ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಳೆ ನಾಟಕ ಪ್ರದರ್ಶನ : ರಂಗಭೂಮಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಹೇಳುವ 'ಸರ್ಗ'

|
Google Oneindia Kannada News

ರಂಗಭೂಮಿ ಅಂದರೆ ಏನು?, ಇಂದಿನ ರಂಗಭೂಮಿಯಲ್ಲಿ ಎಲ್ಲವೂ ಸರಿ ಇದೆಯೇ?, ಚಿತ್ರರಂಗಕ್ಕೆ ಹೋಗಬೇಕು ಎನ್ನುವ ಉದ್ದೇಶಕ್ಕೆ ರಂಗಭೂಮಿಯನ್ನು ಬಳಸಿಕೊಳ್ಳುವುದು ಸರಿಯೇ?, ರಂಗಭೂಮಿಯೇ ತನ್ನ ಜೀವ ಎಂದು ನಂಬಿಕೊಂಡಿರುವ ಕಲಾವಿದ, ಅದರಿಂದಲೇ ಜೀವನ ಮಾಡಲು ಸಾಧ್ಯವೇ? ಹೀಗೆ ರಂಗಭೂಮಿಯ ಬಗ್ಗೆ ಇರುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಬೇಕು ಎಂದರೆ 'ಸರ್ಗ' ನಾಟಕ ನೋಡಿ.

ನಾಟಕ : ಸರ್ಗ

ರಚನೆ, ನಿರ್ದೇಶನ: ಭರತ್ ಸ ಜಗ್ಗನ್ನಾಥ್

ಯಾವಾಗ : ನಾಳೆ (ಶನಿವಾರ) ಸಂಜೆ : 4:30 ಹಾಗೂ 7:30ಕ್ಕೆ (ಎರಡು ಪ್ರದರ್ಶನ)

ಸ್ಥಳ : ಕೆ.ಹೆಚ್ ಕಲಾ ಸೌಧ, ಬೆಂಗಳೂರು

ಚಂದ್ರಶೇಖರ ಕಂಬಾರ 'ನಾಯೀಕತೆ' ನಾಟಕ ಪ್ರದರ್ಶನ ಚಂದ್ರಶೇಖರ ಕಂಬಾರ 'ನಾಯೀಕತೆ' ನಾಟಕ ಪ್ರದರ್ಶನ

'ಸರ್ಗ' ಇದು ಸೈಡ್ ವಿಂಗ್ ಬೆಂಗ್ಳೂರ್ ರಂಗ ತಂಡದ ಹೆಮ್ಮೆಯ ನಾಟಕ. ಭರತ್ ಸ ಜಗ್ಗನ್ನಾಥ್ ಈ ನಾಟಕದ ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ. ಇದೊಂದು ಪ್ರಯೋಗಾತ್ಮಕ ನಾಟಕ ಆಗಿದೆ. ನಾಟಕದ ಒಳಗಡೆ ಒಂದು ನಾಟಕ ನಡೆಯುತ್ತಿರುತ್ತದೆ. ಅದರ ಮೂಲಕ ಪ್ರಸ್ತುತ ರಂಗಭೂಮಿಯಲ್ಲಿ ನಡೆಯುವ ವಿದ್ಯಮಾನವನ್ನು ಪರಿಣಾಮಕಾರಿ ಹೇಳಲಾಗಿದೆ.

sarga kannada play will be held tomorrow september 22th

ಈ ನಾಟಕ ನೋಡಿದವರಿಗೆ ರಂಗಭೂಮಿ ಬಗ್ಗೆ ಗೌರವ ಮೂಡುತ್ತದೆ. ಅದ್ಭುತ ವಿಷಯವನ್ನು ಸಾಕಷ್ಟು ಮನರಂಜನೆ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಅಂದಹಾಗೆ, ಈಗಾಗಲೇ ಆರು ಯಶಸ್ಸಿ ಪ್ರದರ್ಶನ ಕಂಡಿರುವ ಈ ನಾಟಕದ ಏಳನೇ ಮತ್ತು ಎಂಟನೇ ಪ್ರದರ್ಶನ ಈ ಶನಿವಾರ ಅಂದರೆ ನಾಳೆ ಬೆಂಗಳೂರಿನ ಹನುಮಂತ ನಗರದ ಕೆ ಹೆಚ್ ಕಲಾ ಸೌಧದಲ್ಲಿ 4:30 ಹಾಗೂ 7:30ಕ್ಕೆ (ಎರಡು ಪ್ರದರ್ಶನ) ನಡೆಯಲಿದೆ. 'ಒಂದಲ್ಲಾ ಎರಡಲ್ಲಾ' ಸಿನಿಮಾ ಖ್ಯಾತಿಯ ನಟ ಹಾಗೂ ರಂಗಭೂಮಿ ಕಲಾವಿದ ಆನಂದ್ ತುಮಕೂರು ನಾಟಕ ನೋಡಲು ಬರುತ್ತಿದ್ದಾರೆ.

ನಾಳೆ ನಡೆಯಲಿದೆ 'ಸರ್ಗ' ನಾಟಕ: ಹೇಳಲಿದೆ ಅದು ರಂಗಭೂಮಿಯ ಕೌತುಕನಾಳೆ ನಡೆಯಲಿದೆ 'ಸರ್ಗ' ನಾಟಕ: ಹೇಳಲಿದೆ ಅದು ರಂಗಭೂಮಿಯ ಕೌತುಕ

ಅಂದಹಾಗೆ, ಎಂ ಎಂ ಶೈಲೇಶ್ ಕುಮಾರ್, ಕೃಷ್ಣಾನಂದ, ಲತಾ ಸರ್ವೇಶ್, ವಸಂತ್, ಆದಿತ್ಯ ಭಾರದ್ವಾಜ್, ಅಶ್ವಿತಾ ಹೆಗ್ಡೆ, ಸಿಂಚನ ಶೈಲೇಶ್, ವಿಶ್ವತಾ ಹೆಗ್ಡೆ, ಶಿಶಿರ್, ದಯಾನಂದ್ ಸಾಗರ್, ಗುರು ಪ್ರಸಾದ್, ನಿಶ್ಚಲ್ ಮುಧೋಳ್, ನಾಗರಾಜ್, ಚಿರಾಗ್ ಚಂದ್ರಶೇಖರ್ ಹಾಗೂ ನವೀನ್ ನಾಟಕದಲ್ಲಿ ನಟಿಸಿದ್ದಾರೆ.

sarga kannada play will be held tomorrow september 22th

ಸೈಡ್ ವಿಂಗ್ ಬೆಂಗ್ಳೂರ್ ರಂಗ ತಂಡದ ಈಗಾಗಲೇ 'ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್' 'ಇಲ್ಲ ಅಂದ್ರೆ ಇದೆ', 'ಸಡನ್ನಾಗ್ ಸತ್ತೋದ್ರೆ??' 'ನಾಯೀಕತೆ' ಸೇರಿದಂತೆ ಅನೇಕ ಒಳ್ಳೆ ಒಳ್ಳೆಯ ನಾಟಕಗಳನ್ನು ಮಾಡಿದೆ. ಈ ಎಲ್ಲ ನಾಟಕಗಳನ್ನು ಎಂ ಶೈಲೇಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ.

ಸೈಡ್ ವಿಂಗ್ ಬೆಂಗ್ಳೂರ್ ರಂಗತಂಡದ ಮುಂದಿನ ನಾಟಕ ಗಿರೀಶ್ ಕಾರ್ನಾಡರ 'ರಾಕ್ಷಸ ತಂಗಡಿ' ಆಗಿದ್ದು, ಈ ನಾಟಕ ಡಿಸೆಂಬರ್ ನಲ್ಲಿ ಪ್ರದರ್ಶನ ಆಗಲಿದೆ.

English summary
'Sarga' kannada play will be held Tomorrow (September 22th) in kh kala soudha, Bengaluru. The play is directed by Bharath Sa Jagannath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X