ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ, ಅಮೃತಮಹೋತ್ಸವ: ಏನೆಲ್ಲಾ ಇರಲಿದೆ?

|
Google Oneindia Kannada News

ವಿಶಿಷ್ಟ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಅನಾವರಣಗೊಳಿಸುವ ಐತಿಹಾಸಿಕ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಮೃತಮಹೋತ್ಸವ ಕಾರ್ಯಕ್ರಮಗಳನ್ನು ಹವ್ಯಕ ಮಹಾಸಭೆಯಿಂದ ಆಯೋಜಿಸಲಾಗಿದ್ದು, ಡಿಸೆಂಬರ್ 28, 29 ಮತ್ತು 30 ರಂದು ಅರಮನೆ ಮೈದಾನದ ರಾಯಲ್ ಸೆನೆಟ್ ಹಾಗೂ ಗ್ರಾಂಡ್ ಕ್ಯಾಸೆಲ್ ಸಭಾಂಗಣದಲ್ಲಿ ಸಂಪನ್ನವಾಗಲಿದೆ.

ಹವ್ಯಕ ಸಮಾಜ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಹಾಗೂ ಸಂಸ್ಕಾರಗಳೊಂದಿಗೆ ನಾಡಿಗೆ ವೈಶಿಷ್ಟ್ಯಪೂರ್ಣ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು, ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಮೃತಮಹೋತ್ಸವ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಹಾಗೂ ಹವ್ಯಕ ಸಮಾಜವನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ದಿಶೆಯಲ್ಲಿ, ಇಡೀ ಸಮಾಜ ಒಂದು ಕುಟುಂಬವಾಗಿ ತನ್ನ ಶಕ್ತಿ, ಸಾಮರ್ಥ್ಯ ಹಾಗೂ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಸ್ಮರಣೀಯ ಕಾರ್ಯಕ್ರಮವಾಗಿಸುವ ಪ್ರಯತ್ನಗಳು ನಡೆದಿವೆ.

ಬಾಯ್ತುಂಬ ಕವಳ, ತಲೆ ಮೇಲೆ ಕೊಪ್ಪೆ!ನಕ್ಕು ನಲಿಸುವ ಹವ್ಯಕ ಫ್ಯಾಷನ್ ಶೋ! ಬಾಯ್ತುಂಬ ಕವಳ, ತಲೆ ಮೇಲೆ ಕೊಪ್ಪೆ!ನಕ್ಕು ನಲಿಸುವ ಹವ್ಯಕ ಫ್ಯಾಷನ್ ಶೋ!

ಸಮ್ಮೇಳನದಲ್ಲಿ ಏನೆಲ್ಲ ಇರಲಿದೆ: ಐತಿಹಾಸಿಕ ಈ ಕಾರ್ಯಕ್ರಮದಲ್ಲಿ 75 ಪುಸ್ತಕಗಳ ಲೋಕಾರ್ಪಣೆ, 75 ವೈದಿಕರಿಗೆ 'ಹವ್ಯಕ ವೇದರತ್ನ' ಸನ್ಮಾನ, 75 ಕೃಷಿಕರಿಗೆ 'ಹವ್ಯಕ ಕೃಷಿರತ್ನ' ಸನ್ಮಾನ , 75 ಸಾಧಕರಿಗೆ 'ಹವ್ಯಕ ಸಾಧಕ ರತ್ನ' ಸನ್ಮಾನ, 75 ಯೋಧರಿಗೆ 'ಹವ್ಯಕ ದೇಶರತ್ನ' 75 ವಿದ್ಯಾರ್ಥಿಗಳಿಗೆ 'ಹವ್ಯಕ ವಿದ್ಯಾರತ್ನ' ಸನ್ಮಾನ, 75 ಗೋದಾನ, 75 ಯಾಗ ಮಂಟಪ - ಯಾಗ ಮಂಡಲಗಳ ಪ್ರದರ್ಶನ ಹಾಗೂ ಸ್ಪರ್ಧೆ, 75 ಕಲಾವಿದರೊಂದಿಗೆ ರಾಮಕಥಾ ಪ್ರಸ್ತುತಿ, ರಂಗೋಲಿ, ಚಿತ್ರಕಲೆ, ಹವ್ಯಕ ಸಂಸ್ಕೃತಿ ಚಿತ್ರ, ಕರಕುಶಲ ವಸ್ತುಗಳ ಸ್ಪರ್ಧೆಗಳು ಸೇರಿದಂತೆ ವಿಶಿಷ್ಟ ಕಾರ್ಯಕ್ರಮಗಳು ನಡೆಯಲಿದೆ.

ಹವ್ಯಕರ ಪಾರಂಪರಿಕ ಬೆಳೆಯಾದ ಅಡಿಕೆ ಕೃಷಿಯ ಸಮಗ್ರ ದರ್ಶನ ಹಾಗೂ ಲೋಕಮಂಗಳಕಾರಿಯಾದ ಯಜ್ಞ ಯಾಗಗಳನ್ನು ಲೋಕಮುಖಕ್ಕೆ ಪರಿಚಯಿಸುವ ವಿಶೇಷ ಪ್ರದರ್ಶನಗಳು ಇರಲಿದ್ಧು, ಹವ್ಯಕ ಸಾಂಸ್ಕೃತಿಕ ಜಗತ್ತು ಕಲೆಗಳ ಮೂಲಕ ಅನಾವರಣವಾಗಲಿದೆ.

ನಮ್ಮ ದೇಶದ ಆಯುರ್ವೇದ ಕ್ಷೇತ್ರಕ್ಕೆ ನನ್ನದೊಂದು ಕೊಡುಗೆ ಇದೆ ನಮ್ಮ ದೇಶದ ಆಯುರ್ವೇದ ಕ್ಷೇತ್ರಕ್ಕೆ ನನ್ನದೊಂದು ಕೊಡುಗೆ ಇದೆ

ಉತ್ತರ ಕನ್ನಡ - ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಪ್ರಾಂತ್ಯಗಳ ಹವ್ಯಕರ ಪಾಕ ವೈವಿಧ್ಯಗಳನ್ನು ಪರಿಚಯಿಸುವ ಹವ್ಯಕ ಪಾಕೋತ್ಸವ ಈ ಕಾರ್ಯಕ್ರಮದ ರುಚಿಯನ್ನು ಹೆಚ್ಚಿಸಲಿದ್ದು, ರಾಷ್ಟ್ರಮಟ್ಟದ ಗಣ್ಯರುಗಳು ಹಾಗೂ ಅನೇಕ ಮಹನೀಯರು ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಹವ್ಯಕ ಸಂಸ್ಕೃತಿ ಸಂಸ್ಕಾರಗಳನ್ನು ಆಸ್ವಾದಿಸಿ, ಆನಂದಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದ್ದಾರೆ.

ಹವ್ಯಕ ಪಾಕೋತ್ಸವ

ಹವ್ಯಕ ಪಾಕೋತ್ಸವ

ಹವ್ಯಕ ಪಾಕೋತ್ಸವ - ಆಲೆಮನೆ ಆಕರ್ಷಣೆ: ನಾಡಿನಲ್ಲಿ ಹವ್ಯಕರ ಆಹಾರ ಪದಾರ್ಥಗಳಿಗೆ ವಿಶೇಷ ಮನ್ನಣೆ ಇದ್ದು, ಹವ್ಯಕರ ಪಾಕ ನಾಡಿನ ಜನಮನ್ನಣೆ ಪಡೆದಿದೆ. ಮಲೆನಾಡು, ಕರಾವಳಿ ಭಾಗಗಳ ವಿಶಿಷ್ಟ ಹವ್ಯಕರ ಆಹಾರ ಪದಾರ್ಥಗಳು ಸಮ್ಮೇಳನದ 'ಹವ್ಯಕ ಪಾಕ'ದಲ್ಲಿ ದೊರಕಲಿದ್ದು, ವಿಶೇಷ ಕೈರುಚಿಗಳು ಬೆಂಗಳೂರಿನ ಆಹಾರಪ್ರಿಯರ ಹೊಟ್ಟೆಹಸಿವನ್ನು ತಣಿಸಲಿದೆ.

ಅರಮನೆ ಮೈದಾನ

ಅರಮನೆ ಮೈದಾನ

ಜೊತೆಗೆ ಹಳ್ಳಿ ಸೊಗಡನ್ನು ನೆನಪಿಸುವ 'ಆಲೆಮನೆ' ಅರಮನೆ ಮೈದಾನದಲ್ಲಿ ತಲೆ ಎತ್ತಲಿದ್ದು ಪಾರಂಪರಿಕವಾಗಿ ಗಾಣದಿಂದ ಕಬ್ಬಿನ ಹಾಲನ್ನು ತೆಗೆದು ಸೇವಿಸುವ ಸಂಭ್ರಮ ಒಂದೆಡೆಯಾದರೆ, ಪಾರಂಪರಿಕ ಆಲೆಮನೆಯನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ರಾಜಧಾನಿಯ ನಾಗರೀಕರಿಗೆ ಒದಗಲಿದೆ. ಕಾರ್ಯಕ್ರಮ ಸಾರ್ವಜನಿಕರಿಗೆ ಮುಕ್ತವಾಗಿದ್ದು, ವಿಶಿಷ್ಟವಾದ ಸಂಸ್ಕೃತಿ ಸಂಸ್ಕಾರಗಳನ್ನು ಆಸ್ವಾದಿಸಿ, ಆನಂದಿಸಬಹುದಾಗಿದೆ.

ಹವ್ಯಕ ಮಹಾಸಭೆ ಚುನಾವಣೆ: ಆದಿಶಂಕರ ಬಳಗಕ್ಕೆ ಜಯ ಹವ್ಯಕ ಮಹಾಸಭೆ ಚುನಾವಣೆ: ಆದಿಶಂಕರ ಬಳಗಕ್ಕೆ ಜಯ

ಐತಿಹಾಸಿಕ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ

ಐತಿಹಾಸಿಕ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ

ಮಹಾಸಮಿತಿ ರಚನೆ: ಐತಿಹಾಸಿಕ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಅಮೃತಮಹೋತ್ಸವ ಕಾರ್ಯಕ್ರಮಗಳಿಗೆ ಸಂಬಂಧಿಸಿ ಮಹಾಸಮಿತಿಯನ್ನು ರಚಿಸಲಾಗಿದ್ದು, ಗಣ್ಯರು, ಸಮಾಜದ ಪ್ರಮುಖರು ಸಮಿತಿಯ ಹೊಣೆ ಹೊತ್ತಿದ್ದಾರೆ. ಹೊರನಾಡಿನ ಧರ್ಮಕರ್ತರಾದ ಡಾ|| ಜಿ. ಭೀಮೇಶ್ವರ ಜೋಷಿಯವರು ಪ್ರಧಾನ ಸಮಿತಿಯ ಗೌರವಾಧ್ಯಕ್ಷರಾಗಿದ್ದು, ಡಾ. ಗಿರಿಧರ ಕಜೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಶಾಂತಾರಾಮ ಹೆಗಡೆ, ಶೀಗೆಹಳ್ಳಿ ಹರನಾಥ ರಾವ್, ಮತ್ತಿಕೊಪ್ಪ, ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ಟ, ಪುತ್ತೂರು, ಶ್ರೀಧರ ಭಟ್, ಕಲಸಿ, ಜಿ. ವಿ. ಹೆಗಡೆ, ಕಾನಗೋಡು, ಶಿರಸಿ, ಎಸ್. ಜಿ. ಹೆಗಡೆ, ಕರ್ಕಿ, ಬೆಂಗಳೂರು, ಪ್ರಮೋದ ಹೆಗಡೆ, ಯಲ್ಲಾಪುರ ಮಹಾಸಮಿತಿಯ ಹಿರಿಯ ಉಪಾಧ್ಯಕ್ಷರುಗಳಾಗಿದ್ದಾರೆ.

ಅನಂತಕುಮಾರ ಹೆಗಡೆ, ಶಿರಸಿ

ಅನಂತಕುಮಾರ ಹೆಗಡೆ, ಶಿರಸಿ

ಅನಂತಕುಮಾರ ಹೆಗಡೆ, ಶಿರಸಿ, ವಿಶ್ವೇಶ್ವರ ಹೆಗಡೆ, ಕಾಗೇರಿ, ಶಿರಸಿ, ಶಿವರಾಮ ಎಮ್. ಹೆಬ್ಬಾರ, ಯಲ್ಲಾಪುರ, ಉರಿಮಜಲು ರಾಮ ಭಟ್ಟ, ಪುತ್ತೂರು, ಆರ್.ಎಸ್. ಭಾಗವತ್, ಕುಮಟಾ, ಡಾ. ಎಂ.ಪಿ. ಕರ್ಕಿ, ಹೊನ್ನಾವರ, ಉಮೇಶ್ ಭಟ್ಟ, ಅಂಕೋಲ, ಎಲ್. ಟಿ. ತಿಮ್ಮಪ್ಪ ಹೆಗಡೆ, ಸಾಗರ, ವಿಶ್ವೇಶ್ವರ ಭಟ್ಟ, ಬೆಂಗಳೂರು, ರವಿ ಹೆಗಡೆ, ಬೆಂಗಳೂರು, ತಿಮ್ಮಪ್ಪ ಭಟ್ಟ, ಬೆಂಗಳೂರು, ಹರಿಪ್ರಕಾಶ್ ಕೋಣೆಮನೆ, ಬೆಂಗಳೂರು, ವಿನಾಯಕ ಭಟ್ಟ, ಮೂರೂರು, ಬೆಂಗಳೂರು ಸಮಿತಿಯ ದಿಗ್ದರ್ಶನ ಮಾಡಲಿದ್ದಾರೆ.

ಸಿಗಂದೂರು, ವೇ|ಮೂ|| ಶ್ರೀಧರ ಅಡಿ

ಸಿಗಂದೂರು, ವೇ|ಮೂ|| ಶ್ರೀಧರ ಅಡಿ

ವೇ|ಮೂ|| ಶೇಷಗಿರಿ ಭಟ್ಟ, ಸಿಗಂದೂರು, ವೇ|ಮೂ|| ಶ್ರೀಧರ ಅಡಿ, ಕೊಲ್ಲೂರು, ವೇ|ಮೂ|| ಜಿ. ಜಿ. ಸಭಾಹಿತ, ಇಡಗುಂಜಿ, ವೇ|ಮೂ|| ರಾಮಚಂದ್ರ ಭಟ್ಟ, ಹಟ್ಟಿಯಂಗಡಿ, ವೇ|ಮೂ|| ಶಿತಿಕಂಠ ಹಿರೇ ಭಟ್ಟ, ಗೋಕರ್ಣ, ವೇ|ಮೂ|| ಎಮ್.ಕೆ. ಭಟ್ಟ, ನಿಮಿಷಾಂಬ, ಟಿ. ಮಡಿಯಾಲ, ಐ.ಪಿ.ಎಸ್. ಆರ್. ವಿ. ಶಾಸ್ತ್ರಿ, ಬೆಂಗಳೂರು, ಎಂ. ಆರ್. ಹೆಗಡೆ, ಗೊಡವೆಮ ಟಿ. ಕೃಷ್ಣ ಭಟ್ಟ, ಐ.ಪಿ.ಎಸ್., ಶ್ರೀಧರ್ ಜಿ. ಹೆಗಡೆ, ಐಎಎಸ್, ಪಿ.ಬಿ. ರಾಮಮೂರ್ತಿ, ಐಎಎಸ್ ಬಿ. ಶ್ರೀಧರ್ ಕೆ.ಎ.ಎಸ್ ಮುಂತಾದವರು ಮಾರ್ಗದರ್ಶನ ನೀಡಲಿದ್ದಾರೆ.

English summary
Second World Havyaka Sammelana from Dec 28 to Dec30 at Royal Senet and Grand Casal Hall, Palace Ground, Bengaluru. what is the main attractions
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X