ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವಿ ಕುಲಪತಿ ಎಂದು ವಂಚಿಸುತ್ತಿದ್ದ ವ್ಯಕ್ತಿ ಬಂಧನ|

By Mahesh
|
Google Oneindia Kannada News

ಬೆಂಗಳೂರು, ಜೂನ್ 27: ಪಶ್ಚಿಮ ಬಂಗಾಳ ಮೂಲದ 35 ವರ್ಷ ವಯಸ್ಸಿನ ಸಂತೋಷ್ ಲೋಹಾರ್ ಎಂಬಾತ ವಿಶ್ವವಿದ್ಯಾಲಯದ ಕುಲಪತಿ ಎಂಬಂತೆ ಪೋಸ್ ನೀಡಿ ಕೋಟ್ಯಂತರ ರುಪಾಯಿ ವಂಚಿಸಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ವೈದ್ಯಕೀಯ ಮತ್ತಿತರ ಕೋರ್ಸ್ ನಡೆಸಲು ಅನುಮತಿ ನೀಡುವುದಾಗಿ ಹಲವು ಪ್ರತಿಷ್ಠಿತ ಕಾಲೇಜುಗಳಿಂದ ಕೋಟ್ಯಂತರ ರೂಪಾಯಿ ಪಡೆದುಕೊಂಡಿರುವ ಆರೋಪದ ಮೇಲೆ ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ.

ನಗರ ಹಲವು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದ ನಕಲಿ ಕುಲಪತಿಯೊಬ್ಬನನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿ, 8.9 ಲಕ್ಷ ರೂ. ನಗದು ಹಾಗೂ ಹಲವು ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.

ನಿವೃತ್ತ ಐಎಎಸ್ ಅಧಿಕಾರಿಯೊಬ್ಬರನ್ನು ತನ್ನ ಅಧೀನದಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದ ಈತ, ತನ್ನ ಕಾರಿನ ಮೇಲೆ ಸರ್ಕಾರದ ಚಿಹ್ನೆ ಹಾಗೂ ಕೆಂಪುಗೂಟವನ್ನು ಅಳವಡಿಸಿಕೊಂಡು ತಿರುಗುತ್ತಿದ್ದ. ಈತನನ್ನು ನೋಡಿದ ಕೆಲವು ಸ್ಥಳೀಯ ಪೊಲೀಸರು ಈತನಿಗೆ ಸೆಲ್ಯೂಟ್ ಮಾಡುತ್ತಿದ್ದರು

Santosh Lohar posing as VC arrested JP Nagar Police

ಚೆನ್ನೈನ ಏರಿಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಟಿ.ಸಿ. ಅರಿವಳಗನ್ ಎಂಬವರಿಗೆ ಆರೋಪಿ ಸಂತೋಷ್ ಅಂತರ್ಜಾಲದ ಮೂಲಕ ಸಂದೇಶ ಕಳುಹಿಸಿ, ತಾನು ವಿಶ್ವವಿದ್ಯಾಲಯದಿಂದ ಹೊಸದಾಗಿ ಬಯೋ ಮೆಡಿಕಲ್ ಮತ್ತು ಪ್ಯಾರಾ ಮೆಡಿಕಲ್, ಬಯೋ ಕೆಮಿಕ್ ನರ್ಸಿಂಗ್ ಕಾಲೇಜುಗಳನ್ನು ತೆರೆಯಲು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿರುವುದಾಗಿ ತಿಳಿಸಿದ್ದ. ಮಾತ್ರವಲ್ಲ ಗೆಜೆಟ್ ಪತ್ರವನ್ನು ನಕಲಿಯಾಗಿ ಸೃಷ್ಟಿಸಿ ವಿ.ವಿ. ಅಸಲಿ ಎಂದು ಹೇಳಿಕೊಂಡಿದ್ದ.

ಕೇರಳದ ಅಟ್ಟಪಡಿ, ತಮಿಳುನಾಡಿನ ವಡಲೂರು, ಆಂಧ್ರಪ್ರದೇಶದ ಚಿತ್ತೂರು ಮುಂತಾದ ಸ್ಥಳಗಳಲ್ಲಿ ಬಯೋ ಮೆಡಿಕಲ್, ಪ್ಯಾರಾ ಮೆಡಿಕಲ್ ಮತ್ತು ಬಯೋ ಕೆಮಿಕ್ ನರ್ಸಿಂಗ್ ಕಾಲೇಜುಗಳನ್ನು ತೆರೆಯಲು ಅರ್ಜಿಗಳನ್ನು ಪಡೆದು ಸ್ಥಳ ಪರಿಶೀಲನೆ ನಡೆಸಿ, ಪ್ರಾಥಮಿಕ ಅನುಮೋದನೆ ನೀಡಿ 74,40,000 ರು. ಪಡೆದುಕೊಂಡಿದ್ದ.

ದಕ್ಷಿಣ ವಿಭಾಗದ ಉಪ ಪೊಲೀಸ್ ಕಮಿಷನರ್ ಡಾ.ಎಸ್.ಡಿ. ಶರಣಪ್ಪ ಮತ್ತು ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಜಿ.ಎಂ. ಕಾಂತರಾಜ್ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಲಾಯಿತು. ಬನ್ನೇರುಘಟ್ಟ ಕಾಳೇನ ಅಗ್ರಹಾರ ಎಂಎಲ್‌ಎ ಬಡಾವಣೆಯ ತಿರುಮಲ ಗಾರ್ಡನ್ ಅಪಾರ್ಟ್‌ಮೆಂಟಿನಲ್ಲಿದ್ದ ಆರೋಪಿ ಸಂತೋಷ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಲ್ಲಾ ಅವ್ಯವಹಾರ ಬೆಳಕಿಗೆ ಬಂದಿದೆ.

ಆತನಿಂದ 8,96,500 ರು .ನಗದು, ಕೇಂದ್ರ ಸರ್ಕಾರದ ಅಶೋಕ ಚಿಹ್ನೆ ಇರುವ ಕಾರು, ವಿವಿಧ ಸೀಲುಗಳು, ಆಕ್ಸಿಸ್ ಬ್ಯಾಂಕಿನ ಕ್ರೆಡಿಟ್ ಕಾರ್ಡ್‌ಗಳು, ವಿವಿಧ ಬ್ಯಾಂಕ್ ಖಾತೆಗಳ ಚೆಕ್ ಬುಕ್‌ಗಳು, ಬ್ಯಾಂಕಿನಲ್ಲಿಟ್ಟಿದ್ದ 27 ಲಕ್ಷ ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು. ಈತನ ಸಹಚರರಾದ ಶಿವಕುಮಾರ್, ಬೋಜ್ ಬಾಬು, ಮಹೇಶ್, ಚಂದ್ರಶೇಖರ್, ಸುಬ್ರತೊ ದಾಸ್ ಹಾಗೂ ರಾಜೇಶ್ ಪತ್ತೆಗೆ ಜೆ.ಪಿ.ನಗರ ಪೊಲೀಸ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ

English summary
The J.P. Nagar police have arrested 35-year-old man, who was posing as a Vice Chancellor. The police said the accused, Santosh Lohar from West Bengal, had duped several students, colleges and universities across the country by promising “permission or approval” to run professional courses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X