ಚಿತ್ರಗಳು : ಬೆಂಗಳೂರಲ್ಲಿ ಧರ್ಮಸ್ಥಳ ಆಯುರ್ವೇದ ಆಸ್ಪತ್ರೆ ಉದ್ಘಾಟನೆ

Posted By:
Subscribe to Oneindia Kannada

ಬೆಂಗಳೂರು, ಮೇ 19 : ಬೆಂಗಳೂರು ನಗರದ ಹೊರವಲಯದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಲೋಕಾರ್ಪಣೆ ಮಾಡಿದ್ದಾರೆ. 350 ಹಾಸಿಗೆಗಳ ಆಸ್ಪತ್ರೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.

ನಗರದ ಹೊರವಲಯದ ಕುಂಬಳಗೋಡು ಸಮೀಪದ ಅಂಚೇಪಾಳ್ಯದಲ್ಲಿ 3.45 ಲಕ್ಷ ಚದರಡಿ ಜಾಗದಲ್ಲಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜನ್ನು ಸ್ಥಾಪನೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ 7 ಹೊರರೋಗಿಗಳ ವಿಭಾಗಗಳಿದ್ದು, 40ಕ್ಕೂ ಅಧಿಕ ಪಂಚಕರ್ಮ ಕೊಠಡಿಗಳಿವೆ. [ಕಲಬುರಗಿ ಜಯದೇವ ಆಸ್ಪತ್ರೆ ಚಿತ್ರಗಳು]

dharmasthala

ತುರ್ತು ಚಿಕಿತ್ಸೆ, ತುರ್ತು ನಿಗಾ ಘಟಕ, ನವಜಾತ ಶಿಶು ನಿಗಾ ಘಟಕ, ಯೋಗ ಕೊಠಡಿ, ಸೌಂದರ್ಯ ಚಿಕಿತ್ಸೆ, ಕೇಶ ಸಂರಕ್ಷಣೆ ವಿಭಾಗ ಇದೆ. ಅಲ್ಟ್ರಾಸೌಂಡ್, ಸಿಟಿಸ್ಕ್ಯಾನ್‌ ಸೇರಿದಂತೆ ವಿವಿಧ ಬಗೆಯ ಅತ್ಯಾಧುನಿಕ ಪ್ರಯೋಗಾಲಯಗಳು ಈ ಆಸ್ಪತ್ರೆಯಲ್ಲಿವೆ. [ಚಾಮರಾಜನಗರದಲ್ಲಿ ಜೆಎಸ್ ಎಸ್ ಆಸ್ಪತ್ರೆ ಆರಂಭ]

ಕಣ್ಣು, ಕಿವಿ ಮತ್ತು ಮೂಗು ಹಾಗೂ ಪ್ರಸೂತಿ ಮತ್ತು ಸ್ತ್ರೀ ರೋಗಕ್ಕೆ ಸಂಬಂಧಿಸಿದಂತೆ ತಲಾ ಮೂರು ವಿಭಾಗಗಳಿದ್ದು, ಪ್ರತಿ ವಿಭಾಗದಲ್ಲಿ ಶಸ್ತ್ರಚಿಕಿತ್ಸಾ ಕೊಠಡಿಗಳಿವೆ. ಔಷಧ ಸಸ್ಯಗಳ ಉದ್ಯಾನ ಮತ್ತು ಔಷಧ ತಯಾರಿಕಾ ಘಟಕಗಳು ಆಸ್ಪತ್ರೆಯ ಆವರಣದಲ್ಲಿವೆ.

-
-
-
-
-

ಆಸ್ಪತ್ರೆಯ ಆವರಣದಲ್ಲಿಯೇ ವೈದ್ಯಕೀಯ ಕಾಲೇಜು ಇದೆ. ಅತ್ಯಾಧುನಿಕ ಗ್ರಂಥಾಲಯ, ವೈದ್ಯಕೀಯ ವಸ್ತು ಸಂಗ್ರಹಾಲಯ, ಸಭಾಂಗಣ ವ್ಯವಸ್ಥೆ ಇದೆ. 500 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ.

ಎಲ್ಲಿದೆ ಆಸ್ಪತ್ರೆ : ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾಜರಾಜೇಶ್ವರಿ ವೈದ್ಯಕೀಯ ಕಾಜೇಲು ಮತ್ತು ಆಸ್ಪತ್ರೆ ಸಮೀಪದಲ್ಲಿ ಹೆದ್ದಾರಿ ಬಲಭಾಗದಲ್ಲಿ ಈ ನೂತನ ಆಸ್ಪತ್ರೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Sri Dharmasthala Manjunatheshwara Ayurveda Hospital and Medival college was inaugurated by the Karnataka Chief minister Siddaramaiah on May 18, 2016 Kumbalgodu, near Bengaluru.
Please Wait while comments are loading...