ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲಾ ಶೌಚಾಲಯಗಳಲ್ಲಿ ಸಿಸಿಟಿವಿ: ಪೊಲೀಸರ ಸಲಹೆಗೆ ಆಕ್ಷೇಪ

ಶಾಲೆಗಳ ಶೌಚಾಲಯದಲ್ಲಿ ಸಿಸಿಟಿವಿ ಅಳವಡಿಕೆಗೆ ಆಗ್ರಹಿಸಿದ್ದ ಪೊಲೀಸರ ವಿರುದ್ಧ ಪ್ರತಿಭಟನೆ. ವಿದ್ಯಾರ್ಥಿಗಳ ಸುರಕ್ಷತೆಗೆ ಶೌಚಾಲಯದಲ್ಲಿ ಸಿಸಿಟಿವಿ ಅಳವಡಿಸುವಂತೆ ಸಲಹೆ ಮಾಡದ್ದ ಪೊಲೀಸರು.

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 14: ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಶಾಲೆಗಳಲ್ಲಿರುವ ಟಾಯ್ಲೆಟ್ ಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಬೆಂಗಳೂರು ಪೊಲೀಸ್ ಇಲಾಖೆ ನೀಡಿದ್ದ ಸಲಹೆಯ ವಿರುದ್ಧ 12 ಶಾಲೆಗಳು ವಿರೋಧ ವ್ಯಕ್ತಪಡಿಸಿವೆ ಎಂದು ಬೆಂಗಳೂರು ಮಿರರ್ ಹೇಳಿದೆ.

ಇತ್ತೀಚೆಗೆ, ಬೆಂಗಳೂರಿನ ಶಾಲೆಯೊಂದರಲ್ಲಿ ಶೌಚಕ್ಕೆ ತೆರಳಿದ್ದ 4ನೇ ತರಗತಿಯ ವಿದ್ಯಾರ್ಥಿಯೊಬ್ಬಳ ಮೇಲೆ ಅದೇ ಶಾಲೆಯಲ್ಲಿ ಓದುತ್ತಿದ್ದ 13 ವರ್ಷದ ಹುಡುಗ ಅತ್ಯಾಚಾರ ಎಸಗಿದ್ದ ಘಟನೆ ವರದಿಯಾಗಿತ್ತು.

SCHOOLS PROTEST AGAINST POLICE ADVISE CCTV CAMERAS IN SCHOOL TOILETS

ಈ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆಯು ಈ ಘಟನೆ ನಡೆದಿದ್ದ ಶಾಲೆ ಸೇರಿದಂತೆ 12 ಶಾಲೆಗಳಿಗೆ ಶೌಚಾಲಯದಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸಲಹೆ ನೀಡಿತ್ತು. ಇದಕ್ಕೆ ಶಾಲೆಗಳ ಆಡಳಿತ ಮಂಡಳಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಶಾಲೆಯೊಂದರ ಪ್ರಾಂಶುಪಾಲರೊಬ್ಬರು, ''ವಿದ್ಯಾರ್ಥಿಗಳಿಗೆ ಭದ್ರತೆ ನೀಡುವ ಉದ್ದೇಶದಿಂದ ಪೊಲೀಸರು ಕೆಲವಾರು ಸಲಹೆಗಳನ್ನು ಕೊಟ್ಟಿರುವುದು ಸರಿಯಷ್ಟೇ. ಆದರೆ, ಶೌಚಾಲಯದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂಬ ಸಲಹೆಯನ್ನು ಪಾಲಿಸುವುದು ಕಷ್ಟ. ಶಾಲೆಯಲ್ಲಿ ಏನೇ ಸೌಲಭ್ಯ ಅಳವಡಿಸಿದರೂ ನಾನು ಮೊದಲು ವಿದ್ಯಾರ್ಥಿಗಳ ಪಾಲಕರಿಗೆ ನೋಟಿಸ್ ಕಳುಹಿಸಬೇಕು. ಅವರ ಪ್ರತಿಕ್ರಿಯೆಗಳನ್ನು ಕೇಳಿದ ನಂತರವಷ್ಟೇ ನಾನು ಕ್ರಮ ಕೈಗೊಳ್ಳಬಹುದು. ಹೀಗೆ, ಶೌಚಾಲಯಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾದರೆ, ನನಗೆ ಪಾಲಕರಿಂದ ಒದೆ ಬೀಳುತ್ತದೆ'' ಎಂದು ತಿಳಿಸಿದ್ದಾರೆ.

English summary
A notice issued recently by the police department, asking schools to install CCTV cameras in bathrooms (among other places) has kicked up a storm, with 12 schools coming out in protest against the demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X