ಕೈಲಾಸಂ ಅವರ ಸತ್ತವನ ಸಂತಾಪ ನಾಟಕ ನೋಡಿ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 08: ಹಾಸ್ಯ ಮತ್ತು ಗಂಭಿರತೆಗಳು ಕೈಲಾಸಂ ನಾಟಕಗಳ ವಿಶಿಷ್ಟತೆ. ನಿಜಜೀವನದಲ್ಲಿ ನಾವು ಹೇಗೆ ಹುಚ್ಚರಂತೆ ನಡೆದುಕೊಳ್ಳುತ್ತೇವೆ ಎಂಬುದನ್ನು ಅವರ ನಾಟಕಗಳು ಎತ್ತಿ ತೋರಿಸುತ್ತವೆ. ಅವು ನಮಗೆ ತೋರಿಸುವ ಸಮಾಜದ ವಿಕಾರಗಳನ್ನು ನಾವೇ ನೋಡಿ ನಗುತ್ತೇವೆ. ಅಂತಹ ನಾಟಕಗಳಲ್ಲಿ ಒಂದು, "ಸತ್ತವನ ಸಂತಾಪ".

ಬಹುತೇಕ ಹೊಸಬರು - ಅದರಲ್ಲೂ, ಹೆಚ್ಚಿನವರು ವಿದ್ಯಾರ್ಥಿಗಳು ಸೇರಿ ಕಟ್ಟಿಕೊಂಡಿರುವ ರಂಗತಂಡ ಜ್ಯೋತಿರಮೇಘ. ಈ ತಂಡದ ಮೊದಲ ಪ್ರಯೋಗ ಟಿ.ಪಿ. ಕೈಲಾಸಂ ಅವರ "ಸತ್ತವನ ಸಂತಾಪ" ನಾಟಕದ ಎರಡನೇ ಪ್ರದರ್ಶನವು
ಕೆ.ಹೆಚ್. ಕಲಾಸೌಧದಲ್ಲಿ ಮಾರ್ಚ್ 9, 2016 ರಂದು ಸಂಜೆ 7.30ಕ್ಕೆ ಪ್ರದರ್ಶನವಾಗಲಿದೆ.

ನಾಟಕದ ಹೆಸರು: ಸತ್ತವನ ಸಂತಾಪ
ಪ್ರದರ್ಶನದ ಸ್ಥಳ: ಕೆ.ಹೆಚ್. ಕಲಾಸೌಧ, ಹನುಮಂತ ನಗರ, ಬೆಂಗಳೂರು
ದಿನಾಂಕ: ಮಾರ್ಚ್ 9, 2016.
ಸಮಯ: ಸಂಜೆ 7.30
ಟಿಕೆಟ್ ದರ: 100 /-

Sattavana Santaapa is a Kannada play written by TP Kailasam KH Kalasoudha 9 March

"ಸತ್ತವನ ಸಂತಾಪ" ನಾಟಕವು ಈಗಿನ ಸಾಮಾಜಿಕ ಸ್ಥತಿಗೆ ತುಂಬ ಹತ್ತಿರ. ಈ ನಾಟಕವು ಹೆಂಡತಿಯನ್ನು ತನ್ನ ತಂದೆಯಿಂದ ಹಣ ಕೇಳಲು ಪದೇ ಪದೇ ಸತಾಯಿಸುವ ನರಸಿಂಹಯ್ಯ ಎಂಬ ವ್ಯಕ್ತಿಯ ಸುತ್ತ ನಡೆಯುತ್ತದೆ. ತಂದೆಗೆ ಹಣಕ್ಕಾಗಿ ಪತ್ರ ಬರೆಯಲು ನಿರಾಕರಿಸುವ ಹೆಂಡತಿಗೆ ತನ್ನ ಬೆಲೆ ತಿಳಿಸಬೇಕು ಎಂದು ತಾನು ಕೆರೆಗೆ ಬಿದ್ದು ಸತ್ತಂತೆ ನಟಿಸುತ್ತಾನೆ, ನರಸಿಂಹಯ್ಯ. ನರಸಿಂಹಯ್ಯನ ಸಾವನ್ನು ಊರಿನ ಶ್ಯಾನುಭೋಗರು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ.

ಕೊನೆಗೆ ನರಸಿಂಹಯ್ಯನ ಬೆಲೆ ತನ್ನ ಹೆಂಡತಿಗೆ ಗೊತ್ತಾಗುತ್ತದೋ ಅಥವ ಅವನ ಹೆಂಡತಿಗೆ ತನ್ನ ಗಂಡನ ಬೆಲೆ ಗೊತ್ತಾಗುತ್ತೋ, ಅಥವ ಯಾರ ಬೆಲೆ ಮತ್ತು ಯೋಗ್ಯತೆಗಳು ಯಾರಿಗೆ ಅರಿವಾಗುತ್ತೆ ಎಂಬುದು ಈ ನಾಟಕದ ಕಥಾ ವಸ್ತು. ನಾಟಕವು ಪ್ರೇಕ್ಷಕರನ್ನು ನಗಿಸಿದರೂ, ಆ ನಗುವಿನ ಕೆಳಗೆ ಒಂದು ಗಂಭೀರವಾದ ಚಿಂತನೆ ಇದೆ.


Cast & Crew
==================
ರಚನೆ: ಟಿಪಿ ಕೈಲಾಸಂ
ನಿರ್ದೇಶನ: ಕಿರಣ್ ಪ್ರಭು
ಸಂಗೀತ: ಶಶಾಂಕ್ ಪ್ರಣವ್
ಬೆಳಕು: ಮನಸ್ ಸಂಪತ್

1. ಕಿರಣ್ ಚನ್ನವೀರ್ (ನರಸಿಂಹಯ್ಯ)
2. ಸಿಂಧು ಪುರೋಹಿತ್ (ಲಕ್ಷಮ್ಮ)
3. ಅಲ್ತಾಫ್ (ಶ್ಯಾನುಭೋಗ)
4. ಅಶ್ವಿನಿ (ಕೆಂಪಮ್ಮ)
5. ಪ್ರವೀಣ್ (ಧರಣ್ಣಯ್ಯ)
6. ಶರತ್ ಗೌಡ (ಸದಾಶಿವಯ್ಯ)
7. ಅರ್ಜುನ್ ಕುಮಾರ್ (ವೆಂಕಟರಮಣ ಶೆಟ್ರು)
8. ಶರತ್ ಪಿ. ಆರ್. (ಪೊಲೀಸ್ ಇನ್ಸ್ಪೆಕ್ಟರ್)
9. ವರುಣ್ (ಪೊಲೀಸ್ ಪೇದೆ)
10. ಶ್ರೀನಿಧಿ, ಧನುಶ್, ಅಕ್ಷಯ್, ಸುದರ್ಶನ್ (ದನಕಾಯುವವರು)

ಸಹಕಾರ: ಅವಿನಾಶ ಶಾಸ್ತ್ರಿ, ವರ್ಷ ವ.ಕೆ. ರಾವ್, ಅಜಯ್ ನಾಯಕ್, ಮನೋಜ್ ಎನ್, ಮನೋಹರ್ ಎನ್, ನಿಖಿಲ್ ವಾಯ್ಕರ್, ಅಪೂರ್ವ ಅಡಿಗ, ಪವನ್ ಕುಮಾರ್ ಎ, ನಿಖಿಲ್.

Sattavana Santaapa is a Kannada play written by TP Kailasam KH Kalasoudha 9 March

ಟಿಕೆಟುಗಳು 99doing.com ನಲ್ಲಿ ಲಭ್ಯ. https://www.99doing.com/sattavanasantaapa
Discount Coupon code: STVSNT20 (20% discount)


Our Facebook page: http://facebook.com/jyotirmegha
Food partner: South Kitchen
Online partner: One India
Photography Partner: Capture Life
Ticketing partner: Filmy sphere

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sattavana Santaapa is a Kannada play written by TP Kailasam KH Kalasoudha 9 MarchJyotirmegha Amateur Theatre Troupe, which was built mainly by students, is staging the second show of its first production, TP Kailasam's Sattavana Santaapa directed by Kiran Prabhu at KH Kalasoudha on 9th March, 2016 at 7.30 PM
Please Wait while comments are loading...