ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಕಲಾಸೌಧ ಉಳಿಸುವುದಕ್ಕಾಗಿ ಆನ್ ಲೈನ್ ಅಭಿಯಾನ

|
Google Oneindia Kannada News

ಬೆಂಗಳೂರು, ಜುಲೈ 11: ಬೆಂಗಳೂರಿನ ಹನುಮಂತನಗರದ ಕೆಂಗಲ್‌ ಹನುಮಂತಯ್ಯ ಕಲಾಸೌಧಕ್ಕೆ ತೆರಳಿದರೆ ಅಲ್ಲಿ ಸದ್ಯಕ್ಕೆ ಮೌನವಲ್ಲದೆ ಬೇರೇನೂ ಸಿಕ್ಕುವುದಿಲ್ಲ! ಸದಾ ನಾಟಕ, ನೃತ್ಯ, ಸಂಗೀತ ಎನ್ನುತ್ತ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡೂತ್ತಿದ್ದ ಕೆಂಗಲ್‌ ಹನುಮಂತಯ್ಯ ಕಲಾಸೌಧ ಈಗ ಸ್ತಬ್ಧವಾಗಿದೆ. ಆರು ತಿಂಗಳಿಂದ ಯಾವುದೇ ರಂಗ ಚಟುವಟಿಕೆಗಳು ನಡೆಯದೆ ಇದು ಪಾಳು ಬಿದ್ದಿದೆ.

ಟೆಂಡರ್ ಸಮಸ್ಯೆಯಿಂದಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯೇ ಇದಕ್ಕೆ ಬೀಗ ಹಾಕಿದ್ದು, ಕಲಾಸೌಧದ ಮುಖ್ಯಸ್ಥ ಪಿ.ಡಿ. ಸತೀಶ್ ಚಂದ್ರ ಅವರು 2009ರಲ್ಲಿ ಕೆ.ಎಚ್‌. ಕಲಾಸೌಧ ನಿರ್ವಹಣೆಗಾಗಿ ಪಡೆದಿದ್ದ ಟೆಂಡರ್ ಅವಧಿ 2014ರಲ್ಲಿ ಮುಕ್ತಾಯವಾಗಿತ್ತು. ಆ ನಂತರ ಬಿಬಿಎಂಪಿ ಟೆಂಡರ್ ಅವಧಿಯನ್ನು ವಿಸ್ತರಣೆ ಮಾಡುತ್ತಾ ಬಂದಿತ್ತು. 2017ರ ಫೆಬ್ರವರಿ ನಂತರ ಟೆಂಡರ್ ವಿಸ್ತರಣೆ ಆಗದೆ, ಕಲಾಸೌಧಕ್ಕೆ ಬೀಗ ಜಡಿಯಲಾಗಿದೆ.

Save Kalasoudha in Bengaluru, an online petition

ಈ ಕುರಿತು change.org ಯಲ್ಲಿ ಆನ್ ಲೈನ್ ಪಿಟಿಶನ್ ಸಹ ಆರಂಭವಾಗಿದ್ದು, ಇದಕ್ಕೆ ಬೆಂಬಲ ನೀಡುವವರು, ಕಲಾಸೌಧದ ಚಟುವಟಿಕೆಗಳು ಮತ್ತೆ ಆರಂಭವಾಗಬೇಕು ಎನ್ನುವವರು ಈ ದೂರಿಗೆ ಸಹಿ ಮಾಡುವ ಮೂಲಕ ತಮ್ಮ ಬೆಂಬಲ ಸೂಚಿಸಬಹುದಾಗಿದೆ. ಸಹಿ ಮಾಡುವ ಇಚ್ಛೆ ಇರುವವರು ಇಲ್ಲಿ ಕ್ಲಿಕ್ ಮಾಡಿ

English summary
An online petition to save K.H.Kalasoudha in Hanumanta Nagar area, Bengaluru has started few days before. The main intention of the petition is saving over culture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X