ಬಿಜೆಪಿಯ ಮಾಜಿ ಶಾಸಕನಿಂದ 1 .5 ಕೋಟಿ ರು ಪರಿಹಾರ ಕೇಳಿದ ಪತ್ನಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 24: ಮೂಡಿಗೆರೆಯ ಬಿಜೆಪಿ ಮಾಜಿ ಶಾಸಕ ಎಂಪಿ ಕುಮಾರಸ್ವಾಮಿ ಕೌಟುಂಬಿಕ ಕಲಹ ಮತ್ತೊಮ್ಮೆ ಸುದ್ದಿಯಲ್ಲಿದೆ. ಕುಮಾರಸ್ವಾಮಿ ಅವರ ಪತ್ನಿ ಸವಿತಾ ಅವರು ಜೀವನಾಂಶ ಕೋರಿ ಪತಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಕುಮಾರಸ್ವಾಮಿ ಅವರಿಂದ ವಿವಾಹ ವಿಚ್ಛೇದನ ಕೋರಿ ಕೋರ್ಟಿಗೆ ಅರ್ಜಿ ಹಾಕಲಾಗಿದೆ. 1.5 ಕೋಟಿ ರು ಜೀವನಾಂಶ ಕೇಳಲಾಗಿದೆ ಎಂದು ಸವಿತಾ ಪರ ವಕೀಲರು ಹೇಳಿದ್ದಾರೆ.[ನಡು ರಸ್ತೆಯಲ್ಲೇ ಪತ್ನಿ ಮೇಲೆ ಹಲ್ಲೆ ಮಾಡಿದ ಮಾಜಿ ಶಾಸಕ]

Savitha wife seeks hefty alimony from her husband Former BJP MLA MP Kumaraswamy

ಈ ಹಿಂದೆ ವಿಕಾಸಸೌಧದಲ್ಲಿ ಪತ್ನಿ ಸವಿತಾ ಮೇಲೆ ಕುಮಾರಸ್ವಾಮಿ ಅವರು ಹಲ್ಲೆ ಮಾಡಿದ ಘಟನೆ ನಡೆದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿ, '8 ವರ್ಷಗಳಿಂದ ಅವಳು ನನ್ನ ಮನೆಗೆ ಬಂದಿಲ್ಲ. ಅವಳ ಮುಖ ನೋಡುವುದಿಲ್ಲ. ಅವಳ ಜೊತೆ ಮತ್ತೆ ಮಾತನಾಡುವ ಪ್ರಶ್ನೆಯೇ ಇಲ್ಲ' ಎಂದು ಹೇಳಿದ್ದರು.[ಅಸ್ಸಾಂನ ಶಾಸಕಿ ಲತಾ ಬಗ್ಗೆ ಸ್ವಾರಸ್ಯಕರ ಸಂಗತಿ]

ಸವಿತಾ ಅವರು ನಂತರ ವಿಧಾನಸೌಧ ಪೊಲೀಸ್ ಠಾಣೆಗೆ ತೆರಳಿ ತನಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದ್ದರು. ಪೊಲೀಸರು ಅವರನ್ನು ಅಲ್ಲಿಂದ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಕರೆದುಕೊಂಡು ಹೋಗಿದ್ದರು. ನಂತರ ಹಲವು ಸುದ್ದಿ ವಾಹಿನಿಗಳ ಕದ ತಟ್ಟಿದ್ ಕಲಹ ಈಗ ನ್ಯಾಯಾಲಯದ ಮೆಟ್ಟಿಲೇರಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Savitha wife asks hefty alimony from her husband Former BJP MLA from Mudiger M.P Kumaraswamy. Savitha's lawyer has served divorce notice to Kumaraswamy
Please Wait while comments are loading...