ಉಕ್ಕಿನ ಸೇತುವೆ: ತಾರಾಲಯಗಳ ಉನ್ನತೀಕರಣ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 16: ನಗರದ ಬಸವೇಶ್ವರ ವೃತ್ತದಿಂದ ಹೆಬ್ಬಾಳದ ವರೆಗೆ ನಿರ್ಮಿಸಲು ಉದ್ದೇಶಿಸಿರುವ ನೆಹರೂ ತಾರಾಲಯಕ್ಕೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ನರಗಾಭಿವೃದ್ಧಿ ಇಲಾಖೆಗೆ ಸೂಚಿಸಿರುವುದಾಗಿ ತಂತ್ರಜ್ಞಾನ ಹಾಗು ವಿಜ್ಞಾನ ಯೋಜನಾ ಸಚಿವ ಎಂ.ಆರ್. ಸೀತಾರಾಮ್ ತಿಳಿಸಿದರು.

ಸೇತುವೆ ನಿರ್ಮಾಣ ವೇಳೆ ತಾರಾಯಲಕ್ಕೆ ತೊಂದರೆಯಾಗದಂತೆ ಯೋಜನೆ ರೂಪಿಸಿ ನಿರ್ಮಿಸಲು ಈಗಾಗಲೇ ಸೂಚಿಸಲಾಗಿದೆ. ಈ ಸಂಬಂಧ ಖ್ಯಾತ ವಿಜ್ಞಾನಿ ಯು.ಆರ್.ರಾವ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದು ನಂತರ ಮಾಹಿತಿ ನೀಡಲಿದ್ದಾರೆ ಎಂದು ಸೀತಾರಾಮ್ ತಿಳಿಸಿದರು. ಇಂದಿನ ಅಗತ್ಯಕ್ಕೆ ತಕ್ಕಂತೆ ರು 12 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲಾಗುವುದು ಎಂದರು.[ಉಕ್ಕಿನ ಸೇತುವೆ ನಿರ್ಮಾಣ ಸದ್ಯಕ್ಕಿಲ್ಲ: ಕರ್ನಾಟಕ ಸರ್ಕಾರ]

science minister nehru Planetarium don't defect it

ವಿಜ್ಞಾನ ಗ್ಯಾಲರಿ:
ದೇಶದಲ್ಲೆ ಪ್ರಪ್ರಥಮ ಡಿಜಿಟಲ್ ತಾರಾಲಯವನ್ನು ಮಂಗಳೂರಿನ ಪಿಲ್ಲಿಕೂಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಈ ತಾರಾಲಯ 2017ರ ಜೂನ್‌ನಲ್ಲಿ ಕಾರ್ಯಾರಂಭ ಮಾಡಲಿದ್ದು, ಬೆಂಗಳೂರು ನಂತರ ರಾಜ್ಯದ 2ನೇ ತಾರಾಲಯ ಇದಾಗಿದೆ ಎಂದರು.[ಉಕ್ಕಿನ ಸೇತುವೆ ಬಗ್ಗೆ ಫೇಸ್ಬುಕ್ ಸ್ಟೇಟಸ್ ಎಸ್ಐ ಇನ್ ಟ್ರಬಲ್]

ಬೆಂಗಳೂರು ನಗರದ ಹೆಬ್ಬಾಳದ ಭಾರತೀಯ ಪಶುಸಂಗೋಪನಾ ಸಂಸ್ಥೆಯ ಆವರಣದಲ್ಲಿ 1 ಎಕರೆ 26 ಗುಂಟೆ ಜಾಗದಲ್ಲಿ ಅಂತಾರಾಷ್ಟ್ರೀಯ ವಿಜ್ಞಾನ ಗ್ಯಾಲರಿಯನ್ನು ಸ್ಥಾಪಿಸಲು ಐರ್ಲೆಂಡ್‌ನ ‌ಡಬ್ಲಿನ್‌ನಲ್ಲಿರುವ ವಿಜ್ಞಾನ ಗ್ಯಾಲರಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು..

ಬಿಜಾಪುರ ಮತ್ತು ಬಾಗಲಕೋಟೆಗಳಲ್ಲಿ ಎರಡು ಮಿನಿ ಡಿಜಿಟಲ್ ತಾರಾಯಲವನ್ನು ತಲಾ ರು 5.75 ಕೋಟಿಗಳ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ಮೈಸೂರಿನಲ್ಲಿ ಮತ್ತೊಂದು ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ರು 14.50 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿದೆ. ಈ ಕೇಂದ್ರವು 2018ರ ವೇಳೆಗೆ ಪೂರ್ಣವಾಗಲಿದೆ ಎಂದರು.

ನಂಜನಗೂಡಿನ ಸುತ್ತೂರಿನಲ್ಲಿ ಭಾರತ ಸರ್ಕಾರ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠದ ಸಹಯೋಗದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಪನ್ಮೂಲ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The steel flyover constrction nehru Planetarium don't defect them said to develop mant officer says Technology and Science, Planning Minister. And some district to Planetarium Elevation to bilt to science digital labs.
Please Wait while comments are loading...