ಸುಪ್ರೀಂ ಮದ್ಯ ಆದೇಶ, ಸರ್ಕಾರಕ್ಕೆ ತಲೆನೋವು

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 16: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಅಂಚಿನ ಮದ್ಯದಂಗಡಿಗಳ ಸ್ಥಳಾಂತರ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ರಾಜ್ಯದ ಅನೇಕ ನಗರಗಳು ರಾಷ್ಟ್ರೀಯ, ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿವೆ. ನೂರಾರು ಮದ್ಯದಂಗಡಿಗಳು ಈ ರಸ್ತೆಗಳ ಅಕ್ಕಪಕ್ಕದಲ್ಲಿವೆ. ಕೋರ್ಟ್‌ ಆದೇಶ ಪಾಲನೆಯಾದರೆ ಹಲವು ನಗರಗಳ ಮುಖ್ಯ ಭಾಗದ ಮದ್ಯದಂಗಡಿಗಳು ಇಲ್ಲವಾಗುತ್ತವೆ ಇದರಿಂದ ಸರ್ಕಾರಕ್ಕೆ ಅಬಕಾರಿ ಆದಾಯವಿಲ್ಲದಂತಾಗುತ್ತದೆ.

ban

ಜುಲೈ 1ರಿಂದ ಜೂನ್‌ 30ರವರೆಗೆ 'ಅಬಕಾರಿ ವರ್ಷ ನಡೆಯುತ್ತದೆ. ಈ ಅವಧಿಯಲ್ಲಿ ಮದ್ಯದಂಗಡಿಗಳು ಪರವಾನಗಿ ನವೀಕರಣ ಇತ್ಯಾದಿ ಕೆಲಸಗಳು ನಡೆಯುತ್ತವೆ. ಪರವಾನಗಿ ಅವಧಿ ಮುಗಿಯುವವರೆಗೆ ಸ್ಥಳಾಂತರ ಅಥವಾ ಬಂದ್ ಹೇಗೆ ಮಾಡಲಾಗುತ್ತದೆ ಇರುವ ಪರವಾನಗಿಯನ್ನು ರದ್ದು ಮಾಡಲು ಸಾಧ್ಯವೇ ಎಂದು ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ವಿಶ್ವರೂಪ್ ತಿಳಿಸಿದರು.

ಇನ್ನು ಸುಪ್ರೀಂ ಹೇಳಿರುವುದು ಐನೂರು ಮೀಟರ್ ವ್ಯಾಪ್ತಿಯನ್ನು ಅದರೆ ಹೆದ್ದಾರಿಗೆ ಒಳಪಡುವ 200-220 ಮೀಟರ್ ವ್ಯಾಪ್ತಿಯಲ್ಲಿಯೇ ಬಹಳಷ್ಟು ಮದ್ಯದಂಗಡಿಗಳು ಬರುತ್ತವೆ. 500 ಮೀಟರ್ ಎಂದರೆ ಸಾವಿರಾರು ಮದ್ಯದಂಗಡಿಗಳಾಗುತ್ತವೆ. ಅದರೆ ಇದರ ಸಮೀಕ್ಷೆ ನಡೆಯಬೇಕಿದೆ. ಸಮೀಕ್ಷೆ ನಡೆದರೆ ಸಾವಿರಾರು ಮದ್ಯದಂಗಡಿಗಳ ಲೆಕ್ಕ ಸಿಗುತ್ತದೆ. ಅವುಗಳು ಸ್ಥಳಾಂತರ ಮಾಡುವುದೆಲ್ಲಿ? ಮತ್ತೆ ವ್ಯಾಪಾರ ವ್ಯವಹಾರ ಇತ್ಯಾದಿಯಾಗಿ ಸರ್ಕಾರಕ್ಕೆ ತೀವ್ರ ತಲೆನೋವು ವ್ಯಾಪಾಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Supreme Court ordered ban on liquor shops on national and state highways. This is the problem of state government. During the year the government to narrow the difficulty of the license.
Please Wait while comments are loading...