ಬಿಬಿಎಂಪಿ ಉಪ ಚುನಾವಣೆ: ಬಿಜೆಪಿ ತೆಕ್ಕೆಗೆ ಲಕ್ಕಸಂದ್ರ ವಾರ್ಡ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 23: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 146ನೇ ವಾರ್ಡಿಗೆ (ಲಕ್ಕಸಂದ್ರ) ನಡೆದ ಉಪ ಚುನಾವಣೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿ ಸರಳಾ ಮಹೇಶ್ ಬಾಬು ಅವರು ಜಯಭೇರಿ ಬಾರಿಸಿದ್ದಾರೆ.

ದಿವಂಗತ ಕಾರ್ಪೊರೇಟರ್ ಮಹೇಶ್‌ಬಾಬು ಅವರ ಪತ್ನಿ ಸರಳಾ ಅವರು 7638 ಮತಗಳನ್ನು ಪಡೆದರೆ, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಮಾಜಿ ಸದಸ್ಯ ಬಿ.ಮೋಹನ್‌ ಅವರು 5229 ಮತಗಳನ್ನು ಮಾತ್ರ ಗಳಿಸಿ ಸೊಲೊಪ್ಪಿಕೊಂಡಿದ್ದಾರೆ.[ಕಾರ್ಪೊರೇಟರ್ ಮಹೇಶ್ ಸಾವು, ಲಕ್ಕಸಂದ್ರದಲ್ಲಿ ಆಪ್ತರ ಆಕ್ರಂದನ]

Sarala Mahesh of the BJP wins By-election for lakkasandra ward

ಬೆಂಗಳೂರು- ಮೈಸೂರು ಹೆದ್ದಾರಿಯ ಶ್ರೀರಂಗಪಟ್ಟಣದ ಗೌರಿಪುರ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಕಾರ್ಪೋರೇಟರ್ ಮಹೇಶ್ ಬಾಬು(ಬಿಜೆಪಿ) ಸೇರಿದಂತೆ ಮೂವರು ಜುಲೈ 17 ರಂದು ಸಾವನ್ನಪ್ಪಿದ್ದರು.

ಬಿಜೆಪಿ ಕಾರ್ಪೋರೇಟರ್‌ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಮರು ಚುನಾವಣೆ ನಡೆಸಲಾಯಿತು. ಲಕ್ಕಸಂದ್ರ ವಾರ್ಡಿನಲ್ಲಿ ಒಟ್ಟು 29 ಸಾವಿರ ಮತದಾರರಿದ್ದು, ನವೆಂಬರ್ 20ರಂದು ಶೇ 45.63 ಮತದಾನವಾಗಿತ್ತು. ನವೆಂಬರ್ 23ರಂದು ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗಿದೆ.

ಉಳಿದಂತೆ ಪರ್ವೇಜ್‌ ಅಹ್ಮದ್‌ (ಜೆಡಿಎಸ್‌), ರಫಿವುಲ್ಲಾ ಖಾನ್‌, ಎನ್‌.ಎಸ್‌. ಮುನಿರಾಜು, ಶೇಖ್‌ ಅಬ್ದುಲ್ಲಾ (ಮೂವರೂ ಪಕ್ಷೇತರರು) ಕಣದಲ್ಲಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
By-election results for ಳ್akkasandra ward of BBMP announced today(November 23). Sarala Mahesh of the BJP has won with a margin of 2414 votes with total of 7638 votes leaving Congress' Mohan behind with 5229 votes.
Please Wait while comments are loading...