ಜುಲೈ 17ರಂದು 'ನಮ್ಮ ನಡಿಗೆ ಕೌದೇನಹಳ್ಳಿ ಕೆರೆ ಕಡೆಗೆ'

Written By:
Subscribe to Oneindia Kannada

ಬೆಂಗಳೂರು,ಜುಲೈ, 16: ಸಾಮಾಜಿಕ ಚಿಂತನೆಯಲ್ಲಿ ಸದಾ ಮುಂದಿರುವ ಯುನೈಟೆಡ್ ವೇ ಬೆಂಗಳೂರು ಮತ್ತು ಕೆಆರ್ ಪುರಂ ಕೆರೆ ಸಂರಕ್ಷಣಾ ಟ್ರಸ್ಟ್ ಆಶ್ರಯದಲ್ಲಿ ಜುಲೈ 17 ರಂದು ಕೆರೆ ಸಂರಕ್ಷಣೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ.

'ನಮ್ಮ ನಡಿಗೆ ಕೌದೇನಹಳ್ಳಿಕ ಕೆರೆ ಕಡೆಗೆ' ಎಂಬ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಕೆ ಆರ್ ಪುರಂ ಶಾಸಕ ಬಿ ಎ ಬಸವರಾಜ್, ಕಾರ್ಪೋರೇಟರ್ ಪದ್ಮಾವತಿ ಶ್ರೀನಿವಾಸ್ ಯುನೈಟೆಡ್ ವೇ ಬೆಂಗಳೂರು ನಿರ್ದೇಶಕರು, ಬಿಬಿಎಂಪಿ ಮುಖ್ಯ ಇಂಜಿನಿಯರ್ ಸತೀಶ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

lake

ಬೆಳಗ್ಗೆ ಎಂಟು ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು ಮಧ್ಯಾಹ್ನ 12 ಗಂಟೆವರೆಗೆ ನಡೆಯಲಿದೆ. ಕೆರೆ ಸಂರಕ್ಷಣೆ ಸಂಬಂಧ ಜಾಗೃತಿ ಸಾರುವ ಭಿತ್ತಿ ಪತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಲಾಗುವುದು.

ವಿಶೇಷ ಆಟಗಳು:
ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಂಗೋಲಿ ಸ್ಪರ್ಧೆ ಸಹ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮಹೇಶ್, 9739059886 ಮತ್ತು ರೀನಾ 9242788750 ಅವರನ್ನು ಸಂಪರ್ಕ ಮಾಡಬಹದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
United Way Bengaluru in association with KR Puram Kere Mathu Parisara Samrakshana Trust is organizing a community event ‘Namma Nadege Kaudenahalli Kere Kadege' (Our Walk towards Kaudenahalli Lake') at Kaudenahalli Lake near KR Puram on Sunday, 17th July 2016 from 8am to 12 noon.
Please Wait while comments are loading...