ಜಯಲಲಿತಾ ಗೆಳತಿ ಶಶಿಕಲಾ ನಟರಾಜನ್ ಕೈದಿ ನಂಬರ್ 9934

By: ವಿಕಾಸ್ ನಂಜಪ್ಪ
Subscribe to Oneindia Kannada
ಬೆಂಗಳೂರು, ಫೆಬ್ರವರಿ 15: ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಶಶಿಕಲಾ ನಟರಾಜನ್ ಬೆಂಗಳೂರಿನ ಜೈಲಿನಲ್ಲಿ ಇನ್ನು ಮುಂದೆ ಕೈದಿ ಸಂಖ್ಯೆ 9934. ಜೈಲು ಸೇರಿದ ಶಶಿಕಲಾಗೆ ಕೈದಿ ಸಂಖ್ಯೆಯನ್ನೂ ನೀಡಲಾಗಿದೆ. ಇನ್ನು ಮತ್ತೊಬ್ಬ ದೋಷಿ ಇಳವರಸಿಗೆ 9935 ಮತ್ತು ಸುಧಾಕರ್ ಗೆ 9936ಸಂಖ್ಯೆ ವಿತರಿಸಲಾಗಿದೆ.

ಇದಕ್ಕೂ ಮುನ್ನ ಬೆಂಗಳೂರಿನ ಕೋರ್ಟ್ ಗೆ ಶಶಿಕಲಾ ಶರಣಾದರು. ಆಕೆಯನ್ನು ಜೈಲಿಗೆ ಕಳುಹಿಸುವುದಕ್ಕೂ ಮುನ್ನ ಭದ್ರತಾ ಕಾರಣಗಳಿಗಾಗಿ ಸೆಂಟ್ರಲ್ ಜೈಲಿನ ಆವರಣದಲ್ಲಿ ವಿಶೇಷ ಕೋರ್ಟ್ ಸ್ಥಾಪಿಸಲಾಗಿತ್ತು. ಸುಪ್ರೀಂಕೋರ್ಟ್ ನ ತೀರ್ಪಿನ ಆಯ್ದ ಭಾಗವನ್ನು ಓದಲಾಯಿತು. ಈ ಹಿಂದೆ ಜಯಲಲಿತಾ ಅವರನ್ನು ಇರಿಸಿದ್ದ ಬ್ಯಾರಕ್ ನ ನಂತರದ್ದರಲ್ಲೇ ತನ್ನನ್ನು ಇರಿಸಬೇಕು ಎಂದು ಶಶಿಕಲಾ ಮನವಿ ಸಲ್ಲಿಸಿದರು.[ಜೈಲಿಗೆ ತೆರಳುವ ಮುನ್ನ ಶಶಿಕಲಾ ಭೀಷ್ಮ ಪ್ರತಿಜ್ಞೆ, ದ್ರೌಪದಿ ಶಪಥ!]

Sasikala Natarajan is prisoner number 10711

ಶಶಿಕಲಾ ಜೈಲು ಆವರಣದ ಬಳಿ ಬರುತ್ತಿದ್ದಂತೆ ಭಾರೀ ಗದ್ದಲ ಏರ್ಪಟ್ಟಿತು. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಬೇಕಾಯಿತು. ಹಿಂಸಾಚಾರದಲ್ಲಿ ಹಲವು ವಾಹನಗಳು ಜಖಂ ಆದವು. ಶರಣಾಗಲು ಕಾಲಾವಕಾಶ ಕೋರಿದ್ದ ಶಶಿಕಲಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.[ಶಶಿಕಲಾ, ಜಯಾ ಬೆಂಬಲಿಗರ ಮಾರಾಮಾರಿ; ಪರಿಸ್ಥಿತಿ ಉದ್ವಿಗ್ನ]

ಶಶಿಕಲಾ ಜೈಲು ಆವರಣದ ಬಳಿ ಬಂದಾಗ ಆಕೆಯ ಪತಿ ನಟರಾಜನ್ ಮತ್ತು ಇತರ ಸಂಬಂಧಿಕರು ಇದ್ದರು. ಹಲವು ಬೆಂಬಲಿಗರು ಸಹ ಇದ್ದರು. ಆದರೆ ಬೆಂಬಲಿಗರ ಸಂಖ್ಯೆಗೆ ಹೋಲಿಸಿದರೆ ಪೊಲೀಸರು ಮತ್ತು ಪತ್ರಕರ್ತರ ಸಂಖ್ಯೆ ಹೆಚ್ಚಿತ್ತು. ಮಂಗಳವಾರ ಸುಪ್ರೀಂ ಕೋರ್ಟ್ ವಿಚಾರಣೆ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು. ಅದರ ಪ್ರಕಾರ ಶಶಿಕಲಾ ನಟರಾಜನ್ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sasikala Natarajan is prisoner number 9934. She has been taken to jail and a prisoner number has also been allotted. Co-convict Ilavarasi has been allotted number 9935. Earlier Sasikala surrendered before the court in Bengaluru. The special court set up in the premises of the central jail.
Please Wait while comments are loading...