ಶಶಿಕಲಾಗೆ ಜೈಲೂಟವೇ ಗ್ಯಾರಂಟಿ, ಜತೆಗಿಬ್ಬರು ಸಹ ಕೈದಿ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಫೆಬ್ರವರಿ 15: ಶಶಿಕಲಾ ನಟರಾಜನ್ ಗೆ ಜೈಲೂಟವೇ ಗ್ಯಾರಂಟಿಯಾಗಿದೆ. ಅವರ ಸೆಲ್ ನಲ್ಲಿ ಇಬ್ಬರು ಮಹಿಳಾ ಕೈದಿಗಳು ಕೂಡ ಇರಲಿದ್ದಾರೆ. ಏರ್ ಕಂಡೀಷನ್ ಸೆಲ್ ಬೇಕು ಎಂಬ ಶಶಿಕಲಾ ಮನವಿಯನ್ನು ಕೂಡ ಕೋರ್ಟ್ ತಿರಸ್ಕರಿಸಿದೆ. ಜೈಲಿಗೆ ತೆರಳುವ ಮುನ್ನ ಕೋರ್ಟ್ ನಲ್ಲಿ ಆಕೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದರು.

ಅದರಲ್ಲಿ ಮನೆಯಲ್ಲಿ ಮಾಡಿದ ಅಡುಗೆ ಊಟ ಮಾಡಲು ಅವಕಾಶ ಹಾಗೂ ಏಸಿ ಕೋಣೆ ಕೂಡ ಸೇರಿದ್ದವು. ಗಣ್ಯ ಅತಿಥ್ಯ ನೀಡುವಂಥ ಯಾವುದೇ ಸೌಕರ್ಯವನ್ನು ನ್ಯಾ. ಅಶ್ವಥ್ ನಾರಾಯಣ್ ಸ್ಪಷ್ಟವಾಗಿ ನಿರಾಕರಿಸಿದರು. 2015ರಲ್ಲಿ ಜಯಲಲಿತಾ ಅವರನ್ನು ಇರಿಸಿದ್ದ ಬ್ಯಾರಕ್ ನ ನಂತರದ ಬ್ಯಾರಕ್ ನಲ್ಲಿ ಇರಿಸಬೇಕು ಎಂದು ಮನವಿ ಮಾಡಿದರು.[ಜಯಲಲಿತಾ ಗೆಳತಿ ಶಶಿಕಲಾ ನಟರಾಜನ್ ಕೈದಿ ನಂಬರ್ 10711]

Sasikala to eat jail food, share cell with two women

ಆದರೆ, ಈ ನಿರ್ಧಾರವನ್ನು ಜೈಲು ಅಧಿಕಾರಿಗಳಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ಜೈಲು ಅಧಿಕಾರಿಗಳು ಕೂಡ ಈ ಪ್ರಕರಣದಲ್ಲಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. ನಿಯಮದ ಪುಸ್ತಕದಲ್ಲಿ ಏನಿದೆಯೋ ಅವೆಲ್ಲವನ್ನೂ ಪೂರೈಸುತ್ತೇವೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.[ಶಶಿಕಲಾ, ಜಯಾ ಬೆಂಬಲಿಗರ ಮಾರಾಮಾರಿ; ಪರಿಸ್ಥಿತಿ ಉದ್ವಿಗ್ನ]

ಶಶಿಕಲಾ ಅವರಿಟ್ಟಿದ್ದ ಬೇಡಿಕೆಯಲ್ಲಿ ಮಂಚ, 24 ಗಂಟೆ ನೀರಿನ ಸೌಲಭ್ಯ, ಟಿವಿ, ನಡೆದಾಡಲು ಸ್ಥಳ, ವೆಸ್ಟರ್ನ್ ಕಮೋಡ್ ಒದಗಿಸಲಾಗುವುದು. ಅದರೆ ಏರ್ ಕಂಡೀಷನ್ ಕೊಠಡಿ, ಮನೆಯಲ್ಲಿ ಮಾಡಿದ ಅಡುಗೆ, ಜಯಲಲಿತಾ ಅವರಿದ್ದ ಬ್ಯಾರಕ್ ನಂತರದಲ್ಲಿ ಪ್ರತ್ಯೇಕ ಬ್ಯಾರಕ್, ಒಬ್ಬರು ಸಹಾಯಕರಿಗಾಗಿ ಅವರಿಟ್ಟಿದ್ದ ಮನವಿಯನ್ನು ನಿರಾಕರಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sasikala will have to eat jail cooked food and share the barrack with two women. A request for an AC cell too has been rejected by the court. Sasikala had a list of demands before she was taken to jail. They included home cooked food as well as an AC room.
Please Wait while comments are loading...