ನ.20ರಂದು 'ಸತ್ತವನ ಸಂತಾಪ' ನಾಟಕದ 5ನೇ ಪ್ರದರ್ಶನ

Posted By: Ramesh
Subscribe to Oneindia Kannada

ಬೆಂಗಳೂರು, ನವೆಂಬರ್. 19: ನಾಲ್ಕು ಯಶಸ್ವಿ ಪ್ರದರ್ಶನಗಳ ಬಳಿಕ ಇದೀಗ ಜ್ಯೋತಿರ್ಮೇಘ ನಾಟಕ ತಂಡವು ಕೈಲಾಸಂ ಬರೆದಿರುವ "ಸತ್ತವನ ಸಂತಾಪ" ಎಂಬ ನಾಟಕದ ಐದನೇ ಪ್ರದರ್ಶನಕ್ಕೆ ಅಣಿಯಾಗಿದೆ. ಇದೇ (ನ.20) ಭಾನುವಾರ ಬೆಂಗಳೂರಿನ ಮಲ್ಲತಹಳ್ಳಿ ಕಲಾಗ್ರಾಮದಲ್ಲಿ ಸಂಜೆ 7.30ಕ್ಕೆ ಪ್ರದರ್ಶನಗೊಳ್ಳಲಿದೆ.

ಈ "ಸತ್ತವನ ಸಂತಾಪ" ನಾಟಕದಲ್ಲಿ ರಾಜಕೀಯ ಕುತಂತ್ರ, ಭ್ರಷ್ಟಾಚಾರ ಮತ್ತು ಲಂಪಟತನಗಳು ಸಮಾಜದಲ್ಲಿ ಅಂದಿನಿಂದ ಇಂದಿನವರೆಗೂ ಅಳಿಸಾಗದ ಒಂದು ಕಪ್ಪು ಚುಕ್ಕಿ ಎಂಬ ಸಾರವನ್ನು ವಿಡಂಬನೆಯ ಮೂಲಕ ವ್ಯಕ್ತಪಡಿಸಿದ್ದು, ಅದಕ್ಕೆ ಹಾಸ್ಯದ ಲೇಪನದ ಮೂಲಕ ಸಮಾಜಕ್ಕೆ ಕೈಗನ್ನಡಿಯಂತಿದೆ.[ಟಿಪಿ ಕೈಲಾಸಂರ ಸತ್ತವನ ಸಂತಾಪ ನಾಟಕ ನೋಡಿ]

Sattavana Santapa drama 5th show play at mallathahalli Kalagrama

ಮಧ್ಯಮ ವರ್ಗದವರ ನೋವು, ಗಂಡ ಹೆಂಡಿರ ಪ್ರೀತಿ ಕೂಡಿದ ಜಗಳ, ಆಡು ಭಾಷೆಯ ಮಾತುಗಳು, ಇವೆಲ್ಲವನ್ನೂ ನಾಜೂಕಾಗಿ ಹೆಣೆದಿರುವ ಕೈಲಾಸಂ ಅವರ ಈ ನಾಟಕವು ಎಂದೆಂದಿಗೂ ಪ್ರಸತುತವಾಗಿರುವಂತೆ, ಹಾಗೇ ಯೋಚೆನೆಗೆ ಈಡುವಾಡುವಂತೆ ಬರೆದಿದ್ದಾರೆ.

ಸಾವಿನ ಸುತ್ತ ನಡೆಯುವ ತಂತ್ರ-ಪ್ರತಿ ತಂತ್ರಗಳ, ಮಾನವನ ದುರಾದರ್ಶಗಳ ಅತ್ಯಂತ ಸೋಕ್ಷ್ಮವಾದ, ವಿಡಂಬನಾತ್ಮಕ ಹಾಸ್ಯದ ಕಥಾಹಂದರವನ್ನು ಈ ನಾಟಕವು ಹೊಂದಿದೆ. ಬೆಂಗಳೂರಿನ ಕಲಾಗ್ರಾಮದಲ್ಲಿ ಈ ನಾಟಕದ ಐದನೇ ಪ್ರದರ್ಶನವನ್ನು ನವೆಂಬರ್ 20ರಂದು ಸಂಜೆ 7.30ಕ್ಕೆ ನಡೆಯಲಿದೆ. ನಾಟಕದ ಅವಧಿ ತೊಂಭತ್ತು ನಿಮಿಷಗಳು.

ನಾಟಕದ ದರ: 100 ರೂ.
ಆನ್ ಲೈನ್ ಟೆಕೆಟ್ ಬುಕ್ಕಿಂಗ್ ಗಾಗಿ ಇಲ್ಲಿ ಕ್ಲಿಕ್ಕಿಸಿ .

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
TP Kailsam play 'Sattavana Santaapa' ridicules the society. Although this play was written decades ago, most of the social issues that can be seen in the play are true even today. Kiran Prabhu has directed the play which will be 5th show staged at Mallathahalli Kalagrama Bengaluru. on Sunday November 20, 2016
Please Wait while comments are loading...