ಫ್ರೀಡಂ ಪಾರ್ಕ್ ನಲ್ಲಿ ಮೊಳಗಿತು ಕಂಬಳ ಪರ ಧ್ವನಿ

Subscribe to Oneindia Kannada

ಬೆಂಗಳೂರು, ಜನವರಿ 29: ಕಂಬಳ ಪರ ಪ್ರತಿಭಟನೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ಭಾನುವಾರ ಸಾಕ್ಷಿಯಾಯಿತು. ರಾಜಧಾನಿ ಕಂಬಳ ಕ್ರಿಯಾ ಸಮಿತಿಯ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ನೂರಾರು ಜನ ಭಾಗವಹಿಸಿದ್ದರು.

ಕಂಬಳ ನಡೆಯಬೇಕು. ಕಂಬಳ ಕರಾವಳಿ ಮಾತ್ರವಲ್ಲ ಕರ್ನಾಟಕದ ಸಂಸ್ಕೃತಿಯ ಪ್ರತಿಬಿಂಬ. ಹಾಗಾಗಿ ಕಂಬಳ ನಡೆಯಲು ಸರಕಾರ ಅನುವು ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.[ಕಂಬಳ, ಚಕ್ಕಡಿ ಓಟದ ಸ್ಪರ್ಧೆಗೆ ಕಾನೂನಿನ ಮಾನ್ಯತೆ]

 ‘Save Kambala’, Now protest in Bengaluru

ಪ್ರತಿಭಟನೆಯಲ್ಲಿ ವಾಟಾಳ್ ನಾಗರಾಜ್, ಮಾಜಿ ಸಂಸದ ಜಯ ಪ್ರಕಾಶ್ ಹೆಗ್ಡ ಭಾಗವಹಿಸಿದ್ದರು. 'ಕಂಬಳ ನಡೆಯಲು ಯಾರ ಒಪ್ಪಿಗೆಯೂ ಬೇಕಿಲ್ಲ,' ಎಂದು ವಾಟಾಳ್ ಗುಡುಗಿದರು.[ಕರಾವಳಿಯ ಮೂಡಬಿದಿರೆಯಲ್ಲಿ ಹೊತ್ತಿದೆ ಕಂಬಳದ ಕಿಚ್ಚು]

ನಿನ್ನೆಯಷ್ಟೆ ಕೋಣಗಳ ಓಟದ ಕ್ರೀಡೆಗಳಾದ ಕಂಬಳ ಮತ್ತು ಚಕ್ಕಡಿ ಓಟದ ಸ್ಪರ್ಧೆಗೆ ಕಾನೂನಿನ ಮಾನ್ಯತೆ ತರಲು ರಾಜ್ಯ ಸರಕಾರ ನಿರ್ಧರಿಸಿತ್ತು. ಫೆಬ್ರವರಿ 6ರಿಂದ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಕಂಬಳಕ್ಕೆ ಅನುವು ಮಾಡಿಕೊಡಲು ಅಗತ್ಯವಾದ ಕಾನೂನಿನ ತಿದ್ದುಪಡಿ ತರಲು ಸಿದ್ದರಾಮಯ್ಯ ಸಂಪುಟ ಶನಿವಾರ ಸಂಜೆ ನಿರ್ಧರಿಸಿತ್ತು. ಹೀಗಗಿ ಪ್ರತಿಭಟನೆಗೆ ಹೆಚ್ಚಿನ ಜನ ಹರಿದು ಬಂದಿರಲಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Large people joined to ‘Save Kambala’ protest in Freedom Park, Bengaluru.
Please Wait while comments are loading...