ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

10 ಕೋಟಿ ರು ದಂಡ ಕಟ್ಟದಿದ್ದರೆ ಶಶಿಕಲಾಗೆ ಶಿಕ್ಷೆ ಹೆಚ್ಚಳ

ಶಶಿಕಲಾ ನಟರಾಜನ್ ಅವರಿಗೆ 10 ಕೋಟಿ ರು ದಂಡ ಪಾವತಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿರುವುದು ಗೊತ್ತಿರಬಹುದು. ಒಂದು ವೇಳೆ ಸುಪ್ರೀಂಕೋರ್ಟ್ ಆದೇಶ ಪಾಲಿಸುವಲ್ಲಿ ವಿಫಲರಾದರೆ, ದಂಡದ ಮೊತ್ತ ಪಾವತಿಸದಿದ್ದರೆ ಏನಾಗುತ್ತೆ? ಮುಂದೆ ಓದಿ..

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 21: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿ ಎನಿಸಿಕೊಂಡು ಪರಪ್ಪನ ಅಗ್ರಹಾರ ಜೈಲು ಶಿಕ್ಷೆ ಪಡೆದ ಎಐಎಡಿಎಂಕೆ ನಾಯಕಿ ಶಶಿಕಲಾ ನಟರಾಜನ್ ಅವರಿಗೆ 10 ಕೋಟಿ ರು ದಂಡ ಪಾವತಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿರುವುದು ಗೊತ್ತಿರಬಹುದು. ಒಂದು ವೇಳೆ ಸುಪ್ರೀಂಕೋರ್ಟ್ ಆದೇಶ ಪಾಲಿಸುವಲ್ಲಿ ವಿಫಲರಾದರೆ, ದಂಡದ ಮೊತ್ತ ಪಾವತಿಸದಿದ್ದರೆ ಏನಾಗುತ್ತೆ? ಮುಂದೆ ಓದಿ..

ಸುಪ್ರೀಂಕೋರ್ಟ್ ಆದೇಶದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ ಶರಣಾದ ಶಶಿಕಲಾ ನಟರಾಜನ್ ಅವರು ಇನ್ನೂ ಮೂರುವರೆ ವರ್ಷ ಜೈಲುವಾಸದಲ್ಲಿರಬೇಕಾಗುತ್ತದೆ. ಜತೆಗೆ ಕೋರ್ಟ್ ವಿಧಿಸಿರುವ 10 ಕೋಟಿ ರು ದಂಡದ ಮೊತ್ತವನ್ನು ಶಶಿಕಲಾ, ಇಳವರಸಿ, ಸುಧಾಕರನ್ ಅವರು ಪಾವತಿಸಬೇಕಾಗಿದೆ.

Sasikala faces 13 more months in jail if she does not pay Rs 10cr

ದಂಡದ ಮೊತ್ತ ಪಾವತಿಸಲು ವಿಫಲರಾದರೆ ಶಶಿಕಲಾ ಅವರು ಹೆಚ್ಚುವರಿಯಾಗಿ 13 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಮುಂಚೆ 2014ರಲ್ಲಿ 21 ದಿನಗಳ ಕಾಲ ಇದೇ ಜೈಲಿನಲ್ಲಿ ಕಾಲಕಳೆದಿದ್ದರು. ಈಗ 3 ವರ್ಷ 11 ತಿಂಗಳುಗಳ ಕಾಲ ಜೈಲುವಾಸ ಅನುಭವಿಸಬೇಕಾಗಿದೆ.

ಶಶಿಕಲಾ, ಇಳವರಿ ಇಬ್ಬರು ಸಾಮಾನ್ಯ ಸೆಲ್ ಗಳಲ್ಲಿದ್ದು, ಯಾವುದೇ ವಿಶೇಷ ಸೌಲಭ್ಯ ನೀಡಲಾಗಿಲ್ಲ, ಸುಧಾಕರನ್ ಅವರು ಪುರುಷರ ಸೆಲ್ ನಲ್ಲಿದ್ದಾರೆ. ಎಲ್ಲಾ ಖೈದಿಗಳಂತೆ ಜೈಲಿನಲ್ಲಿ ತಯಾರಿಸಿದ ಆಹಾರ ಸೇವಿಸುತ್ತಿದ್ದಾರೆ. ಟಿವಿ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಜೈಲಿನ ವೈದ್ಯರು ನಿರಂತರವಾಗಿ ಎಲ್ಲರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಯಾವುದೇ ಸಮಸ್ಯೆಯಿಲ್ಲ ಎಂದು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಎಸ್ ಪಿ ಕೃಷ್ಣಕುಮಾರ್ ಅವರು ಪ್ರಕಟಣೆ ಹೊರಡಿಸಿದ್ದಾರೆ.

ಈ ಮೂಲಕ ಶಶಿಕಲಾ ಅವರಿಗೆ ಬೆಂಗಳೂರಿನ ಜೈಲಿನಲ್ಲಿ ಸಹ ಖೈದಿಗಳಿಂದ ಬೆದರಿಕೆ ಇದೆ. ಚೆನ್ನೈಗೆ ವರ್ಗಾಯಿಸಲಾಗುವುದು ಎಂಬ ಸುದ್ದಿಗಳನ್ನು ಕೃಷ್ಣಕುಮಾರ್ ಅಲ್ಲಗೆಳೆದಿದ್ದಾರೆ(ಪಿಟಿಐ)

English summary
AIADMK leader V.K. Sasikala, serving a jail term after her conviction in a corruption case, will have to serve 13 more months in prison if she fails to pay a fine of Rs 10 crore imposed by the Supreme Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X