ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಾಂಶುಪಾಲ ಬಿಡುಗಡೆ

ವಿದ್ಯಾರ್ಥಿನಿಯರಿಗೆ, ಶಿಕ್ಷಕರಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಜನವರಿ 31ರಂದು ಬಂಧಿತನಾಗಿದ್ದ ಪ್ರಾಂಶುಪಾಲ ಕುಮಾರ್ ಠಾಕೂರ್.

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಫೆಬ್ರವರಿ 3: ಶಿಕ್ಷಕಿಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಜನವರಿ 31ರಂದು ಬಂಧಿತನಾಗಿದ್ದ ಪ್ರತಿಷ್ಠಿತ ಕಾಲೇಜೊಂದರ ಪ್ರಾಂಶುಪಾಲ ಕುಮಾರ್ ಠಾಕೂರ್ ಅವರನ್ನು ಫೆ. 2ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಪೋಕ್ಸೊ ಕಾಯ್ದೆಯಡಿ ಆತನನ್ನು ಬಂಧಿಸಲಾಗಿತ್ತು.

ಸದಾಶಿವ ನಗರದಲ್ಲಿರುವ ಈ ಕಾಲೇಜು ಕ್ಯಾಂಪಸ್ಸಿನಲ್ಲೇ ಈ ಪ್ರಾಂಶುಪಾಲ ತನ್ನ ಕಾಮತೃಷೆಯನ್ನು ಈಡೇರಿಸಿಕೊಳ್ಳಲು ಹವಣಿಸುತ್ತಿದ್ದ ಎನ್ನಲಾಗಿದೆ. ಶಿಕ್ಷಕರಿಯರಿಗೆ ಲೈಂಗಿಕ ಸಂದೇಶ ಕಳುಹಿಸುವುದು, ತನ್ನ ಮೊಬೈಲ್ ನಲ್ಲಿದ್ದ ಕೆಲವಾರು ಅಸಭ್ಯ ಚಿತ್ರಗಳನ್ನು ತೋರಿಸಿ ಅವರನ್ನು ಲೈಂಗಿಕವಾಗಿ ಪ್ರಚೋದಿಸಲು ಪ್ರೇರೇಪಿಸುವುದು ಸೇರಿದಂತೆ ಹಲವಾರು ರೀತಿಯಲ್ಲಿ ಕಾಡುತ್ತಿದ್ದ ಎನ್ನಲಾಗಿದೆ.

School Pricipal arrested under POSCO act, released on bail

ಇದನ್ನು ಪ್ರತಿಭಟಿಸುತ್ತಿದ್ದ ಶಿಕ್ಷಕಿಯರ ಸಂಬಳವನ್ನು ತಡೆಹಿಡಿದು ಪೀಡಿಸುತ್ತಿದ್ದ ಎಂದೂ ಆತನ ವಿರುದ್ಧ ದೂರು ದಾಖಲಾಗಿದೆ.

ಚೈಲ್ಡ್ ಲೈನ್ ನೋಡಲ್ ಅಧಿಕಾರಿಯಾದ ವಾಸುದೇವ ಮೂರ್ತಿಯವರಿಗೆ ಜನವರಿ 14ರಂದು ಬಂದಿದ್ದ ದೂರವಾಣಿ ಕರೆಯಲ್ಲಿ ಸಂತ್ರಸ್ಥೆಯೊಬ್ಬರು ಪ್ರಾಂಶುಪಾಲರ ವಿರುದ್ಧ ದೂರು ಸಲ್ಲಿಸಿದ್ದರು. ಅದರನ್ವಯ, ಕ್ರಮ ಕೈಗೊಂಡ ನೋಡಲ್ ಅಧಿಕಾರಿ ಈ ವಿಚಾರವನ್ನು ಬೆಂಗಳೂರು ಪೊಲೀಸರ ಗಮನಕ್ಕೆ ತಂದಿದ್ದರು.

ಆನಂತರ, ಸಂತ್ರಸ್ಥ ವಿದ್ಯಾರ್ಥಿನಿಯರ ವಿಚಾರಣೆ ನಡೆಸಿದ ಪೊಲೀಸರು ಸುಮಾರು ಏಳು ಮಂದಿ ವಿದ್ಯಾರ್ಥಿನಿಯರ ವಿವರಣೆಯನ್ನು ದಾಖಲಿಸಿಕೊಂಡಿದ್ದರು. ಅದರ ಆಧಾರದ ಮೇಲೆ ಅವರನ್ನು ಬಂಧಿಸಲಾಗಿತ್ತು.

ಏತನ್ಮಧ್ಯೆ, ಆಪಾದಿತ ಪ್ರಾಂಶುಪಾಲರಿಗೆ ಕರ್ತವ್ಯದಿಂದ ದೂರ ಉಳಿಯುವಂತೆ ಕಾಲೇಜಿನ ಆಡಳಿತ ಮಂಡಳಿಯು ಆದೇಶಿಸಿದೆ. ಇತ್ತ, ಪೊಲೀಸರಿಂದ ತನಿಖೆ ಮುಂದುವರಿದಿದೆ.

English summary
The principal of a centralised premiere school was booked for sexually harassing his students in the school's Sadashivanagar campus, walked out on bail on February 2. The man was arrested under section 11 of POCSO act on January 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X