ಸಮುದಾಯದಿಂದ 'ಮೃತ್ಯುಂಜಯ' ನಾಟಕ ತಪ್ಪದೇ ನೋಡಿ

Posted By:
Subscribe to Oneindia Kannada

ಬೆಂಗಳೂರು, ಫೆ. 25: ನಾಡಿನ ತುಂಬ ಈ ಕಥನವನ್ನು ತಲುಪಿಸುವ ಜವಾಬ್ದಾರಿ ನಿರ್ವಹಿಸುವ ಸಲುವಾಗಿ 'ಸಮುದಾಯ' ನಾಟಕ ತಂಡ ರೆಪರ್ಟರಿ ಕಟ್ಟುತ್ತಿದೆ.ರೆಪರ್ಟರಿಯಲ್ಲಿ ಕನ್ನಡ ಸಾಹಿತ್ಯ ಲೋಕದ ಪ್ರಗತಿಶೀಲ ಜನಪರ ಕಾದಂಬರಿಕಾರ ನಿರಂಜರ ‘ಮೃತ್ಯುಂಜಯ' ಪ್ರದರ್ಶನಗೊಳ್ಳಲಿದೆ.

ಜಾಗತಿಕ ರಂಗ ದಿನಾಚರಣೆಯ ಸಂದೇಶ ನೀಡಿದ ನೋಬಲ್ ಪ್ರಶಸ್ತಿ ವಿಜೇತ ದಾರಿಯೋ ಫೋ ನುಡಿದ ಮಾತು.
"ನಮ್ಮ ಕತೆಯನ್ನು ನಾವು ಹೇಳಬೇಕು. ಯುವಕರನ್ನು ಬಳಸಿಕೊಂಡು ಯುವಕರಿಗೆ ಹೇಳುತ್ತ ಹೋಗಬೇಕು. ಅವರಿಗೆ ನಾಟಕದ ಕಲೆ ಕಲಿಸುವದು ಅಂದರೆ ಅಂಗಾಂಗಗಳನ್ನು ಹೇಗೆ ಬಳಸೋದು, ಎಲ್ಲಿ ಉಸಿರು ಬಿಗಿ ಹಿಡಿಯೋದು, ಎಲ್ಲಿ ದನಿಯನ್ನು ಏರಿಳಿಸಬೇಕು ಎನ್ನುವದನ್ನು ಕಲಿಸುವದಷ್ಟೇ ಅಲ್ಲ. ನಮ್ಮ ಸುತ್ತ ಮುತ್ತ ಏನಾಗುತ್ತಿದೆ ಅನ್ನುವದನ್ನು ಹೇಳಿಕೊಡಬೇಕು.
ಹಾಗೆ ಮಾಡಿದಾಗ ಅವರು ತಮ್ಮ ಕತೆಯನ್ನು ಹೇಳಬಲ್ಲ ಸಮರ್ಥರಾಗುತ್ತಾರೆ. ತನ್ನ ಕಾಲದ ಕುರಿತು ಹೇಳದ ಕತೆಯಾಗಲೀ,
ನಾಟಕವಾಗಲೀ, ಕಲೆಯಾಗಲೀ ಸಮಕಾಲೀನ ಅಲ್ಲ."

'ಸಮುದಾಯ' ಸದಾ ಸಮಕಾಲೀನ ಕಲೆಯಲ್ಲಿಯೇ ಬದುಕು ಕಂಡಿದೆ. ನಾವೀಗ ನಮ್ಮ ಕತೆ ಹೇಳಬೇಕಿದೆ. ಅದಕ್ಕೆ ನಮ್ಮ ಯುವಕರನ್ನು ಸಿದ್ಧಗೊಳಿಸಬೇಕಿದೆ.

Mrityunjaya Kannada Play

ನಾಡಿನ ತುಂಬ ಈ ಕಥನವನ್ನು ತಲುಪಿಸುವ ಜವಾಬ್ದಾರಿ ನಿರ್ವಹಿಸುವ ಸಲುವಾಗಿ 'ಸಮುದಾಯ' ರೆಪರ್ಟರಿ ಕಟ್ಟುತ್ತಿದೆ. ರಂಗಭೂಮಿಯನ್ನು ತನ್ನ ಸಾಂಸ್ಕೃತಿಕ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮವನ್ನಾಗಿಸಲು ಹೊರಟಿದೆ..

ರಂಗಭೂಮಿಗೆ ಇದುವರೆಗಿನ ಶೋಕಿತನಕ್ಕಿಂತ ಬೇರೆಯದೇ ಆದ ಹೊಣೆಗಾರಿಕೆಯೂ ಇದೆ. ಈ ಹೊಣೆಗಾರಿಕೆಯನ್ನು ರಂಗ ಮುಖೇನ ನಿರ್ವಹಿಸಬೇಕಾದ ಜವಾಬ್ದಾರಿಯೂ ಸಮುದಾಯದ ಮೇಲಿದೆ.

ಮುಖ್ಯವಾಗಿ ರಂಗಭೂಮಿ ರೈತರನ್ನೂ, ಶಾಲೆಯನ್ನೂ, ಕಾಲೇಜುಗಳನ್ನೂ, ಕಾರ್ಮಿಕರನ್ನೂ - ಹೀಗೆ ಸಾಮುದಾಯಿಕ ಬದುಕಿನ ಚಾಲನಾ ಶಕ್ತಿಯ ಎಲ್ಲ ಘಟಕಗಳನ್ನೂ ತಲುಪಲೇಬೇಕಿದೆ. ಈ ಕುರಿತು ಸಮುದಾಯ ಯೋಜನೆಯನ್ನು ಹಮ್ಮಿಕೊಳ್ಳಬೇಕಿದೆ. ಅದರ ಪ್ರಮುಖ ಅಂಗ ವಾಗಿ ‘ರೆಪರ್ಟರಿ'ಯನ್ನು ಆರಂಭಿಸುತ್ತಿದೆ.

Samudaya Repertory

ರೆಪರ್ಟರಿಯಲ್ಲಿ ಕನ್ನಡ ಸಾಹಿತ್ಯ ಲೋಕದ ಪ್ರಗತಿಶೀಲ ಜನಪರ ಕಾದಂಬರಿಕಾರ ನಿರಂಜರ ‘ಮೃತ್ಯುಂಜಯ' ಮತ್ತು
‘ಚಿರಸ್ಮರಣೆ' ಕಾದಂಬರಿಗಳನ್ನು ಒಂದುಗೂಡಿಸಿ ರಚಿಸಲಾದ ‘ಮೃತ್ಯುಂಜಯ' ರಂಗರೂಪವು ರೆಪರ್ಟರಿಯ
ಬಹುಮುಖ್ಯ ಆಕರ್ಷಣೆಯಾಗಲಿದೆ.

ಡಾ.ಎಂ.ಜಿ.ಹೆಗಡೆಯವರು ಸಿದ್ಧಪಡಿಸಿರುವ ಈ ರಂಗರೂಪವನ್ನು ರಂಗಭೂಮಿಯಲ್ಲಿ ಈಗಾಗಲೇ ರಂಗ ನಿರ್ದೇಶಕನಾಗಿ ತನ್ನ ಛಾಪು ಮೂಡಿಸಿರುವ ಡಾ.ಶ್ರೀಪಾದ ಭಟ್ ನಿರ್ದೇಶಿಸಿದ್ದಾರೆ. ರಂಗ ವಿನ್ಯಾಸವನ್ನು ರಂಗಭೂಮಿಯ ಹಿರಿಯ ಚೇತನ ಎಂ.ಎಸ್.ಸತ್ಯು ಅವರು ಸಿದ್ಧಪಡಿಸಿದ್ದಾರೆ.

*ಮೃತ್ಯುಂಜಯ *

ಮೂಲ : ನಿರಂಜನ ರ *ಚಿರಸ್ಮರಣೆ* ಮತ್ತು *ಮೃತ್ಯುಂಜಯ* ಕಾದಂಬರಿ ಆಧಾರಿತ

ರಂಗ ಪಠ್ಯ : ಡಾ . ಎಮ್. ಜಿ. ಹೆಗಡೆ

ಪ್ರಸ್ತುತಿ : ಸಮುದಾಯ ಕರ್ನಾಟಕ ರೆಪರ್ಟರಿ

ರಂಗ ವಿನ್ಯಾಸ : ಎಮ್. ಎಸ್. ಸತ್ಯು

ನಿರ್ದೇಶನ : ಡಾ.ಶ್ರೀಪಾದ ಭಟ್

ಟಿಕೆಟ್‌ದರ : ರೂ. 100/-

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 9449528643, 9900182400

ವೆಬ್ ಸೈಟ್ : www.bookmyshow.com ; www.filmysphere.com

Samudaya Repertory

ಸ್ಥಳ : *ಸಾಂಸ್ಕೃತಿಕ ಸಮುಚ್ಚಯ , ಕಲಾಗ್ರಾಮ *: ಸಮಯ : 27/02/2016 , ಸಂಜೆ 7:00

ಸ್ಥಳ : *ರಂಗಶಂಕರ * : ಸಮಯ : 28/02/2016 ,ಮಧ್ಯಾಹ್ನ 3:30 , ಸಂಜೆ 7:30

*ಸಮುದಾಯ ರೆಪರ್ಟರಿ ತಿರುಗಾಟ ದ ಸಮಾರೋಪ ಸಮಾರಂಭ *

ಸ್ಥಳ : ರವೀಂದ್ರ ಕಲಾಕ್ಷೇತ್ರ : ಸಮಯ : 29/02/2016 , ಸಂಜೆ 5:00

*ಸಮಾರೋಪ ಮಾತುಗಳು : ಎಂ.ಎಸ್ . ಸತ್ಯು *

*ಮುಖ್ಯ ಅತಿಥಿಗಳು : *

1. *ಶ್ರೀಮತಿ ಉಮಾಶ್ರೀ , ಮಾನ್ಯ ಸಚಿವರು ಕನ್ನಡ ಸಂಸ್ಕೃತಿ ಇಲಾಖೆ , ಕರ್ನಾಟಕ
ಸರ್ಕಾರ *
2. *ಡಾ . ಸಿ.ವೀರಣ್ಣ - ಅಧ್ಯಕ್ಷರು , ಕರ್ನಾಟಕ ಸಾಹಿತ್ಯ ಪರಿಷತ್ತು *
3. *ಡಾ . ಎಮ್. ಜಿ. ಹೆಗಡೆ - ಪ್ರಾಧ್ಯಾಪಕರು - ಕುಮಟಾ *

*ಅಧ್ಯಕ್ಷತೆ : ಪ್ರೋ . ಆರ್.ಕೆ. ಹುಡ್ಗಿ - ಅಧ್ಯಕ್ಷರು , ಸಮುದಾಯ ಕರ್ನಾಟಕ *

ನಾಟಕ ಪ್ರದರ್ಶನ : *ಮೃತ್ಯುಂಜಯ* : ಸಮಯ : ಸಂಜೆ 7:00

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :9448072431
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Rajya Samudaya Repertory will perform ‘Mrityunjaya’ directed by Sripad Bhat, on February 27 and 28 at Kalagrama and Ranga Shankara, Bengaluru.
Please Wait while comments are loading...