ರದರ್ಶನ ನಡೆಯಲಿದೆ.

ಪೊಲೀಸರ ಭದ್ರತೆ ಹೇಗಿದೆ?

ಪೊಲೀಸರ ಭದ್ರತೆ ಹೇಗಿದೆ?

ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್‌.ಎಸ್.ಮೇಘರಿಕ್ ಅವರು ಪೊಲೀಸ್ ಭದ್ರತೆ ಬಗ್ಗೆ ಮಾಹಿತಿ ನೀಡಿದ್ದು, 'ಮೈದಾನದ ಸುತ್ತ-ಮುತ್ತ 40 ಸಿಸಿಟಿವಿ ಅಳವಡಿಸಲಾಗಿದೆ. ಭಾರತೀಯ ಭೂಸೇನೆಯ ನೆಲಬಾಂಬ್ ಪತ್ತೆ ದಳ, ಜೊತೆಗೆ ಬಾಂಬ್‌ ನಿಷ್ಕ್ರಿಯ ದಳದ ಎರಡು ತಂಡಗಳನ್ನು ನಿಯೋಜಿಸಲಾಗಿದೆ' ಎಂದು ಹೇಳಿದ್ದಾರೆ.

16 ಆಂಬ್ಯುಲೆನ್ಸ್ ಸಿದ್ಧ

16 ಆಂಬ್ಯುಲೆನ್ಸ್ ಸಿದ್ಧ

ಪೊಲೀಸರ ಭದ್ರತೆ ಜೊತೆಗೆ 16 ಆಂಬುಲೆನ್ಸ್‌, 20 ವೈದ್ಯರು, 30 ಜನ ಪ್ಯಾರಾ ಮೆಡಿಕಲ್‌ ಸಿಬ್ಬಂದಿ ಹಾಗೂ 10 ಹಾಸಿಗೆಗಳನ್ನು ಒಳಗೊಂಡ ವೈದ್ಯಕೀಯ ವ್ಯವಸ್ಥೆಯನ್ನು ಮೈದಾನದಲ್ಲಿ ಮಾಡಲಾಗಿದೆ. 25 ಎಸ್‌ಡಿಆರ್‌ಎಫ್‌ ಸಿಬ್ಬಂದಿ ಹಾಗೂ 8 ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿಯೂ ಇರಲಿದ್ದಾರೆ.

ಸಂಚಾರ ಮಾರ್ಗ ಬದಲಾವಣೆ

ಸಂಚಾರ ಮಾರ್ಗ ಬದಲಾವಣೆ

ಬೆಳಗ್ಗೆ 8.30 ರಿಂದ 10.30ರವರೆಗೆ ಕಬ್ಬನ್ ರಸ್ತೆಯ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ (ಕಬ್ಬನ್‌ ರಸ್ತೆ) ಎರಡೂ ದಿಕ್ಕುಗಳಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Security beefed up across Bengaluru city for 70th Independence Day celebrations. Chief Minister Siddaramaiah will host national flag at the Manekshaw Parade Ground at 9 am.
Please Wait while comments are loading...