ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಪಿ ಕೈಲಾಸಂರ ಸತ್ತವನ ಸಂತಾಪ ನಾಟಕ ನೋಡಿ

By Mahesh
|
Google Oneindia Kannada News

ಬೆಂಗಳೂರು, ಜೂನ್ 29: ರಂಗಭೂಮಿಯ ಒಲವಿಗಾಗಿ ಒಟ್ಟುಗೂಡಿ "ಜ್ಯೋತಿರ್ಮೇಘ" ಎಂಬ ಪುಟ್ಟ ತಂಡವೊಂದನ್ನು ಕಟ್ಟಿಕೊಂಡು ಟಿ.ಪಿ. ಕೈಲಾಸಂ ಅವರ "ಸತ್ತವನ ಸಂತಾಪ"ವನ್ನು ಮತ್ತೊಮ್ಮೆ ಪ್ರದರ್ಶಿಸುತ್ತಿದ್ದಾರೆ.

ರಂಗಾಸಕ್ತ ಸಮಾನ ವಯಸ್ಸಿನ ವಿದ್ಯಾರ್ಥಿಗಳ ಸೇರುವಿಕೆ ಜ್ಯೋತಿರ್ಮೇಘ ತಂಡ ರೂಪ ತಾಳಲು ಕಾರಣ. ಶಿಸ್ತು ಮತ್ತು ಬದ್ಧತೆಗಳನ್ನು ಇನ್ನಷ್ಟು ಮೈಗೂಡಿಸಿಕೊಳ್ಳುವುದಕ್ಕೆ ರಂಗಭೂಮಿಯೆಡೆಗೆ ಚಿತ್ತ ಹರಿಸಿ ಅನೇಕ ಮನಸ್ಸುಗಳು ಒಂದೆಡೆಯೇ ಸೇರಿ ಒಂದೇ ಹುಡುಕಾಟದೆಡೆಗೆ ದಾಪುಗಾಲಿಡುತ್ತಾ ತನ್ನ ಪ್ರಥಮ ಪ್ರಯತ್ನವಾಗಿ ಕನ್ನಡದ ಹೆಸರಾಂತ ನಾಟಕಗಾರ ಟಿ.ಪಿ. ಕೈಲಾಸಂ ಅವರ "ಸತ್ತವನ ಸಂತಾಪ" ನಾಟಕವನ್ನು ಬೆಂಗಳೂರಿನಲ್ಲೇ ಎರಡು ಯಶಸ್ವೀ ಪ್ರದರ್ಶನಗಳನ್ನು ನೀಡಿ ಇದೀಗ ಅದೇ ನಾಟಕದ ಮರು ಪ್ರದರ್ಶನವನ್ನು ಬೆಂಗಳೂರಿನ ಕೆ. ಹೆಚ್. ಕಲಾಸೌಧದಲ್ಲಿ ಪ್ರದರ್ಶಿಸುವುದಕ್ಕೆ ಮುಂದಾಗಿದೆ.

Sattavana Santapa - TP Kailsam Kannada Play by Jyotirmegha Team KH Kala Soudha

ನಾಟಕದ ಹೆಸರು: ಸತ್ತವನ ಸಂತಾಪ
ತಂಡ: ಜ್ಯೋತಿರ್ಮೇಘ
ನಿರ್ದೇಶನ: ಕಿರಣ್ ಪ್ರಭು
ಸಹ ನಿರ್ದೇಶನ: ಅಜಯ್ ನಾಯಕ್
ಸಂಗೀತ: ಶಶಾಂಕ್ ಪ್ರಣವ್
ಬೆಳಕು: ಮನಸ್ ಸಂಪತ್
ರಂಗ ಸಜ್ಜಿಕೆ: ಮಂಜು ಬಿ.ಎಂ.

ಪ್ರದರ್ಶನದ ಸ್ಥಳ: ಕೆ.ಹೆಚ್. ಕಲಾಸೌಧ
ದಿನಾಂಕ: ಜುಲೈ 01, 2016
ಸಮಯ: ಸಂಜೆ 7.30
ಟಿಕೆಟ್ ದರ: 100 /
Our Facebook page: http://facebook.com/jyotirmegha

ಸಾವಿನ ಸುತ್ತ ನಡೆಯುವ ತಂತ್ರ-ಪ್ರತಿ ತಂತ್ರಗಳನ್ನು ಮಾನವನ ದುರಾದರ್ಶವನ್ನು ಅತ್ಯಂತ ಸೂಕ್ಷ್ಮವಾಗಿ ವಿಡಂಬನಾತ್ಮಕವಾದ ಹಾಸ್ಯದ ಕಥಾಹಂದರವನ್ನು ಸೃಷ್ಟಿಸಿರುವುದು ಈ ನಾಟಕದ ಹೃದಯವೆಂದರೆ ಅತಿಶಯೋಕ್ತಿಯಲ್ಲ. ಬೆಂಗಳೂರಿನ ಕೆ. ಹೆಚ್. ಕಲಾಸೌಧದಲ್ಲಿ ಈ ನಾಟಕದ ಮೂರನೇ ಪ್ರದರ್ಶನವನ್ನು ಜುಲೈ 1ರಂದು ಹಮ್ಮಿಕೊಂಡಿದೆ.

ಟಿಪಿ ಕೈಲಾಸಂರ ಸಂತವನ ಸಂತಾಪ ನಾಟಕ ನೋಡಿ

ಜ್ಯೋತಿರ್ಮೇಘ ತಂಡ. ಕಿರಣ್ ಪ್ರಭು ಅವರ ವಿನ್ಯಾಸ/ನಿರ್ದೇಶನ, ಈ ನಾಟಕಕ್ಕಿದ್ದು, ಶಶಾಂಕ್ ಪ್ರಣವ್ ಸಂಗೀತ ನೀಡಿದ್ದಾರೆ. ಬೆಳಕಿನ ವಿನ್ಯಾಸದ ಜವಾಬ್ದಾರಿಯನ್ನು ಮನಸ್ ಸಂಪತ್ ಅವರು ಹೊತ್ತಿದ್ದಾರ ನಾಟಕದ ಪೂರ್ಣಾವಧಿ ನೂರು ನಿಮಿಷಗಳು.

ರಾಜಕೀಯ ಕುತಂತ್ರ, ಭ್ರಷ್ಟಾಚಾರ ಮತ್ತು ಲಂಪಟತನಗಳು ಸಮಾಜದಲ್ಲಿ ಅಂದಿನಿಂದ ಇಂದಿನವರೆಗೂ ಅಳಿಸಾಗದ ಒಂದು ಕಪ್ಪು ಚುಕ್ಕಿ ಎಂಬ ಸಾರವನ್ನು ವಿಡಂಬನೆಯ ಮೂಲಕ ವ್ಯಕ್ತಪಡಿಸಿ, ಅದಕ್ಕೆ ಹಾಸ್ಯದ ಲೇಪನದ ಮೂಲಕ ಸಮಾಜಕ್ಕೆ ಕೈಗನ್ನಡಿಯಂತಿರುವ ನಾಟಕ ಸತ್ತವನ ಸಂತಾಪ. ಮಧ್ಯಮ ವರ್ಗದವರ ನೋವು, ಗಂಡ ಹೆಂಡಿರ ಪ್ರೀತಿ ಕೂಡಿದ ಜಗಳ, ಆಡು ಭಾಷೆಯ ಮಾತುಗಳು, ಇವೆಲ್ಲವನ್ನೂ ನಾಜೂಕಾಗಿ ಹೆಣೆದಿರುವ ಕೈಲಾಸಂ ಅವರ ಈ ನಾಟಕವು ಎಂದೆಂದಿಗೂ ಪ್ರಸತುತವಾಗಿರುವಂತೆ, ಹಾಗೇ ಯೋಚೆನೆಗೆ ಈಡುವಾಡುವಂತೆ ಬರೆದಿದ್ದಾರೆ.

ಟಿಕೆಟ್ ದರ: 100 ರು.

ಟಿಕೆಟ್ ಬುಕಿಂಗ್ ಗಾಗಿ ಕ್ಲಿಕ್ ಮಾಡಿ: ಬುಕ್ ಮೈಶೋ.ಕಾಂ ಲಿಂಕ್
(ಒನ್ಇಂಡಿಯಾ ಸುದ್ದಿ)

English summary
TP Kailsam play 'Sattavana Santaapa' ridicules the society. Although this play was written decades ago, most of the social issues that can be seen in the play are true even today. Kiran Prabhu has directed the play which will be staged at KH Kalasoudha on July 01, 2016
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X