ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀದಿ ನಾಯಿ ಆರೈಕೆಗೆ ಮುಕ್ತಮನಸ್ಸಿನಿಂದ ಮುಂದಾಗಿ: ಸಂಯುಕ್ತ ಹೊರನಾಡ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 01: ಬೆಂಗಳೂರಿನ ಬೀದಿಗಳಲ್ಲಿ ಆಸರೆ ಇಲ್ಲದೇ ನರಳುತ್ತಿರುವ ಪ್ರಾಣಿಗಳನ್ನು ರಕ್ಷಿಸಲು ಎಲ್ಲರು ಮುಂದಾಗಬೇಕೆಂದು ಖ್ಯಾತ ನಟಿ ಹಾಗೂ ಪ್ರಾಣಿ ಸಂರಕ್ಷಣಾ ಹಕ್ಕುಗಳ ಕಾರ್ಯಕರ್ತೆ ಸಂಯುಕ್ತ ಹೊರನಾಡ್ ಹೇಳಿದರು.

ನಗರದ ಮಹಾತ್ಮ ಗಾಂಧಿ ರಸ್ತೆಯ ಛಾಯಾ ಕಲಾ ಮಂದಿರದಲ್ಲಿ ನಮ್ಮ ಪ್ರಾಣೆಗಳ ಸಂರಕ್ಷಣಾ ಚಾರಿಟಬಲ್ ಟ್ರಸ್ಟ್(ಎಸ್.ಒ.ಎ.ಸಿ.ಟಿ) ಏರ್ಪಡಿಸಿದ್ದ ಎಂಪ್ಯಾಶನ್ ಕೃತಿ ಬಿಡುಗಡೆ ಮತ್ತು ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ವೇಳೆ ಕೃಷಿ ವಿಜ್ಞಾನಿ ಡಾ. ಮಂಜುನಾಥ್, ಕಲಾವಿದೆ ಸಂಧ್ಯಾ ಕೆ. ಶಿರಸಿ ಮತ್ತಿತರರು ಉಪಸ್ಥಿತರಿದ್ದರು.

ಮಂಗಳೂರಿನ ಪಿಂಕಿ 'ಕ್ಯೂಟೆಸ್ಟ್ ಇಂಡಿಯನ್ ಡಾಗ್ ಅಲೈವ್' ಫೈನಲಿಸ್ಟ್ಮಂಗಳೂರಿನ ಪಿಂಕಿ 'ಕ್ಯೂಟೆಸ್ಟ್ ಇಂಡಿಯನ್ ಡಾಗ್ ಅಲೈವ್' ಫೈನಲಿಸ್ಟ್

ಎಂಪ್ಯಾಶನ್ ಕಾಫಿ ಟೇಬಲ್ ಪುಸ್ತಕವು ಸುಜಾಯ ಎನ್. ಜಗದೀಶ್ ಅವರು ರಚಿಸಲ್ಪಟಿದ್ದು, ಈ ಕೃತಿಯಲ್ಲಿ ನಮ್ಮ ಪ್ರಾಣಿಗಳ ಸಂರಕ್ಷಣಾ ಚಾರಿಟೇಬಲ್ ಟ್ರಸ್ಟ್(ಎಸ್.ಓ.ಎ.ಸಿ.ಟಿ) ನಿಂದ ರಕ್ಷಿಸಲ್ಪಟ್ಟ 20 ಬೀದಿ ನಾಯಿಗಳ ನೈಜ ಕಥೆಗಳನ್ನು ಒಳಗೊಂಡಿದೆ. ಅಲ್ಲದೇ ಆ ನಾಯಿಗಳನ್ನು ಯಾವ ರೀತಿ ರಕ್ಷಿಸಲಾಯಿತು ಎಂದು ಕಲಾವಿದೆ ಸಂಧ್ಯಾ ಕೆ. ಶಿರಸಿ ಅವರು ವರ್ಣಚಿತ್ರಗಳ ಮೂಲಕ ಮನಮುಟ್ಟುವಂತೆ ಚಿತ್ರಿಸಿ ಮುದ್ರಿಸಲಾಗಿದೆ.

ಬೀದಿ ನಾಯಿ ರಕ್ಷಣೆಗೆ ಸ್ವಯಂಸೇವಕರು ಮುಂದಾಗಿ

ಬೀದಿ ನಾಯಿ ರಕ್ಷಣೆಗೆ ಸ್ವಯಂಸೇವಕರು ಮುಂದಾಗಿ

ಸುಜಾಯ ಜಗದೀಶ್ ಅವರ ಪ್ರಯತ್ನಗಳನ್ನು ಅಭಿನಂದಿಸಿದ ಸಂಯುಕ್ತ ಹೊರನಾಡ್ ಅವರು "ನಾನು ವೈಯಕ್ತಿಕವಾಗಿ ಸುಜಾಯ ಮತ್ತು ಸ್ವಯಂಸೇವಕರ ಅನೇಕ ಪ್ರಾಣಿಗಳನ್ನು ಸಂರಕ್ಷಿಸಿದ ಪ್ರಯತ್ನಗಳಿಂದ ಮೆಚ್ಚುತ್ತೇನೆ. ಅಲ್ಲದೇ ನಾಯಿಗಳ ಭಾವನೆಗಳನ್ನು ಕಲಾತ್ಮಕವಾಗಿ ಸಂಧ್ಯಾ ಅವರು ಚಿತ್ರಿಸಿರುವುದು ಬಹಳ ಖುಷಿ ನೀಡಿದೆ. ಇಂತಹ ಪ್ರಯತ್ನಗಳಿಗೆ ಎಲ್ಲರ ಬೆಂಬಲದ ಅವಶ್ಯಕತೆ ಇದೆ. ಸ್ವಯಂಸೇವಕರು ಹೆಚ್ಚು ಹೆಚ್ಚು ಮುಂದೆ ಬಂದು ನಾಯಿಗಳನ್ನು ಸಂರಕ್ಷಿಸಬೇಕು ಎಂದು ಮನವಿ ಮಾಡಿದರು".

ಕಾರವಾರದಲ್ಲಿ ಯುವಕನನ್ನು ಬೆನ್ನಟ್ಟಿ ಸಾಯಿಸಿದ ಬೀದಿ ನಾಯಿಗಳುಕಾರವಾರದಲ್ಲಿ ಯುವಕನನ್ನು ಬೆನ್ನಟ್ಟಿ ಸಾಯಿಸಿದ ಬೀದಿ ನಾಯಿಗಳು

ಸಾಮಾಜಿಕ ಮಾಧ್ಯಮಗಳ ಪಾತ್ರ

ಸಾಮಾಜಿಕ ಮಾಧ್ಯಮಗಳ ಪಾತ್ರ

ಸಾಮಾಜಿಕ ಮಾಧ್ಯಮಗಳು ಸಹ ಇಂತಹ ವಿಚಾರಗಳ ಬಗ್ಗೆ ಹೆಚ್ಚು ಚರ್ಚಿಸಿ ಜನರಲ್ಲಿ ಜಾಗೃತಿ ಮೂಢಿಸುವಂತ ಕಾರ್ಯ ಮಾಡಬೇಕೆಂದರು. ಈ ಪ್ರದರ್ಶನವು ಪ್ರಾಣಿ ಹಕ್ಕುಗಳ ಬಗ್ಗೆ ಅರಿವು ಮೂಡಿಸುತ್ತದೆ, ಸಾಕುಪ್ರಾಣಿಗಳ ಬಗ್ಗೆ ಇರುವ ಕಾನೂನುಗಳು ಮತ್ತು ಸ್ವಯಂಸೇವಕರ ಅವಶ್ಯಕತೆ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡುತ್ತದೆ ಎಂದು ಹೇಳಿದರು.

ಎಂಪ್ಯಾಶನ್ - ಬೀದಿಗಳಲ್ಲಿ ಸಂರಕ್ಷಿಸಲ್ಪಟ್ಟ 20 ಶ್ವಾನಗಳ ಜೀವನದ 2ನೇ ಅವಕಾಶದ ತುಡಿತ ಮತ್ತು ರಕ್ಷಿತ ಶ್ವಾನಗಳ ವರ್ಣಚಿತ್ರಗಳನ್ನು ಪುಸ್ತಕದಲ್ಲಿ ಮನ ಮೀಡಿಯುವಂತೆ ಚಿತ್ರಿಸಲಾಗಿದೆ. ಪ್ರಾಣಿ ಸಂಕುಲದ ಜೊತೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಅಲ್ಲದೇ ಅವುಗಳ ಆರೈಕೆಯನ್ನು ಯಾವ ರೀತಿ ಮಾಡುಬೇಕು ಎಂಬುದನ್ನು ಕುರಿತು ಜಾಗೃತಿ ಅಭಿಯಾನವನ್ನೂ ಸಹ ಪ್ರದರ್ಶಿಸಲಾಗುತ್ತದೆ. ಛಾಯಾಚಿತ್ರ ಪ್ರದರ್ಶನವು ಸೆಪ್ಟೆಂಬರ್ 2ರ ಬೆಳಿಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ಇರುತ್ತದೆ.

ಮನುಜನ ಬದುಕಲ್ಲಿ ನಾಯಿಯ ಪಾತ್ರ, ಮಧುರ ಬಾಂಧವ್ಯ!ಮನುಜನ ಬದುಕಲ್ಲಿ ನಾಯಿಯ ಪಾತ್ರ, ಮಧುರ ಬಾಂಧವ್ಯ!

ಎಂಪ್ಯಾಶನ್ ಬಗೆಗೊಂದಿಷ್ಟು

ಎಂಪ್ಯಾಶನ್ ಬಗೆಗೊಂದಿಷ್ಟು

ಎಂಪ್ಯಾಶನ್ ಎಂಬುದು ಒಂದು ಭಾವನಾತ್ಮಕ ಮತ್ತು ತೀವ್ರ ಕುತೂಹಲದಿಂದ ಕೂಡಿರುವ ಶ್ವಾನಗಳ ರಕ್ಷಣಾ ಕಾರ್ಯಗಳನ್ನು ಸವಿವರವಾಗಿ ಹಂಚಿಕೊಳ್ಳುವ ವಿಶಿಷ್ಟ ಘಟನೆಗಳನ್ನು ಒಳಗೊಂಡ ಭಂಡರವಾಗಿದೆ. ಪ್ರಾಣೆ ಪ್ರೇಮಿಯಾಗಿರುವ ಸುಜಾಯ ಜಗದೀಶ್ ಅವರು ರಚಿಸಿರುವ ಎಂಪ್ಯಾಶನ್ ಪುಸ್ತಕದಲ್ಲಿ ರಸ್ತೆ ಅಪಘಾತ ಹಾಗೂ ಇತರ ಘಟನೆಗಳಿಂದ ಗಾಯಗೊಂಡ 20 ಶ್ವಾನಗಳನ್ನು ರಕ್ಷಿಸಿದ ನೈಜ ಕಥೆಯನ್ನು ಈ ಕಾಫಿ ಟೇಬಲ್ ಪುಸ್ತಕದಲ್ಲಿ ಚಿತ್ರಿಸಲಾಗಿದೆ.

ಆರ್ಟ್ ಲ್ಯಾಬ್ಸ್ ಎಕ್ಸ್‌ಪೋ ನ ಕಲಾವಿದೆ ಸಂಧ್ಯಾ ಕೆ ಶಿರಸಿ ಯವರು ತಮ್ಮ ಕುಂಚದಿಂದ ಚಿತ್ರಿಸಿದ ಚಿತ್ರಗಳನ್ನು ಒಳಗೊಂಡಂತೆ ಪ್ರತಿಯೊಂದು ಶ್ವಾನವನ್ನು ರಕ್ಷಿಸಿದ ಪ್ರಯಾಣವನ್ನು ತಮ್ಮ ದೃಷ್ಟಿಕೋನದಲ್ಲಿ ಚಿತ್ರಿಸಿದ ಚಿತ್ರಣವನ್ನು ಪುಸ್ತಕದಲ್ಲಿ ಮುದ್ರಿಸಲಾಗಿದೆ.

ಮುದ್ದಿನ ನಾಯಿ ರಕ್ಷಿಸಲು ಮಡಿಕೇರಿಯಿಂದ ನಡೆದುಕೊಂಡು ಬಂದ ಯುವಕಮುದ್ದಿನ ನಾಯಿ ರಕ್ಷಿಸಲು ಮಡಿಕೇರಿಯಿಂದ ನಡೆದುಕೊಂಡು ಬಂದ ಯುವಕ

ಗಣ್ಯರ ಪ್ರಶಂಸಾ ಪತ್ರ

ಗಣ್ಯರ ಪ್ರಶಂಸಾ ಪತ್ರ

ಈ ಪುಸ್ತಕವು ಯೋಕಾನ್ ಸಂಸ್ಥಾಪಕ ಡಾ. ಕಿರಣ್ ಮಜುಮ್ದಾರ್ ಶಾ, ಮಾಜಿ ಕ್ರಿಕೆಟಿಗ ಮತ್ತು ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್, ಹೃದ್ರೋಗ ತಜ್ಞ ಪದ್ಮಶ್ರೀ ಡಾ. ರಮಣ ರಾವ್, ಖ್ಯಾತ ಪಶುವೈದ್ಯ ಡಾ. ಪವನ್ ಕುಮಾರ್, ನಟಿ ಶೃತಿ ಹರಿಹರನ್ ಸೇರಿದಂತೆ ಹಲವರು ಬರೆದ ಪ್ರಶಂಸಾ ಪತ್ರಗಳು ಒಳಗೊಂಡಿದೆ.

ಈ ಪುಸ್ತಕವನ್ನು ನಿಸ್ವಾರ್ಥವಾಗಿ ಕೆಲಸ ಮಾಡುವ ಎಲ್ಲ ಸ್ವಯಂಸೇವಕರಿಗೆ ಸಮರ್ಪಿತವಾಗಿದೆ ಎಂದು ಸುಜಾಯ ಅವರು ಹೇಳುತ್ತಾರೆ. "ಈ ಕಾರ್ಯಕ್ರಮದ ಉದ್ದೇಶವು ಸ್ವಯಂಸೇವಕರನ್ನು ಉತ್ತೇಜಿಸುವುದು ಮತ್ತು ಪ್ರಾಣಿಗಳ ಸಮಸ್ಯೆಯನ್ನು ಮಾನವೀಯ ರೀತಿಯಲ್ಲಿ ಪರಿಹರಿಸಲು ಹಾಗೂ ಏಕಕಾಲದಲ್ಲಿ ಪ್ರಾಣಿ ಕಲ್ಯಾಣ ಕಾನೂನುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸಹಾಯ ಮಾಡುವುದಾಗಿದೆ" ಎಂದು ಅವರು ಹೇಳುತ್ತಾರೆ.

ಬೀದಿನಾಯಿಗಳೆಂದರೆ ಬಿಬಿಎಂಪಿಗೆ ಅಷ್ಟೇಕೆ ಅಚ್ಚುಮೆಚ್ಚು? ಬೀದಿನಾಯಿಗಳೆಂದರೆ ಬಿಬಿಎಂಪಿಗೆ ಅಷ್ಟೇಕೆ ಅಚ್ಚುಮೆಚ್ಚು?

English summary
'Save stray dogs with humanity' popular Kannada actress and animal rights activist Samyukta Hornad requests people of Bengaluru. She was addressing an event in MG Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X