ಸಿನ್ಮಾಕ್ಕೂ ಮುನ್ನ 'ಸಂತ್ಯಾಗ ನಿಂತಾನ ಕಬೀರ' ಪುಸ್ತಕ ಬಿಡುಗಡೆ

Posted By:
Subscribe to Oneindia Kannada

ಬೆಂಗಳೂರು, ಮೇ 11: ಹ್ಯಾಟ್ರಿಕ್ ಹೀರೋ ಡಾ . ಶಿವರಾಜ್ ಕುಮಾರ್ ಅಭಿನಯದ "ಸಂತೆಯಲ್ಲಿ ನಿಂತ ಕಬೀರ " ಚಿತ್ರಬಿಡುಗಡೆಗೆ ಸಿದ್ದವಾಗಿದೆ. ಅದಕ್ಕೂ ಮೊದಲು ಈ ಚಿತ್ರದ ಗೀತ ರಚನೆಕಾರ, ರಂಗಕರ್ಮಿ ಗೋಪಾಲ ವಾಜಪೇಯಿ ಅವರು ಅನುವಾದಿಸಿರುವ, ಹೊಸಪೇಟೆಯ ಯಾಜಿ ಪ್ರಕಾಶನ ಪ್ರಕಟಿಸಿರುವ 'ಸಂತ್ಯಾಗ ನಿಂತಾನ ಕಬೀರ' ನಾಟಕ ಕೃತಿ ಲೋಕಾರ್ಪಣೆಗೊಳ್ಳಲಿದೆ.

ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಕೃತಿ ಬಿಡುಗಡೆ ಮಾಡಲಿದ್ದು ಗೀತರಚನಕಾರ ಎಂ. ಎನ್. ವ್ಯಾಸರಾವ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಮತ್ತು ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಘಟಕ ನಿರ್ದೇಶಕ ಸಿ. ಬಸವಲಿಂಗಯ್ಯ ನವರು ವೇದಿಕೆಯನ್ನು ಅಲಂಕರಿಸಲಿದ್ದಾರೆ.[ಸಂತೆಯಲ್ಲಿ ನಿಂತ ಕಬೀರ ಚಿತ್ರದ ಬಗ್ಗೆ ಸಮಗ್ರ ಮಾಹಿತಿ]

Santheyalli Nintha Kabira Kannada Play book release

ಕಾರ್ಯಕ್ರಮ ಮೇ 15 ರಂದು ಬೆಳಗಿನ 10 :00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದ
ಸಮುಚ್ಚಯ ರಂಗಮಂದಿರದಲ್ಲಿ ಜರುಗಲಿದ್ದು ಸಾಹಿತ್ಯಾಸಕ್ತರೆಲ್ಲರೂ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ..

ಯಾಜಿ ಪ್ರಕಾಶನದ 25ನೇ ಪ್ರಕಟನೆ ಇದಾಗಿದ್ದು, ಪುಸ್ತಕದ ಕೊನೆಯಲ್ಲಿ ಕವಿ ಗೋಪಾಲ ವಾಜಪೇಯಿ ಅವರು ಶಿವರಾಜ್ ಕುಮಾರ್ ಅಭಿನಯದ ಚಿತ್ರಕ್ಕೆ ಒದಗಿಸಿರುವ ಗೀತ ಸಾಹಿತ್ಯವನ್ನು ನೀಡಲಾಗಿದೆ. ಕಬಡ್ಡಿ ಬಾಬು ನಿರ್ದೇಶನದ ಸಂತೆಯಲ್ಲಿ ನಿಂತ ಕಬೀರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಪುಸ್ತಕದ ಪ್ರತಿ ಪಡೆಯಬಯಸುವವರು ಯಾಜಿ : 94499 22800 ಸಂಪರ್ಕಿಸಬಹುದು. ಕಲಾಗ್ರಮಕ್ಕೆ ತೆರಳಲು ಗೂಗಲ್ ಮ್ಯಾಪ್ ಇಲ್ಲಿದೆ:

ಭೀಷ್ಮ ಸಹಾನಿ ಅವರ ಮೂಲ ಹಿಂದಿ ನಾಟಕವನ್ನು ಕನ್ನಡಕ್ಕೆ ಗೋಪಾಲ ವಾಜಪೇಯಿ ಅವರು ಅನುವಾದಿಸಿದ್ದಾರೆ. ಜೊತೆಗೆ ಇದೇ ಹೆಸರಿನ ಸಿನಿಮಾಕ್ಕೆ ಗೀತ ಸಾಹಿತ್ಯ ಒದಗಿಸಿದ್ದಾರೆ.

Santheyalli Nintha Kabira Kannada Play book release

'ದೇವದಾಸ್' ಸಿನಿಮಾ ಖ್ಯಾತಿಯ ಇಸ್ಮಾಯಿಲ್ ದರ್ಬಾರ್ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳ ಗುಚ್ಛ ಇಲ್ಲಿದೆ ಆಲಿಸಿ:

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Santheyalli Nintha Kabira Movie starring Shivarajkumar and Sanusha is ready for release. Before the movie release a book by the same name is releasing on May 15 at Kalagrama, Bengaluru. Santyaga nintana Kabira Kannada play translated by Song lyricist, Theatre person Gopal Wajapeyi.
Please Wait while comments are loading...